ಚಾಮರಾಜನಗರ: ಪೊಲೀಸ್ ಠಾಣೆಯಿಂದಲೇ ಬೈಕ್ ಕಳ್ಳತನ! ಇಬ್ಬರು ಖದೀಮರ ಬಂಧನ

ಸತ್ಯಮಂಗಲ ಹೆದ್ದಾರಿಯ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಖಾನ್ (28) ಮತ್ತು ಇಮ್ರಾನ್ (30) ಬಂಧಿತ ಆರೋಪಿಗಳಾಗಿದ್ದಾರೆ.
CCTV Footage
ಪೊಲೀಸ್ ಠಾಣೆ ಕಾಂಪೌಂಡ್ ಹಾರುತ್ತಿರುವ ಕಳ್ಳರ ಚಿತ್ರ ಸಿಸಿಟಿವಿಯಲ್ಲಿ ಸೆರೆ
Updated on

ಚಾಮರಾಜನಗರ: ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಬೈಕ್ ಗಳ ಕಳ್ಳತನವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಸತ್ಯಮಂಗಲ ಹೆದ್ದಾರಿಯ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ತಡೆ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಫ್ರೋಜ್ ಖಾನ್ (28) ಮತ್ತು ಇಮ್ರಾನ್ (30) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಶನಿವಾರ ಮುಂಜಾನೆ ಠಾಣೆಯ ಕಾಂಪೌಂಡ್ ಜಿಗಿದು ಹೊರಗಡೆ ಹೋದ ಕಳ್ಳರು, ಗೇಟ್ ಬೀಗವನ್ನು ರಾಡಿನಿಂದ ಮುರಿದು ಒಳ ಬಂದಿದ್ದಾರೆ. ಬಳಿಕ ಠಾಣೆಯ ಶೆಡ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೇಟ್ ಬೀಗ ಮುರಿದಿರುವುದನ್ನು ಗಮಿಸಿದ ಕಾನ್ಸ್ ಟೇಬಲ್ ಸ್ಛಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಠಾಣೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿತ್ತು.

CCTV Footage
ತಿರುಮಲ ದೇವಸ್ಥಾನದಲ್ಲಿ ಚಿನ್ನಾಭರಣ ಕಳ್ಳತನ; ಟಿಟಿಡಿ ಹೊರಗುತ್ತಿಗೆ ಸಿಬ್ಬಂದಿ ಬಂಧನ

ಗೇಟ್ ಬೀಗ ಮುರಿದಿರುವುದನ್ನು ಗಮಿಸಿದ ಕಾನ್ಸ್ ಟೇಬಲ್ ಸ್ಛಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರು, ಠಾಣೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com