
ಉತ್ತರ ಕನ್ನಡ: ಗರ್ಭಿಣಿ ಹಸುವಿನ ಕಾಲು, ತಲೆ ಕಡಿದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಹೊರಗೆಸೆದು ಮಾಂಸ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯೊಬ್ಬನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಉತ್ತರ ಕನ್ನಡದ ಹೊನ್ನಾವರದ ಸಾಲ್ಕೋಡುವಿನ ಕೊಂಡಕುಳಿ ಗ್ರಾಮದಲ್ಲಿ ಅತ್ಯಂತ ಭೀಕರವಾಗಿ ಗೋಹತ್ಯೆ ಮಾಡಿದ್ದ ಆರೋಪಿ ಫೈಝಲ್ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ. ಹೊನ್ನಾವರದ ಕಾಸರಕೋಡಿನಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿ ಫೈಝಲ್ ತಪ್ಪಿಸಿಕೊಳ್ಳಲು ಯತ್ನಿಸಿದ್ದನು.
ಸದ್ಯ ಆರೋಪಿಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ನಿನ್ನೆಯಷ್ಟೇ ಪೊಲೀಸರು ಹೊನ್ನಾವರ ವಲ್ಕಿಯ 41 ವರ್ಷದ ತೌಫೀಕ್‌ನನ್ನು ಬಂಧಿಸಿದ್ದರು. ಇದಕ್ಕೂ ಮುನ್ನ ಪೊಲೀಸರು ಆರೋಪಿಗಳಾದ ಹೊನ್ನಾವರದ ಅಲ್ತಾಫ್ ಕಟಪುರುಸು, ಮಥಿನ್ ಕಟಪುರುಸು ಮತ್ತು ಮೊಹಮ್ಮದ್ ಹುಸೇನ್ ಖುರ್ವೆ ಎಂಬುವರನ್ನು ಬಂಧಿಸಿದ್ದರು.
ಹೊನ್ನಾವರ ತಾಲೂಕಿನ ಸಾಲಕೋಡಿನ ಕೊಂಡಾಕುಳಿಯಲ್ಲಿ ಬೆಟ್ಟಕ್ಕೆ ಮೇಯಲು ಜನವರಿ 18ರಂದು ಹೋಗಿದ್ದ ಗರ್ಭಿಣಿ ಹಸುವಿನ ಕಾಲು, ರುಂಡ ಕಡಿದು, ಗರ್ಭದಲ್ಲಿ ಬೆಳೆಯುತ್ತಿದ್ದ ಕರುವಿನ ಭ್ರೂಣ ಹೊರತೆಗೆದು ಹತ್ಯೆ ಮಾಡಲಾಗಿತ್ತು.
Advertisement