
ಚಾಮರಾಜನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದೆ.
ಹೌದು.. ಸಾವು ಯಾವಾಗ ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ.. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದೆ.
ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಹಠಾತ್ ಹೃದಯಾಘಾತ (heart attack) ಉಂಟಾಗಿರುವಂತಹ ಘಟನೆ ಚಾಮರಾಜನಗರದ ಕೇಕ್ ವಲ್ಡ್ ಬೇಕರಿಯಲ್ಲಿ ನಡೆದಿದೆ. ಗ್ರಾಹಕರಿಗೆ ಸ್ವೀಟ್ಸ್ ಪಾರ್ಸಲ್ಮಾಡುವ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿ ಸ್ಥಳದಲ್ಲೇ ಕುಸಿದಿದ್ದಾರೆ. ಮೃತ ವ್ಯಕ್ತಿಯನ್ನು ಕೇರಳ ಮೂಲದ ವೇಣುಗೋಪಾಲ್(56) ಎಂದು ಗುರುತಿಸಲಾಗಿದೆ.
ವೇಣುಗೋಪಾಲ್ ಕಳೆದ 5 ವರ್ಷದಿಂದ ಈ ಕೇಕ್ವಲ್ಡ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಿನ್ನೆ ಬೇಕರಿಯಲ್ಲಿ ಕೆಲಸ ಮಾಡುವಾಗಲೇ ಹೃದಯಾಘಾತಕ್ಕೀಡಾಗಿ ಕುಸಿದು ಸಾವನ್ನಪ್ಪಿದ್ದಾರೆ. ಫೆಬ್ರವರಿ 12ರ ಸಂಜೆ 7.30ರ ಸುಮಾರಿಗೆ ಗ್ರಾಹಕರಿಗೆ ಸ್ವೀಟ್ ಪಾರ್ಸಲ್ ಮಾಡಿ ಕೊಡುವಾಗ ವೇಣುಗೋಪಾಲ್ ಏಕಾಏಕಿ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರಿಶೀಲನೆ ನಡೆಸಿ, ಮೃತಪಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಚಾಮರಾಜನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
Advertisement