
ಚಿತ್ರದುರ್ಗ: ಮೈಸೂರು ರಾಜಮನೆತನದ ವಿರುದ್ಧ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಿ ಮತ್ತು ರಾಜಮನೆತನಕ್ಕೆ ಸೂಕ್ತ ಗೌರವ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬುಧವಾರ ಸಲಹೆ ನೀಡಿದ್ದಾರೆ.
ಭರಮಸಾಗರ ಗ್ರಾಮದಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಸಾಮ್ರಾಜ್ಯವು ಕರ್ನಾಟಕದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದೆ ಮತ್ತು ಇಡೀ ರಾಜ್ಯವನ್ನು ಭಾರತದ ಒಕ್ಕೂಟಕ್ಕೆ ದಾನ ಮಾಡಿದೆ, ಆದ್ದರಿಂದ ರಾಜಮನೆತನಕ್ಕೆ ತೊಂದರೆ ನೀಡದಿರುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಸಾರ್ವಜನಿಕರನ್ನು ಒತ್ತಾಯಿಸಿದರು.
ವಿವಾದಗಳನ್ನು ಕೊನೆಗೊಳಿಸಲು ರಾಜಮನೆತನದವರೊಂದಿಗೆ ಮಾತುಕತೆ ನಡೆಸುವಂತೆ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಮೈಸೂರು ರಾಜಮನೆತನದ ಮೇಲಿನ ಎಲ್ಲಾ ಪ್ರಕರಣಗಳನ್ನೇಕೆ ಹಿಂಪಡೆಯಲು ಸಾಧ್ಯವಿಲ್ಲ? ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ವಿಚಾರವನ್ನು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.
ಚುನಾವಣಾ ಕುರಿತು ಮಾತನಾಡಿ, ಇತ್ತೀಚೆಗಿನ ಸ್ವರೂಪವು ನನ್ನನ್ನು ಮತ್ತು ಇಡೀ ಸಮಾಜವನ್ನು ಅಸಹ್ಯಪಡಿಸಿದೆ. ಹಾಲಿ ಚುನಾಯಿತ ಪ್ರತಿನಿಧಿಯ ಮರಣದ ಸಂದರ್ಭದಲ್ಲಿ ಮರುಚುನಾವಣೆ ನಡೆಸುವ ಬದಲು ಎರಡನೇ ಸ್ಥಾನದಲ್ಲಿರುವ ವ್ಯಕ್ತಿಗೆ ಕ್ಷೇತ್ರದ ಅಧಿಕಾರ ನೀಡಬೇಕು. ಇಂಗ್ಲೆಂಡಿನಲ್ಲ ರಾಜಪ್ರಭುತ್ವದ ಜೊತೆಗೆ ಪ್ರಜಾಪ್ರಭುತ್ವವೂ ಇದೆ. ಅದೇ ರೀತಿ ರಾಜಮನೆತನದವರನ್ನು ರಾಜ್ಯದ ಗವರ್ನರ್ ಆಗಿ ನೇಮಿಸಿಕೊಳ್ಳಬೇಕು, ರಾಜ್ಯ ಸರ್ಕಾರವು ಗವರ್ನರ್ ಸ್ಥಾನವನ್ನು ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಕೊಳಕು ರಾಜಕೀಯ ಎಂದರು.
Advertisement