ಅಕ್ರಮ ಸಭೆ, ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ದೂರು: ಸಮುದಾಯದ ಯುವಕರಿಗೆ ಮುಸ್ಲಿಂ ಧರ್ಮಗುರುಗಳ ಎಚ್ಚರಿಕೆ

ರಸ್ತೆಗಳು ಹಾಗೂ ಫ್ಲೈಓವರ್‌ಗಳಲ್ಲಿ ವೀಲಿಂಗ್ ಸವಾರಿ ಮಾಡುವುದು ಸಾಹಸ ಮಾಡುವವರಿಗೆ ಮಾತ್ರವಲ್ಲದೆ ಇತರ ವಾಹನ ಚಾಲಕರಿಗೂ ಹಾನಿಕಾರಕ ಎಂದು ಹೇಳಿದರು.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮುಸ್ಲಿಂ ಹಬ್ಬವಾದ ಶಬಾನ್ ಆಚರಣೆ ಸಮಯ ಹತ್ತಿರ ಬರುತ್ತಿದ್ದಂತೆ, ಬೆಂಗಳೂರಿನಾದ್ಯಂತ 400 ಕ್ಕೂ ಹೆಚ್ಚು ಮಸೀದಿಗಳಲ್ಲಿ ವಿದ್ವಾಂಸರು, ನಾಯಕರು ಮತ್ತು ಮೌಲ್ವಿಗಳು ವಿಶೇಷ ಧರ್ಮೋಪದೇಶಗಳನ್ನು ನಡೆಸಿದರು ತಪ್ಪಾಗಿ ಸಭೆ ಸೇರಿ ವೀಲಿಂಗ್ ಸವಾರಿ ಮಾಡುವಂತಹ ಅಪಾಯಕಾರಿ ಕೃತ್ಯಗಳನ್ನು ಮಾಡಿದರೆ ಪೊಲೀಸರಿಗೆ ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಪ್ರಧಾನಿ ವಿ.ಪಿ. ಸಿಂಗ್ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಸೈಯದ್ ಅಶ್ರಫ್ ಮಾತನಾಡಿ ರಸ್ತೆಗಳು ಹಾಗೂ ಫ್ಲೈಓವರ್‌ಗಳಲ್ಲಿ ವೀಲಿಂಗ್ ಸವಾರಿ ಮಾಡುವುದು ಸಾಹಸ ಮಾಡುವವರಿಗೆ ಮಾತ್ರವಲ್ಲದೆ ಇತರ ವಾಹನ ಚಾಲಕರಿಗೂ ಹಾನಿಕಾರಕ ಎಂದು ಹೇಳಿದರು. ಒಂದು ವೇಳೆ ಈ ರೀತಿ ಕೃತ್ಯ ನಮ್ಮ ಗಮನಕ್ಕೆ ಬಂದರೆ ನಾವು ಪೊಲೀಸರಿಗೆ ಕರೆ ಮಾಡಿ ಎಫ್‌ಐಆರ್ ದಾಖಲಿಸುತ್ತೇವೆ ಎಂದು ಅಶ್ರಫ್ ಹೇಳಿದರು.

ಪ್ರಾರ್ಥನೆಯ ಸಮಯದಲ್ಲಿ ರಾತ್ರಿಯಲ್ಲಿ ಗ್ಯಾಂಗ್‌ಗಳು ಸುತ್ತಾಡುವುದನ್ನು ನೋಡಿದರೆ ಸ್ಥಳೀಯ ಪೊಲೀಸರಿಗೆ ತಿಳಿಸಲು ಬೆಂಗಳೂರಿನಾದ್ಯಂತ ಸಮುದಾಯಕ್ಕೆ ಮಾಹಿತಿ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ನಗರ ಮಾರುಕಟ್ಟೆಯ ಜಾಮಿಯಾ ಮಸೀದಿಯ ಮುಖ್ಯ ಅರ್ಚಕ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಕಳೆದ ವಾರದಿಂದ, ವೀಲಿಂಗ್ ಟ್ರಿಪಲ್ ರೈಡಿಂಗ್ ಅಥವಾ ಸಾರ್ವಜನಿಕ ತೊಂದರೆ ನೀಡದಂತೆ ಧರ್ಮೋಪದೇಶ ನೀಡಲಾಗುತ್ತಿದೆ ಎಂದು ಹೇಳಿದರು.

ಗುಂಪು ಗುಂಪುಗಳಾಗಿ ಸುತ್ತಾಡುವುದು, ಗಲಾಟೆ ಮಾಡುವುದು ಮತ್ತು ಇತರ ಧರ್ಮಗಳ ಸದಸ್ಯರಿಗೆ ತೊಂದರೆ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ ಏಕೆಂದರೆ ಇದು ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತದೆ. ಹಿರಿಯರು ತಮ್ಮ ಯುವಕರು ಮತ್ತು ಹುಡುಗರನ್ನು ಮನೆಯಲ್ಲಿಯೇ ಶಿಸ್ತುಬದ್ಧ ನಡವಳಿಕೆ ಕಲಿಸಲು ಸಲಹೆ ನೀಡಲಾಗುತ್ತದೆ, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.

Representational image
ದೇವನಹಳ್ಳಿ: ವ್ಹೀಲಿಂಗ್ ಹುಚ್ಚಾಟ; ಟ್ರಕ್‌ಗೆ ಸ್ಕೂಟರ್ ಡಿಕ್ಕಿ; ಇಬ್ಬರು ಯುವಕರು ಸಾವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com