ಮೈಸೂರು ರಸ್ತೆ-ನೈಸ್ ರಸ್ತೆ ಸಂಪರ್ಕಕ್ಕೆ 9 ಕಿ.ಮೀ ಉದ್ದದ ಲಿಂಕ್ ರೋಡ್ ನಿರ್ಮಾಣ; ಸಂಚಾರ ಸುಗಮ ನಿರೀಕ್ಷೆ!

ಹೊಸ ಮಾರ್ಗದ ಅಭಿವೃದ್ಧಿಯೊಂದಿಗೆ ಪ್ರಯಾಣಿಕರು ದೀಪಾಂಜಲಿ ನಗರ ಪ್ರವೇಶಿಸಬಹುದು ಹಾಗೂ 1.5 ಕಿಮೀವರೆಗೆ ಯಾವುದೇ ಟೋಲ್ ಶುಲ್ಕವಿರುವುದಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಬಿಎಚ್‌ಇಎಲ್-ದೀಪಾಂಜಲಿ ನಗರ ಜಂಕ್ಷನ್‌ನಲ್ಲಿ 9 ಕಿಮೀ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ರಸ್ತೆಯು ನಾಯಂಡಹಳ್ಳಿ ಮತ್ತು ಕೆಂಗೇರಿ ನಡುವಿನ ಸಂಚಾರ ಮತ್ತು ಪಿಇಎಸ್ ಕಾಲೇಜು-ಹೊಸಕೆರೆಹಳ್ಳಿ ಕಡೆಗೆ ಸಾಗುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲಿದೆ.

ಹೊಸ ಮಾರ್ಗದ ಅಭಿವೃದ್ಧಿಯೊಂದಿಗೆ ಪ್ರಯಾಣಿಕರು ದೀಪಾಂಜಲಿ ನಗರ ಪ್ರವೇಶಿಸಬಹುದು ಹಾಗೂ 1.5 ಕಿಮೀವರೆಗೆ ಯಾವುದೇ ಟೋಲ್ ಶುಲ್ಕವಿರುವುದಿಲ್ಲ. ಇದಲ್ಲದೆ, ರಾಜರಾಜೇಶ್ವರಿ ನಗರ ಜಂಕ್ಷನ್, ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಪಟ್ಟಣಗೆರೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನೂ ತಪ್ಪಿಸಬಹುದು.

ಕೆಂಗೇರಿಯ ಪಂಚಮುಖಿ ಗಣಪತಿ ದೇವಸ್ಥಾನ ಜಂಕ್ಷನ್‌ನಿಂದ 20 ನಿಮಿಷಗಳಲ್ಲಿ ನಿರ್ಗಮಿಸಬಹುದು. ವಿಸ್ತರಣೆಯು ಕೆಲವೇ ತಿಂಗಳುಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ವಾಹನ ಸವಾರರು ನಿಯಮಿತವಾಗಿ ಈ ರಸ್ತೆಯಲ್ಲಿ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತಿರುತ್ತಾರೆ. ಪಿಇಎಸ್ ಕಾಲೇಜು ಅಥವಾ ಬನಶಂಕರಿ ತಲುಪುವ ಜನರು ಅಥವಾ ಚಾಮರಾಜಪೇಟೆ, ವಿಜಯನಗರ ಮತ್ತು ನಗರದ ಇತರ ಭಾಗಗಳಿಂದ ಮೈಸೂರು ಕಡೆಗೆ ಹೋಗುವವರು ಹೊರ ವರ್ತುಲ ರಸ್ತೆ, ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಳನ್ನು ಎದುರಿಸಬೇಕಾಗಿತ್ತು. ಬಿಎಚ್‌ಇಎಲ್ ಮತ್ತು ದೀಪಾಂಜಲಿ ನಗರ ಜಂಕ್ಷನ್ ಬಳಿ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ಜನರು ಪಿಇಎಸ್ ಕಾಲೇಜು ಜಂಕ್ಷನ್‌ಗೆ 10 ನಿಮಿಷಗಳಲ್ಲಿ ಮತ್ತು ಕೆಂಗೇರಿಗೆ 20 ನಿಮಿಷಗಳಲ್ಲಿ ತಲುಪಬಹುದಾಗಿದೆ ಎಂದು ನೈಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಚ್‌ಇಎಲ್ ಜಂಕ್ಷನ್‌ನಿಂದ ಕೆಂಗೇರಿ ತಲುಪಲು ಪೀಕ್ ಅವರ್‌ನಲ್ಲಿ ಪ್ರಯಾಣವು 60 ನಿಮಿಷಗಳ ತೆಗೆದುಕೊಳ್ಳುತ್ತದೆ. ಈ ಸಂಪರ್ಕ ರಸ್ತೆದಿಂದ ಜನರು 9 ಕಿಮೀ ಪ್ರಯಾಣಿಸಬಹುದು. ನಂತರ NICE ಪೆರಿಫೆರಲ್ ರಸ್ತೆಗೆ ಸಂಪರ್ಕಿಸಬಹುದು, ಕೆಂಗೇರಿ ಮೂಲಕ ಬೆಂಗಳೂರು-ಮೈಸೂರು ರಸ್ತೆಗೆ ಸಂಪರ್ಕಿಸಬಹುದು.

