ಬೆಳಗಾವಿ: ತನ್ನ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ತಂದೆ; ಪತಿಯನ್ನು ಕೊಂದ ಪತ್ನಿಯ ಬಂಧನ

ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯಿಂದ ತೀವ್ರ ತೊಂದರೆಗೊಳಗಾಗಿದ್ದ ಪತ್ನಿ, ಲೈಂಗಿಕ ದೌರ್ಜನ್ಯದಿಂದ ತನ್ನ ಮಗಳನ್ನು ರಕ್ಷಿಸಲೆಂದು ಆತನನ್ನೇ ಹತ್ಯೆ ಮಾಡಿದ್ದಾಳೆ.
Srimant Itnal and his wife Savitri
ಶ್ರೀಮಂತ ಇಟ್ನಾಳ್, ಸಾವಿತ್ರಿ
Updated on

ಬೆಳಗಾವಿ: ತನ್ನ ಮಗಳ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ ತಂದೆಯನ್ನು ಕೊಂದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಚಿಕ್ಕೋಡಿ ಸಮೀಪದ ಉಮರಾಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಮ್ಮ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ಶ್ರೀಮಂತ ಇಟ್ನಾಳ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಆತನ ಪತ್ನಿ ಸಾವಿತ್ರಿ ಎಂಬುವವರು ಕೊಂದಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರ ಪ್ರಕಾರ, ಕುಡಿತದ ಚಟಕ್ಕೆ ಬಿದ್ದಿದ್ದ ಶ್ರೀಮಂತ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದನ್ನ ಸಹಿಸಲಾಗದೆ ಸಾವಿತ್ರಿ ಮಧ್ಯಪ್ರವೇಶಿಸಿ, ಭಾರವಾದ ವಸ್ತುವಿನಿಂದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಶ್ರೀಮಂತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.

ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆಕೆ, ಆತನ ದೇಹವನ್ನು ತುಂಡರಿಸಿ ಹತ್ತಿರದ ಕೃಷಿಭೂಮಿಯಲ್ಲಿ ಎಸೆದಿದ್ದಳು. ಯಾರೋ ಕೊಂದಿದ್ದಾರೆ ಎಂದು ಆರೋಪಿಸುವ ಮೂಲಕ ಆಕೆ ಅಧಿಕಾರಿಗಳನ್ನು ದಾರಿತಪ್ಪಿಸಲು ಯತ್ನಿಸಿದಳು ಎಂದು ಪೊಲೀಸ್ ತನಿಖೆಗಳು ತಿಳಿಸಿವೆ.

ಘಟನೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿದ ಸಾವಿತ್ರಿ, ಆಯುಧವನ್ನು ಬಚ್ಚಿಟ್ಟಿದ್ದಳು. ಮೃತ ಪತಿಯ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದ ಸಾವಿತ್ರಿ, ಘಟನೆಗೆ ಸಂಬಂಧಿಸಿದ ಯಾವುದನ್ನೂ ಯಾರಿಗೂ ಬಹಿರಂಗಪಡಿಸದಂತೆ ಮಗಳಿಗೆ ಸೂಚಿಸಿದ್ದಳು. ಶವವನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯನ್ನು ಬಂಧಿಸಿದ್ದಾರೆ.

ವಿಚಾರಣೆ ಸಮಯದಲ್ಲಿ, ಆಕೆ ತನ್ನ ಮಗಳನ್ನು ರಕ್ಷಿಸಲು ಆತನನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಚಿಕ್ಕೋಡಿ ಪೊಲೀಸರು ಸಾವಿತ್ರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಯು ಕುಡುಕನಾಗಿದ್ದು, ಪತ್ನಿಯೊಂದಿಗೆ ಸದಾ ಜಗಳವಾಡುತ್ತಿದ್ದ. ಮದ್ಯಕ್ಕೆ ಹಣ ನೀಡುವಂತೆ ಮತ್ತು ಬೈಕ್ ಕೊಡಿಸುವಂತೆ ಆಕೆಯನ್ನು ಒತ್ತಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ಸಂಪಾದಿಸಲು ಇತರರೊಂದಿಗೆ ಮಲಗುವಂತೆ ಶ್ರೀಮಂತ ತನ್ನ ಹೆಂಡತಿಗೆ ಹೇಳುತ್ತಿದ್ದ. ತನ್ನ ಕುಟುಂಬದ ಕಾರಣಕ್ಕಾಗಿ ಸಾವಿತ್ರಿ ಇದನ್ನೆಲ್ಲ ಸಹಿಸುತ್ತಾ ಬಂದಿದ್ದಳು. ನಂತರ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರಿಂದ ಆತನನ್ನು ಹೊಡೆದು ಕೊಂದಿದ್ದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com