ಗುಳ್ಳಾಪುರ ರಸ್ತೆ ಅಪಘಾತ: ಕ್ಷಣಾರ್ಧದಲ್ಲಿ ಸಾವು ಎದುರಿಗೆ ಬಂದು ಹೋಯಿತು; ಬದುಕುಳಿದ ಪ್ರಯಾಣಿಕರ ಆಘಾತಕಾರಿ ಅನುಭವ!

ಅಪಘಾತದ ಸಮಯದಲ್ಲಿ ನಾನು ಮಲಗಿದ್ದೆ. ಜೋರಾದ ಶಬ್ಧ ನಾನು ಎಚ್ಚರಗೊಳ್ಳುವಂತ ಮಾಡಿತ್ತು. ಚಾಲಕನ ಪಕ್ಕದಲ್ಲಿಯೇ ನಾನು ಕುಳಿತಿದ್ದೆ.
Scattered fruits and vegetables at the accident site at Gullapur in Uttara Kannada district on Wednesday
ಉತ್ತರ ಕನ್ನಡ ಜಿಲ್ಲೆಯ ಗುಳ್ಳಾಪುರದಲ್ಲಿ ಬುಧವಾರ ಸಂಭವಿಸಿದ ಅಪಘಾತ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹಣ್ಣು ಮತ್ತು ತರಕಾರಿಗಳು.
Updated on

ಯಲ್ಲಾಪುರ: ತರಕಾರಿ-ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ 11 ಸಾವಿಗೀಡಾಗಿದ್ದು, ದುರ್ಘಟನೆಯಲ್ಲಿ ಪಾರಾದ 19 ಮಂದಿ ಪ್ರಯಾಣಿಕರು ದುರಂತವನ್ನು ಸ್ಮರಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರಿನಿಂದ ಹಣ್ಣು ಮತ್ತು ತರಕಾರಿಗಳನ್ನು ಲಾರಿಯಲ್ಲಿ ಹೇರಿಕೊಂಡು ವ್ಯಾಪಾರಸ್ಥರು ಕುಮಟಾದಲ್ಲಿ ಬುಧವಾರದ ಸಂತೆಗೆ ಹೊರಟಿದ್ದರು. ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಸವಣೂರಿನಿಂದ ಹೊರಟಿದ್ದು, ಲಾರಿಯಲ್ಲಿ ಚಾಲಕ ಸೇರಿ ಒಟ್ಟು 29 ಮಂದಿ ಜನರಿದ್ದರು.

ಯಲ್ಲಾಪುರ ಸಮೀಪದ ಗುಳ್ಳಾಪುರ ಪೆಟ್ರೋಲ್ ಬಂಕ್ ಬಳಿ ಬುಧವಾರ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹೆದ್ದಾರಿ ಪಕ್ಕದ 5 ಅಡಿ ಕಂದಕಕ್ಕೆ ಉರುಳಿ ಬುಡಮೇಲಾಗಿ ಬಿದ್ದಿದೆ. ಈ ವೇಳೆ 9 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ಸಮಯದಲ್ಲಿ ನಾನು ಮಲಗಿದ್ದೆ. ಜೋರಾದ ಶಬ್ಧ ನಾನು ಎಚ್ಚರಗೊಳ್ಳುವಂತ ಮಾಡಿತ್ತು. ಚಾಲಕನ ಪಕ್ಕದಲ್ಲಿಯೇ ನಾನು ಕುಳಿತಿದ್ದೆ. ಬಳಿಕ ಕಿಟಕಿ ಗಾಜು ಹೊಡೆದು ಹೊರ ಬಂದೆ ಎಂದು ಅಪಘಾತದಲ್ಲಿ ಗಾಯಗೊಂಡ 19 ಜನರಲ್ಲಿ ಒಬ್ಬರಾದ ಖಾದ್ರಿ ಅವರು ಹೇಳಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಮೊಬೈಲ್ ನೆಟ್ ವರ್ಕ್ ಇರಲಿಲ್ಲ. ರಸ್ತೆಯಲ್ಲಿ ಚಲಿಸುತ್ತದ್ದ ಇತರೆ ವಾಹನ ಸವಾರರ ಸಹಾಯ ಕೇಳಿದ್ದೆವು. ಬಳಿಕ ಬೆಳಿಗ್ಗೆ 5 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಬಂದು, ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ತಿಳಿಸಿದ್ದಾರೆ.

ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. 5 ಗಂಟೆಯವರೆಗೂ ನಮಗೆ ಯಾವುದೇ ನೆರವು ಸಿಕ್ಕಿರಲಿಲ್ಲ. ಪೊಲೀಸರು ಶೀಘ್ರಗತಿಯಲ್ಲಿ ಬಂದಿದ್ದರೆ, ಮತ್ತಷ್ಟು ಜೀವಗಳನ್ನು ಉಳಿಸಬಹುದಿತ್ತು ಎಂದು ಮತ್ತೊಬ್ಬ ಗಾಯಾಳು ರಿಯಾಜ್ ಅಹ್ಮದ್ (32) ಎಂಬುವರು ಹೇಳಿದ್ದಾರೆ.

ಮಾಹಿತಿ ಸಿಕ್ಕ ಕೂಡಲೇ ನಾವು ಸ್ಥಳಕ್ಕೆ ದೌಡಾಯಿಸಿದ್ದೆವು. 108 ಆ್ಯಂಬುಲೆನ್ಸ್ ನೆರವು ಕೋರಿ 4 ಗಂಟೆಗೆ ಸುಮಾರಿಗೆ ಮಾಹಿತಿ ಬಂದಿತ್ತು ಎಂದು ಅಧಿಕಾರಿಗಳುಹೇಳಿದ್ದಾರೆ.

ಕ್ರೇನ್ ಸೇವೆಯನ್ನು ಒದಗಿಸುವ ಯಲ್ಲಾಪುರ ನಿವಾಸಿ ಇಮ್ರಾನ್ ಮೊಹಮ್ಮದ್ ಐಸಾಕ್ ಸನಧಿ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆ ಆಡಳಿತ ಮಂಡಳಿಯು ಬೆಳಿಗ್ಗೆ 4.45ರ ಸುಮಾರಿಗೆ ಸಂಪರ್ಕಿಸಿತ್ತು. ಕ್ರೇನ್ ಬೇಕೆಂದು ಹೇಳಿತ್ತು. ಸ್ಥಳಕ್ಕೆ ಹೋದಾಗ ಹಲವರು ತರಕಾರಿಗಳ ಕೆಳಗೆ ಸಿಲುಕಿ, ಉಸಿರುಗಟ್ಟಿ ಸಾವನ್ನಪ್ಪಿರುವುದು ಕಂಡು ಬಂದಿತ್ತು ಎಂದು ಹೇಳಿದ್ದಾರೆ.

Scattered fruits and vegetables at the accident site at Gullapur in Uttara Kannada district on Wednesday
ಯಲ್ಲಾಪುರ ಬಳಿ ಭೀಕರ ಅಪಘಾತ: ಪ್ರಧಾನಿ ಮೋದಿ, ಅಮಿತ್ ಶಾ ಸಂತಾಪ; 2 ಲಕ್ಷ ರೂ ಪರಿಹಾರ ಘೋಷಣೆ

ಇನ್ನು ಅಪಘಾತ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರಾದ ವಿಜಯ್ ಸಿದ್ಧಿ ಎಂಬುವವರು ಹಲವರನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸ್ವಲ್ಪ ಸಮಯದ ನಂತರ ಅವರು ಕಾಣಿಸಲಿಲ್ಲ. ಅವರ ಹೆಸರು ವಿಜಯ್ ಸಿದ್ಧಿ ಎಂಬುದಷ್ಟೇ ತಿಳಿದಿತ್ತು. ಹೆಚ್ಚಿನ ಮಾಹಿತಿ ಗೊತ್ತಿಲ್ಲ ಎಂದು ಬಾಲಕೃಷ್ಣ ನಾಯ್ಕ ಎಂಬುವವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com