ಕಳಪೆ ಔಷಧ ತಯಾರಿಕೆ-ಪೂರೈಕೆ ತಡೆಯಲು ಕಾಯ್ದೆಗೆ ತಿದ್ದುಪಡಿ ತನ್ನಿ: ಕೇಂದ್ರ ಸರ್ಕಾರಕ್ಕೆ ಸಚಿವ ದಿನೇಶ್ ಗುಂಡೂರಾವ್ ಪತ್ರ

ಕಳೆದ ಡಿಸೆಂಬರ್ ನಲ್ಲಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಅದಕ್ಕೆ ಪಶ್ಚಿಮ ಬಂಗಾಳ ಮೂಲದ ಔಷಧ ಉತ್ಪಾದನೆ ಮತ್ತ ಪೂರೈಕೆ ಸಂಸ್ಥೆ ಪೂರೈಸಿದ್ದ ಲ್ಯಾಕ್ಟೇಟ್ ರಿಂಗರ್ ದ್ರಾವಣದ ಗುಣಮಟ್ಟ ಸರಿಯಿಲ್ಲದ್ದೇ ಕಾರಣ ಎಂಬ ಅಂಶ ಪತ್ತೆಯಾಗಿತ್ತು.
Dinesh Gundu Rao
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಳಪೆ ಔಷಧ ತಯಾರಿಕೆ, ಪೂರೈಕೆ ತಡೆಯಲು ಡ್ರಗ್ ಆ್ಯಂಡ್ ಕಾಸ್ಮೆಟಿಕ್ 1940 ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಜೆಪಿ.ನಡ್ಡಾ ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಡಿಸೆಂಬರ್ ನಲ್ಲಿ ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದರು. ಅದಕ್ಕೆ ಪಶ್ಚಿಮ ಬಂಗಾಳ ಮೂಲದ ಔಷಧ ಉತ್ಪಾದನೆ ಮತ್ತ ಪೂರೈಕೆ ಸಂಸ್ಥೆ ಪೂರೈಸಿದ್ದ ಲ್ಯಾಕ್ಟೇಟ್ ರಿಂಗರ್ ದ್ರಾವಣದ ಗುಣಮಟ್ಟ ಸರಿಯಿಲ್ಲದ್ದೇ ಕಾರಣ ಎಂಬ ಅಂಶ ಪತ್ತೆಯಾಗಿತ್ತು. ಹೀಗಾಗಿ ಕಳಪೆ ಔಷಧ ಪೂರೈಕೆ ತಡೆ ಹಾಗೂ ಗುಣಮಟ್ಟವಿಲ್ಲದ ಔಷಧ ಪೂರೈಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಡ್ರಗ್ ಆ್ಯಂಡ್ ಕಾಸ್ಮೆಟಿಕ್-1940 ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಮನವೀ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ 894 ಔಷಧ ಮಾದರಿಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 601 ಮಾದರಿಗಳು ಹೊರ ರಾಜ್ಯದ್ದಾಗಿವೆ. ಈ ಅಂತರವನ್ನು ನಿವಾರಿಸಲು ಕೇಂದ್ರೀಕೃತ ಡೇಟಾಬೇಸ್ ಅನ್ನು ರಚಿಸಬೇಕು. ಎಲ್ಲಾ ಕೇಂದ್ರ ಮತ್ತು ರಾಜ್ಯ ಪ್ರಯೋಗಾಲಯಗಳಿಂದ ಔಷಧ ಪರೀಕ್ಷೆಗಳನ್ನು ನಡೆಸಬೇಕು.

ಪರೀಕ್ಷೆ ವೇಳೆ ಔಷಧಿಗಳ ಕಳಪೆ ಗುಣಮಟ್ಟದ್ದು ಎಂದು ಕಂಡು ಬಂದರೆ ರಾಜ್ಯಗಳನ್ನು ಅವುಗಳನ್ನು ನಿಷೇಧಿಸಬಹುದು. ಆದರೆ, ಕ್ರಿಮಿನಲ್ ಮೊಕದ್ದಮೆಗೆ ಸಮಯ ತೆಗೆದುಕೊಳ್ಳುತ್ತಿವೆ. ಈ ನಡುವೆ ತಯಾರಕರು ಔಷಧಿಗಳನ್ನು ಉತ್ಪಾದಿಸುವುದು, ಮಾರಾಟ ಮಾಡುವುದನ್ನು ಮುಂದುವರೆಸುತ್ತಿದ್ದಾರೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಕೇಂದ್ರೀಕೃತ ಡೇಟಾಬೇಸ್ ರಚನೆಯ ಮಾಡಿದರೆ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (KSMSCL) ನಂತಹ ಔಷಧ ನಿರೀಕ್ಷಕರು ಮತ್ತು ಖರೀದಿ ಸಂಸ್ಥೆಗಳಿಗೆ ದೇಶಾದ್ಯಂತ ತಯಾರಕರ ಗುಣಮಟ್ಟದ ಇತಿಹಾಸವನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.

Dinesh Gundu Rao
ಬಾಣಂತಿಯರ ಸಾವು: ನ್ಯಾಯಾಂಗ ತನಿಖೆ, ದಿನೇಶ್ ಗುಂಡೂರಾವ್ ರಾಜೀನಾಮೆಗೆ ವಿಪಕ್ಷ ನಾಯಕ ಆರ್‌.ಅಶೋಕ್ ಒತ್ತಾಯ

ಸದ್ಯ ಇರುವ ಕಾಯ್ದೆಯಂತೆ ಯಾವುದೇ ಔಷಧ ಉತ್ಪಾದನೆ ಘಟಕ ಸ್ಥಾಪನೆಗೆ ಅನುಮತಿ ಹಾಗೂ ಸಂದರ್ಭ ಬಂದಾಗ ಘಟಕಗಳ ಪರಿಶೀಲನೆ ನಡೆಸುವ ಅಧಿಕಾರ ಆಯಾ ರಾಜ್ಯದ ಔಷಧ ನಿಯಂತ್ರಕ ಅಧಿಕಾರಿಗಳಿಗೆ ಮಾತ್ರ ಇದೆ. ಅಲ್ಲದೆ, ಯಾವ ಸಂಸ್ಥೆ ಕಪ್ಪುಪಟ್ಟಿಗೆ ಸೇರಿದೆ ಎಂಬ ಮಾಹಿತಿ ಇಲ್ಲ ರಾಜ್ಯಗಳಿಗೂ ದೊರೆಯುತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com