
ಬೆಂಗಳೂರು: ಆರ್ ಅ್ಯಂಡ್ ಡಿ ಕಂಪನಿ ನಡೆಸಿದ ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗಿಯಾಗಿದ್ದ 33 ವರ್ಷದ ವ್ಯಕ್ತಿಯೊಬ್ಬರು ಜಾಲಹಳ್ಳಿಯಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಸಂತ್ರಸ್ತ ನಾಗೇಶ್ ವೀರಣ್ಣ ಅವರ ಸಹೋದರ ಜನವರಿ 22ರಂದು ದೂರು ದಾಖಲಿಸಿದ್ದಾರೆ. ನಾಗೇಶ್ ವೀರಣ್ಣನವರ ಸಾವಿಗೆ ಪ್ರಯೋಗದ ವೇಳೆ ನೀಡಿದ ಔಷಧಗಳ ಅಡ್ಡ ಪರಿಣಾಮವೇ ಕಾರಣ ಎಂದು ರೇವಣ ಸಿದ್ದಪ್ಪ ಆರೋಪಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 194 (3) ಅಡಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದೇವೆ. ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಜಾಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ರೇವಣ್ಣ ಸಿದ್ದಪ್ಪ ಅವರ ಪ್ರಕಾರ, ಕ್ಲಿನಿಕಲ್ ಟ್ರಯಲ್‌ನಲ್ಲಿ ಭಾಗವಹಿಸುವ ಮುನ್ನ ವೀರಣ್ಣ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ.
ಪೊಲೀಸ್ ವರದಿ ಪ್ರಕಾರ, ಆರ್ & ಡಿ ಕಂಪನಿಯು ಕ್ಲಿನಿಕಲ್ ಟ್ರಯಲ್‌ನಲ್ಲಿ ಪಾಲ್ಗೊಂಡಿದ್ದ ಅವರಿಗೆ ಮಾತ್ರೆಗಳು ಮತ್ತು ಇಂಜೆಕ್ಷನ್ ಅನ್ನು ನೀಡಲಾಗಿತ್ತು. ಅದಾದ ನಂತರ 2024ರ ಡಿಸೆಂಬರ್‌ನಲ್ಲಿ ವೀರಣ್ಣ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತು.
ಜನವರಿ 21 ರಂದು ರಾತ್ರಿ ಇಬ್ಬರು ಸಹೋದರರು ಊಟ ಮಾಡಿ ಎಂದಿನಂತೆ ಮಲಗಲು ಹೋದರು. ಆದರೆ, ಬುಧವಾರ ಬೆಳಗ್ಗೆ ನಾಗೇಶ್ ಅವರನ್ನು ಎಬ್ಬಿಸಲು ಸಿದ್ದಪ್ಪ ಪ್ರಯತ್ನಿಸಿದಾಗ ಅವರು ಸ್ಪಂದಿಸಿಲ್ಲ.
ಆದರೆ, ಬುಧವಾರ ಬೆಳಗ್ಗೆ ನಾಗೇಶ್ ವೀರಣ್ಣ ಅವರನ್ನು ಎಬ್ಬಿಸಲು ಸಿದ್ದಪ್ಪ ಯತ್ನಿಸಿದಾಗ ಅವರು ಸ್ಪಂದಿಸಲಿಲ್ಲ. ಅವರು ತಕ್ಷಣ ಆರ್ & ಡಿ ಸಂಸ್ಥೆಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ಇದಕ್ಕೂ ಮೊದಲು ನಾಗೇಶ್ ಅವರನ್ನು ದಾಖಲಿಸಿದ್ದ ಅದೇ ಆಸ್ಪತ್ರೆಗೆ ಕರೆತರುವಂತೆ ಅವರು ಸೂಚಿಸಿದ್ದಾರೆ. ಸ್ಥಳಕ್ಕಾಗಮಿಸಿದ ವೈದ್ಯರು ನಾಗೇಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
Advertisement