ಬೆಂಗಳೂರು: ತುಮಕೂರು ರಸ್ತೆಯಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್; ಪರಿಹಾರ ಕಂಡುಕೊಳ್ಳಲು ಉನ್ನತ ಮಟ್ಟದ ಸಭೆ!

ಎರಡು ದಿನಗಳ ಹಿಂದೆ ವಿಕಾಸ ಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಲೋಕೋಪಯೋಗಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ.
The choked service road near BIEC Junction on Tumakuru Road
BIEC ಮುಂಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್
Updated on

ಬೆಂಗಳೂರು: ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (BIEC) ಮುಂಭಾಗದಲ್ಲಿ ಪ್ರತಿದಿನ ಹೆಚ್ಚಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು,ಪ್ರಯಾಣಿಕರು ಹಾಗೂ ವಾಹನ ಸವಾರರ ಪಾಡು ಹೇಳತೀರದಾಗಿದೆ. ನಗರಕ್ಕೆ ಬರುವ ಟ್ರಕ್ ಗಳು ಹಾಗೂ ಇತರ ಭಾರೀ ವಾಹನಗಳು ಸರ್ವೀಸ್ ರಸ್ತೆಯಲ್ಲಿ ನಿಲ್ಲುವುದರಿಂದ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಈ ಸಮಸ್ಯೆ ನಿವಾರಿಸಲು ಎರಡು ದಿನಗಳ ಹಿಂದೆ ವಿಕಾಸ ಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಲೋಕೋಪಯೋಗಿ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮತ್ತು ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್ (NICE) ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಬಿಡಿಎಯ ಉದ್ದೇಶಿತ ಪೆರಿಫೆರಲ್ ರಿಂಗ್ ರೋಡ್ ಯೋಜನೆಯನ್ನು NICE ರಸ್ತೆಯೊಂದಿಗೆ ಸೇರಿಸುವುದು, ಜೊತೆಗೆ ಮುಖ್ಯ ಹೆದ್ದಾರಿಯನ್ನು ಪ್ರಮುಖ ರಸ್ತೆಗಳಿಗೆ ಸಂಪರ್ಕಿಸುವ ರ‍್ಯಾಂಪ್‌ಗಳ ನಿರ್ಮಾಣದಿಂದ BIEC ಬಳಿ ತುಮಕೂರು ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು NICE ಪ್ರತಿನಿಧಿಯೊಬ್ಬರು ಹೇಳಿದರು.

ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯ ಭಾಗವಾಗಿ ದೀಪಾಂಜಲಿ ನಗರದಿಂದ ನೈಸ್ ರಸ್ತೆ (ಹೊರ ವರ್ತುಲ ರಸ್ತೆ ಬಳಿ) ಸಂಪರ್ಕಿಸುವ ಯೋಜನೆಯ 500 ಮೀಟರ್ ಕಾಮಗಾರಿ ಪೂರ್ಣಗೊಳ್ಳಬೇಕಿದೆ. 'ಭೂಸ್ವಾಧೀನ ಸಮಸ್ಯೆಯಿಂದಾಗಿ ಇದು ಸ್ಥಗಿತಗೊಂಡಿದೆ. ಇದು ಪೂರ್ಣವಾದರೆ ಸಾರ್ವಜನಿಕರು 20 ನಿಮಿಷಗಳಲ್ಲಿ ಎಕ್ಸ್ ಪ್ರೆಸ್ ವೇ ಆರಂಭಿಕ ಸ್ಥಳವಾದ ಕೆಂಗೇರಿ ಬಳಿಯ ನೈಸ್ ಲಿಂಕ್ ರಸ್ತೆಯನ್ನು ತಲುಪಬಹುದು. ಸದ್ಯ ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಜನರು, ದೀಪಾಂಜಲಿ ನಗರದಿಂದ ಕೆಂಗೇರಿ ಎಕ್ಸ್‌ಪ್ರೆಸ್‌ವೇ ತಲುಪಲು ಐದು ಸಿಗ್ನಲ್‌ಗಳನ್ನು ಎದುರಿಸಬೇಕಾಗಿದ್ದು, ಇದು ಪೀಕ್ ಅವರ್‌ಗಳಲ್ಲಿ 60 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೂರು ತಿಂಗಳ ಹಿಂದೆ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದಲ್ಲಿ ಮೈಸೂರು ಮತ್ತು ಬೆಂಗಳೂರು ನಡುವೆ ಮತ್ತಷ್ಟು ಪ್ರಯಾಣವನ್ನು ಸುಲಭಗೊಳಿಸಲು ಬಿಎಂಐಸಿ ಯೋಜನೆಯನ್ನು ಪೂರ್ಣಗೊಳಿಸಲು ಪ್ರಸ್ತಾಪಿಸಿದ್ದರು. ಇದು ಬಿಡದಿ, ರಾಮನಗರ ಮತ್ತು ಮಂಡ್ಯದಲ್ಲಿ ಟೌನ್‌ಶಿಪ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದ್ದರು.

ಈ ಸಭೆಯಲ್ಲಿ ನಗರದಲ್ಲಿ ಟ್ರಾಫಿಕ್ ತಪ್ಪಿಸಲು ಸಾಧ್ಯವಿರುವ ಎಲ್ಲಾ ಪರ್ಯಾಯ ಆಯ್ಕೆಗಳ ಕುರಿತು ಚರ್ಚಿಸಲಾಗಿದ್ದು, ಎಲ್ಲಾ ಏಜೆನ್ಸಿಗಳಿಂದ ಅಭಿಪ್ರಾಯ ಸಂಗ್ರಹದ ಮಾತುಕತೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು NHAI ಪ್ರಾದೇಶಿಕ ಅಧಿಕಾರಿ ವಿಲಾಸ್ ಪಿ ಬ್ರಹ್ಮಂಕರ್ ಹೇಳಿದರು.

The choked service road near BIEC Junction on Tumakuru Road
ಮೈಸೂರು ರಸ್ತೆ-ನೈಸ್ ರಸ್ತೆ ಸಂಪರ್ಕಕ್ಕೆ 9 ಕಿ.ಮೀ ಉದ್ದದ ಲಿಂಕ್ ರೋಡ್ ನಿರ್ಮಾಣ; ಸಂಚಾರ ಸುಗಮ ನಿರೀಕ್ಷೆ!

ಈ ಸಮಸ್ಯೆಯನ್ನು ನಿಭಾಯಿಸಲು ಬಿಡಿಎ ರಾಂಪ್ ಅನ್ನು ಪ್ರಸ್ತಾಪಿಸಿದೆ ಎಂದು ಸಭೆಯಲ್ಲಿದ್ದ ಮತ್ತೊಬ್ಬ ಅಧಿಕಾರಿ ಹೇಳಿದರು. ರಾಂಪ್ ಮುಂಬರುವ ಪೆರಿಫೆರಲ್ ರಿಂಗ್ ರಸ್ತೆಯಿಂದ ನೈಸ್ ರಸ್ತೆಯನ್ನು ಸಂಪರ್ಕಿಸಬಹುದು. ಆದರೆ, ಪಿಡಬ್ಲ್ಯುಡಿ ಕೂಡ ತನ್ನದೇ ಆದ ಆಯ್ಕೆಯನ್ನು ಪ್ರಸ್ತಾಪಿಸಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com