ಬೆಳಗಾವಿ: ಎರಡನೇ ಪತ್ನಿಯನ್ನು ಮೆಚ್ಚಿಸಲು ಮೊದಲ ಪತ್ನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಪತಿ ರಿಯಾಜ್!

ಧಾರವಾಡ ಮೂಲದ ಶಮಾ ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಹಾಗೂ ಒಬ್ಬ ಮಗ ಸೇರಿ ಮೂವರು ಮಕ್ಕಳಿದ್ದಾರೆ. ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ದಂಪತಿ ಬಂದು ನೆಲಸಿದ್ದರು.
ಶಮಾ-ರಿಯಾಜ್ ಪಠಾಣ್
ಶಮಾ-ರಿಯಾಜ್ ಪಠಾಣ್
Updated on

ಬೆಳಗಾವಿ: ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಎರಡನೇ ಹೆಂಡತಿಯನ್ನು ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದ ಮೊದಲ ಪತ್ನಿ ಶಮಾ ರಿಯಾಜ್ ಪಠಾಣ್ ಹತ್ಯೆ ಮಾಡಿ ಇದೀಗ ಆರೋಪಿ ರಿಯಾಜ್ ಪಠಾಣ್ ಜೈಲು ಸೇರಿದ್ದಾನೆ.

ಧಾರವಾಡ ಮೂಲದ ಶಮಾ ಹತ್ತು ವರ್ಷದ ಹಿಂದೆ ಶಿಗ್ಗಾವಿಯ ರಿಯಾಜ್ ಪಠಾಣ್ ನನ್ನು ವಿವಾಹವಾಗಿದ್ದಳು. ದಂಪತಿಗೆ ಇಬ್ಬರು ಹೆಣ್ಣು ಹಾಗೂ ಒಬ್ಬ ಮಗ ಸೇರಿ ಮೂವರು ಮಕ್ಕಳಿದ್ದಾರೆ. ಕೆಲಸಕ್ಕೆಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮಕ್ಕೆ ದಂಪತಿ ಬಂದು ನೆಲಸಿದ್ದರು. ರಿಯಾಜ್ ರಸ್ತೆ ಬದಿ ವಾಚ್, ಕನ್ನಡಗಳನ್ನು ಮಾರುತ್ತ ಜೀವನ ಸಾಗಿಸುತ್ತಿದ್ದನು. ಆದರೆ ಒಂದೂವರೆ ವರ್ಷದ ಹಿಂದೆ ಫರ್ಜಾನಾ ಎಂಬುವಳನ್ನು ರಿಯಾಜ್ ಗುಟ್ಟಾಗಿ ಮದುವೆ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಶಮಾ ಆಕೆಯನ್ನು ಬಿಟ್ಟು ತನ್ನ ಜೊತೆ ಇರುವಂತೆ ಪೀಡಿಸುತ್ತಿದ್ದಳು. ಈ ವಿಚಾರವನ್ನು ರಿಯಾಜ್ ಫರ್ಜಾನಾಗೆ ಹೇಳಿದ್ದಾನೆ. ಇದಕ್ಕೆ ಶಮಾಳನ್ನು ಹತ್ಯೆ ಮಾಡುವಂತೆ ಫರ್ಜಾನಾ ಹೇಳಿದ್ದಾಳೆ.

ಅದರಂತೆ ನಿನ್ನೆ ರಾತ್ರಿ ಶಮಾಳ ಮನೆಗೆ ಬಂದ ರಿಯಾಜ್ ಆಕೆ ಮಲಗಿದ ಮೇಲೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ನಂತರ ಮನೆಯಲ್ಲಿದ್ದ ಮಗನ್ನು ಕರೆದುಕೊಂಡು ಫರ್ಜಾನಾಳ ಮನೆಗೆ ಹೋಗಿ ಅಲ್ಲಿಂದ ದಂಪತಿ ಊರು ಬಿಟ್ಟು ಹೋಗಿದ್ದಾರೆ. ಇನ್ನು ಇಬ್ಬರು ಹೆಣ್ಣು ಮಕ್ಕಳು ಅಜ್ಜಿ ಮನೆಯಲ್ಲಿದ್ದು ತಾಯಿಯ ಸಾವು ಹಾಗೂ ತಂದೆ ಊರು ಬಿಟ್ಟು ಹೋಗಿದ್ದರಿಂದ ಅನಾಥವಾಗಿದ್ದಾರೆ. ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಶಮಾ-ರಿಯಾಜ್ ಪಠಾಣ್
ಖಾಸಗಿ ಫೋಟೊ ಸೋರಿಕೆ ಮಾಡೋದಾಗಿ ಚಿಕ್ಕಪ್ಪನಿಂದಲೇ ಬ್ಲ್ಯಾಕ್‌ಮೇಲ್: ಬೆಂಕಿ ಹಚ್ಚಿಕೊಂಡು ಮಹಿಳೆ ಸಾವು, ಆರೋಪಿ ಅಂದರ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com