
ಮೈಸೂರು: ಕೆಎಸ್‌ಆರ್‌ಟಿಸಿ ಡಿಪೋ ಮೆಕ್ಯಾನಿಕ್ ಒಬ್ಬ ಮಗನ ಎದುರೇ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಹೆಚ್.ಡಿ.ಕೋಟೆಯ ಹನುಮಂತನಗರದಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಎಚ್.ಡಿ ಕೋಟೆಯ KSRTC ಘಟಕದಲ್ಲಿ ಮೆಕ್ಯಾನಿಕ್ ಆಗಿರುವ ಮಲ್ಲೇಶ್ ನಾಯ್ಕ್ ತನ್ನ ಪತ್ನಿ ಮಧುರ (28) ಎಂಬಾಕೆಗೆ ಬೆಂಕಿ ಹಚ್ಚಿದ್ದಾನೆ.
8 ವರ್ಷಗಳ ಹಿಂದೆ ಮಧು ಅವರನ್ನು ಮದುವೆಯಾಗಿದ್ದ ಆರೋಪಿ, 6-7 ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನೆಂದು ತಿಳಿದುಬಂದಿದೆ. ಇದಲ್ಲದೆ, ಪತ್ನಿಯ ಶೀಲದ ಬಗ್ಗೆಯೂ ಅನುಮಾನ ಹೊಂದಿದ್ದ. ಎಲ್ಲವನ್ನೂ ಸಹಿಸಿಕೊಂಡು ಜೀವನ ನಡೆಸುತ್ತಿದ್ದ ಮಧು ಅವರು ಕೆಲ ದಿನಗಳ ಹಿಂದೆ ಒಂದೆರೆಡು ದಿನಗಳ ಮಟ್ಟಿಗೆ ತವರು ಮನೆಗೆ ಹೋಗಿ ಬರೋಣ ಎಂದು ಹೋದ್ದರು. ಆದರೆ, ಈ ವಿಚಾರವನ್ನೇ ನೆಪಮಾಡಿಕೊಂಡು ಪತ್ನಿಯೊಂದಿಗೆ ಜಗಳಕ್ಕಿಳಿದಿದ್ದ ಆರೋಪಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Advertisement