Bengaluru: ಕೊಡಿಗೇಹಳ್ಳಿಯಲ್ಲಿ ಕಾಮುಕರ ಕಾಟ; ರಸ್ತೆಗಳಲ್ಲಿ ಓಡಾಡಲು ಹೆದರುತ್ತಿರುವ ಹೆಂಗಳೆಯರು!

ಕೊಡಿಗೇಹಳ್ಳಿಯ ರಾಜೀವ್ ಗಾಂಧಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮಹಿಳೆಗೂ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದಾರೆ.
ಕೊಡಿಗೇಹಳ್ಳಿ
ಕೊಡಿಗೇಹಳ್ಳಿ
Updated on

ಬೆಂಗಳೂರು: ನಗರದ ಕೊಡಿಗೇಹಳ್ಳಿಯಲ್ಲಿ ಬೀದಿ ಕಾಮುಕರ ಕಾಟ ಹೆಚ್ಚಾಗ ತೊಡಗಿದ್ದು, ವಯಸ್ಸಾದವರೂ ಸೇರಿದಂತೆ ಮಹಿಳೆಯರು ರಸ್ತೆಗಳಲ್ಲಿ ಓಡಾಡಲು ಹೆದರುವಂತಹ ಪರಿಸ್ಥಿತಿ ಎದುರಾಗಿದೆ.

ಕೊಡಿಗೇಹಳ್ಳಿಯ ರಾಜೀವ್ ಗಾಂಧಿ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ 50 ವರ್ಷದ ಮಹಿಳೆಗೂ ಕಾಮುಕರು ಲೈಂಗಿಕ ಕಿರುಕುಳ ನೀಡಿದ್ದಾರೆ.

ಈ ಪ್ರದೇಶದ ಪ್ರತೀ ಮಹಿಳೆಯರಿಗೂ ಲೈಂಗಿಕ ಕಿರುಕುಳದ ಅನುಭವವಾಗಿದೆ. ಹೀಗಾಗಿ ಬೆಳಗಿನ ಜಾವ ಹಾಗೂ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಓಡಾಡಲು ಹೆದರುತ್ತಾರೆಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ನಾಲ್ಕು ಅಪಾರ್ಟ್ಮೆಂಟ್ ಬ್ಲಾಕ್‌ಗಳಲ್ಲಿ ಸೇವಕಿ ಹಾಗೂ ಅಡುಗೆ ಕೆಲಸದವರಾಗಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಮಹಿಳೆ ಮಾತನಾಡಿ, ಕೆಲಸ ಹಿನ್ನೆಲೆಯಲ್ಲಿ ಬೆಳಿಗ್ಗೆ ಅಪಾರ್ಟ್ಮೆಂಟ್ ಗಳಿಗೆ ಹೋಗಬೇಕಾಗುತ್ತದೆ. 12ನೇ ಮುಖ್ಯ ರಸ್ತೆಗೆ ಹೋಗಬೇಕೆಂದರೆ ರೈಲ್ವೇ ಹಳಿ ದಾಟಬೇಕು. ಈ ವೇಳೆ ಹಳಿಗಳ ಮೇಲೆಯೇ ಕಣ್ಣಿಡುವ, ಕಾಮುಕರು ಮೊಬೈಲ್ ಫ್ಲಾಷ್ ಆನ್ ಮಾಡುತ್ತಾರೆಂದು ಹೇಳಿದ್ದಾರೆ,

ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದಿಂದ ಬೆಂಗಳೂರಿಗೆ ಸಾಕಷ್ಟು ಜನರು ಕೆಲಸ ಬರುತ್ತಾರೆ. ಹೊರ ರಾಜ್ಯದಿಂದ ಬರುವವರಿಗೆ ಬೆಂಬಲ ಕಡಿಮೆ ಇರುತ್ತದೆ. ಹೀಗಾಗಿ ಸ್ಥಳೀಯ ಪೊಲೀಸ ಠಾಣೆಗೆ ಹೋಗಲು ಹಾಗೂ ಕಾನೂನು ಹೋರಾಟ ನಡೆಸಲು ಹಿಂದೇಟು ಹಾಕುತ್ತಾರೆಂದು ಮತ್ತೊಬ್ಬ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಇದರ ನಡುವೆ ರೈಲ್ವೇ ಸಮಾನಾಂತರ ರಸ್ತೆಯಲ್ಲಿ ಎರಡು ಹೊಸ ಬಾರ್ ಗಳನ್ನೂ ಕೂಡ ತೆರೆಯಲಾಗಿದ್ದು, ಮಾದಕ ವ್ಯಸನಿಗಳು ಹಾಗೂ ಕುಡುಕರ ಹೋರಾಟ ಮತ್ತಷ್ಟು ಹೆಚ್ಚಾಗಲಿದೆ ಎಂದು ಮತ್ತೊಬ್ಬ ನಿವಾಸಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಇಬ್ಬರು ಯುವತಿಯರೊಂದಿಗೆ ದ್ವಿಚಕ್ರ ವಾಹನದಲ್ಲಿ ಬಂದವರು ಅನುಚಿತವಾಗಿ ಸ್ಪರ್ಶಿಸಿ, ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೋಷಕರು ಹೊರಗೆ ಬಿಡುವುದಿಲ್ಲ ಎಂಬ ಭಯದಲ್ಲಿ ವಿಚಾರವನ್ನು ಎಲ್ಲಿಗೂ ಬಹಿರಂಗಪಡಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

ಕೊಡಿಗೇಹಳ್ಳಿ
ಫೈನಾನ್ಸ್ ಕಂಪನಿ ಹಾವಳಿ: ಕಿರುಕುಳ ತಾಳಲಾರದೆ ಊರನ್ನೇ ತೊರೆದ ಗದಗ ಹೊಟೇಲ್ ಉದ್ಯಮಿ!

ಕೆಲ ಪುಂಡರು ಯುವತಿಯರಿಂದ ಮೊಬೈಲ್ ಗಳನ್ನು ಕಸಿಯಲು ಪ್ರಯತ್ನಿಸುತ್ತಾರೆ. ವಿರೋಧ ವ್ಯಕ್ತವಾದರೆ, ಹಿಂಬಾಲಿಸಿ ಅವರ ಬೆನ್ನಿಗೆ ಚಪ್ಪಲಿಯಿಂದ ಹೊಡೆಯುತ್ತಾರೆ ಅಥವಾ ಅವರು ಓಡುವಂತೆ ಮಾಡುತ್ತಾರೆ. ನಾನು ಕೆಲ ಯುವಕರ ಹಿಡಿಯಲು ಮುಂದಾಗಿದ್ದೆ. ಆದರೆ, ವೇಗವಾಗಿ ಸಾಗಿ ತಪ್ಪಿಸಿಕೊಳ್ಳುತ್ತಾರೆ. ಮಹಿಳೆಯರನ್ನು ಚುಡಾಯಿುವುದು, ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿ ಹೋಗಿದೆ. ಜೋರಾಗಿ ಶಬ್ಧ ಮಾಡಿ ವಯಸ್ಸಾದವರನ್ನು ಹೆದರಿಸುತ್ತಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜನವರಿ 21ರಂದು ವೃದ್ಧೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದ್ದು, ಈ ಸಂಬಂಧ ಸ್ಥಳೀಯ ನಿವಾಸಿಗಳು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ವಿವರಿಸಿದ್ದರು.

ಬಳಿಕ ಹೊಯ್ಸಳ ವಾಹನ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ, 12 ನೇ ಮುಖ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಸುತ್ತಿನ ಗಸ್ತು ತಿರುಗಿದರು ದು ಅಪಾರ್ಟ್ಮೆಂಟ್ ನಿವಾಸಿಯೊಬ್ಬರು ಹೇಳಿದ್ದಾರೆ.

ಇಲ್ಲಿ ಕೆಲವರ ಪುಂಡಾಟ ಮಿತಿ ಮೀರಿದೆ. ಕೆಲವರು ರೈಲ್ವೇ ಹಳಿಗಳ ಮೇಲೆ ನಗ್ನರಾಗಿ ನಿಲ್ಲುತ್ತಾರೆ. ಹೀಗಾಗಿ ಮಹಿಳೆಯರು ತಲೆತಗ್ಗಿಸಿಕೊಂಡು ಓಡಾಡುವುದು ಬಿಟ್ಟು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೃಷ್ಣ ಬೈರೇಗೌಡ ಅವರು. ಸಂಪೂರ್ಣ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದ್ದರು, ಆದರೆ, ಅದು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com