ಹೊಗೇನೆಕಲ್ ಪ್ರವಾಸೋದ್ಯಮ ಉತ್ತೇಜಿಸಲು ಕರ್ನಾಟಕ ಮುಂದು!

ಕಾವೇರಿ ನದಿಯಿಂದ ಸೃಷ್ಟಿಸಲ್ಪಟ್ಟ ಸುಂದರವಾದ ಜಲಪಾತಗಳಿಗೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರು ತಮಿಳುನಾಡಿನ ಧರ್ಮಪುರಿಗೆ ದೋಣಿ ಸವಾರಿಗಳು, ಚಾರಣ ಮತ್ತು ಜಲ ಕ್ರೀಡೆಗಳನ್ನು ಆನಂದಿಸಲು ಹೋಗುತ್ತಾರೆ.
Hogenakkal Falls
ಹೊಗೇನೆಕಲ್ ಫಾಲ್ಸ್
Updated on

ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ನೆರೆಯ ತಮಿಳುನಾಡಿನೊಂದಿಗೆ ಸ್ಪರ್ಧೆಯನ್ನು ಪ್ರೋತ್ಸಾಹಿಸಲು, ರಾಜ್ಯ ಪ್ರವಾಸೋದ್ಯಮ ಇಲಾಖೆಯು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಹೊಗೇನಕಲ್ ಜಲಪಾತದ ಪ್ರವಾಸ ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು ವಿವರವಾದ ವರದಿಯನ್ನು ರೂಪಿಸುತ್ತಿದೆ.

ಕಾವೇರಿ ನದಿಯಿಂದ ಸೃಷ್ಟಿಸಲ್ಪಟ್ಟ ಸುಂದರವಾದ ಜಲಪಾತಗಳಿಗೆ ಭೇಟಿ ನೀಡುವ ಕರ್ನಾಟಕದ ಪ್ರವಾಸಿಗರು ತಮಿಳುನಾಡಿನ ಧರ್ಮಪುರಿಗೆ ದೋಣಿ ಸವಾರಿ, ಚಾರಣ ಮತ್ತು ಜಲ ಕ್ರೀಡೆ ಆನಂದಿಸಲು ಹೋಗುತ್ತಾರೆ. ಕರ್ನಾಟಕದಿಂದ ಪ್ರವೇಶವಿದೆ, ಆದರೆ ಕಾವೇರಿ ವನ್ಯಜೀವಿ ಅಭಯಾರಣ್ಯ ಅರಣ್ಯ ಪ್ರದೇಶದ ಮೂಲಕ ನಿರ್ಬಂಧ ಏರಲಾಗಿದೆ.

"ರಾಜ್ಯದಿಂದ ಈ ಸ್ಥಳಕ್ಕೆ ಜನರ ಸಂಖ್ಯೆ ಹೆಚ್ಚಾಗುವುದನ್ನು ನಾವು ಬಯಸುತ್ತೇವೆ. ಅರಣ್ಯ ಇಲಾಖೆಯನ್ನು ಒಳಗೊಂಡ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸುತ್ತೇವೆ. ಇದರಿಂದ ತಮಿಳುನಾಡಿನೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡುವುದಲ್ಲದೆ, ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ" ಎಂದು ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲಾಖೆಯ ಅಧಿಕಾರಿಗಳು ಅನುಮತಿಗಾಗಿ ಸರ್ಕಾರದ ಮುಂದೆ ಇಡಲು 12 ಕೋಟಿ ರೂ. ವೆಚ್ಚದ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ. ವರದಿಯು ಗಜೆಬೋ, ಪಾರ್ಕಿಂಗ್ ಸೌಲಭ್ಯ, ಮನರಂಜನಾ ಕೇಂದ್ರ, ವಿಶ್ರಾಂತಿ ಕೊಠಡಿಗಳು, ಫುಡ್ ಕೋರ್ಟ್ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ನಿರ್ಮಿಸಲಾಗುತ್ತದೆ. ಇದರೊಂದಿಗೆ, ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳಲ್ಲಿನ ಸೌಲಭ್ಯಗಳ ಸುಧಾರಣೆಗೆ ಯೋಜನಾ ವರದಿಯನ್ನು ಸಹ ಸಿದ್ಧಪಡಿಸಲಾಗುತ್ತಿದೆ.

Hogenakkal Falls
ಶೀಘ್ರದಲ್ಲೇ ಹೊಗೇನಕಲ್ ಸಫಾರಿ ಆರಂಭ: ದಂತಚೋರ ವೀರಪ್ಪನ್ ಅಡಗುತಾಣಗಳ ದರ್ಶನ!

ಅತಿಥಿ ಗೃಹ ಮತ್ತು ಚಾರಣ ಸೌಲಭ್ಯಗಳನ್ನು ಸ್ಥಾಪಿಸುವುದರಿಂದ ಈ ಪ್ರದೇಶದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರವಾಸಿಗರಿಗೆ ಸಂಪೂರ್ಣ ಪ್ಯಾಕೇಜ್ ನೀಡಬಹುದು. ಬೆಂಗಳೂರು ಮತ್ತು ಮೈಸೂರಿಗೆ ಹತ್ತಿರದಲ್ಲಿರುವುದರಿಂದ ಈ ಸ್ಥಳ ಸೂಕ್ತವಾಗಿದೆ ಎಂದು ಅಧಿಕಾರಿ ಹೇಳಿದರು.

ಹಲವು ಸಂದರ್ಭಗಳಲ್ಲಿ ಪ್ರವಾಸಿಗರು ಶೋಷಣೆಗೊಳಗಾಗುತ್ತಿದ್ದಾರೆ ಮತ್ತು ಹೆಚ್ಚುವರಿ ಹಣವನ್ನು ವಿಧಿಸಲಾಗುತ್ತಿದೆ ಎಂದು ಇಲಾಖೆಗೆ ಅನೇಕ ದೂರುಗಳು ಕೇಳಿ ಬಂದಿವೆ. ಇದನ್ನು ತಮಿಳುನಾಡು ಸರ್ಕಾರ ನಿರ್ವಹಿಸುತ್ತಿದೆ ಎಂದು ಹೇಳಿ ನಾವು ಯಾವಾಗಲೂ ಅವರನ್ನು ಸಮಾಧಾನ ಪಡಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com