ಸಂಗ್ರಹ ಚಿತ್ರ
ಕನಕಪುರ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ: ನೈಸ್ ರಸ್ತೆ-ಬನಶಂಕರಿ ಸಂಪರ್ಕಕ್ಕೆ ಎಕ್ಸ್‌ಪ್ರೆಸ್‌ವೇ; DPR ಸಿದ್ಧಪಡಿಸುವಂತೆ BBMPಗೆ ಡಿಕೆಶಿ ಸೂಚನೆ

ಸಂಪರ್ಕ ರಸ್ತೆ ಮಾರ್ಗದಲ್ಲಿ ಪ್ರಯಾಣಿಸುವ ವಾಹನ ಸವಾರರು ದೀಪಾಂಜಲಿ ನಗರ ಮತ್ತು ಕೆಂಗೇರಿ ನಡುವಿನ ಕನಿಷ್ಠ ನಾಲ್ಕು ಸಿಗ್ನಲ್‌ಗಳನ್ನು ತಪ್ಪಿಸಬಹುದು. ಈ ಸಂಪರ್ಕ ರಸ್ತೆಯು ಅಸ್ತಿತ್ವದಲ್ಲಿರುವ ಮೈಸೂರು ರಸ್ತೆಯಲ್ಲಿ ಕನಿಷ್ಠ ಶೇ.30 ಪ್ರತಿಶತದಷ್ಟು ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಯೋಜನೆ ಪೂರ್ಣಗೊಂಡ ನಂತರ ವಾಹನ ಚಾಲಕರು ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯನ್ನು ಸುಲಭವಾಗಿ ಸಂಪರ್ಕಿಸಬಹುದು. ಬಿಡದಿ ಕೈಗಾರಿಕಾ ಪ್ರದೇಶಕ್ಕೆ ಬರುವ ಬೃಹತ್ ವಾಹನಗಳೂ ಈ ಮಾರ್ಗದಲ್ಲಿ ಸಂಚರಿಸುವುದರಿಂದ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ. ಸರ್ಕಾರದಲ್ಲಿ ಭೂ ಸಮಸ್ಯೆ ಇರುವುದರಿಂದ 13 ಕಿಮೀ ರಸ್ತೆ ಅಭಿವೃದ್ಧಿ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ.

ನೈಸ್ ಸಂಸ್ಥೆಯು ಈ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ ನಿವೇಶನ ನೀಡಲು ಸಿದ್ಧವಾಗಿತ್ತು. ಹಣಕಾಸಿನ ಪ್ಯಾಕೇಜ್ ಈಗಾಗಲೇ ನೀಡಲಾಗಿದೆ, ಆದರೆ, ಅವರಿಗೆ ಇನ್ನೂ ನಿವೇಶನಗಳು ಸಿಕ್ಕಿಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಭೂಮಿಯನ್ನು ಗುರುತಿಸಲು ಸಿದ್ಧವಾಗಿದೆ, ಆದರೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ)ಯ ಅನುಮೋದನೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com