ಪತಿಗೆ ಬ್ಲ್ಯಾಕ್‌ಮೇಲ್, ಮಾನಸಿಕ ಕಿರುಕುಳ ನೀಡಿದ ಆರೋಪ: ಕಿರುತೆರೆ ನಟಿ ಶಶಿಕಲಾ ವಿರುದ್ಧ FIR ದಾಖಲು

ಪತಿ ಹಾಗೂ ನಿರ್ದೇಶಕ ಟಿ.ಜಿ. ಹರ್ಷವರ್ಧನ್ ನೀಡಿರುವ ದೂರನ್ನು ಆಧರಿಸಿ ಶಶಿಕಲಾ ಹಾಗೂ ಯೂಟ್ಯೂಬರ್ ಅರುಣ್‌ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಿರುತೆರೆ ನಟಿ ಶಶಿಕಲಾ
ಕಿರುತೆರೆ ನಟಿ ಶಶಿಕಲಾ
Updated on

ಬೆಂಗಳೂರು: ಪತಿಗೆ ಬ್ಲ್ಯಾಕ್‌ಮೇಲ್, ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಿರುತೆರೆ ನಟಿ ಶಶಿಕಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪತಿ ಹಾಗೂ ನಿರ್ದೇಶಕ ಟಿ.ಜಿ. ಹರ್ಷವರ್ಧನ್ ನೀಡಿರುವ ದೂರನ್ನು ಆಧರಿಸಿ ಶಶಿಕಲಾ ಹಾಗೂ ಯೂಟ್ಯೂಬರ್ ಅರುಣ್‌ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿನಿಮಾ ನಿರ್ದೇಶಕನ ಜತೆಗೆ ಕ್ಯಾಬ್ ಚಾಲಕನಾಗಿಯೂ ಕೆಲಸ ಮಾಡುತ್ತಿರುವ ನನಗೆ 2021ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಶಶಿಕಲಾ ಅವರ ಪರಿಚಯವಾಯಿತು. ತನ್ನೊಂದಿಗೆ ಸಂಬಂಧ ಹೊಂದಿದರೆ ಸಿನಿಮಾದಲ್ಲಿ ಹಣ ಹೂಡಿಕೆ ಮಾಡುವುದಾಗಿ ನಂಬಿಸಿದ್ದರು. ಸಿನಿಮಾ ನಿರ್ಮಾಣ ಮಾಡುತ್ತಾರೆಂಬ ಆಸೆಯಿಂದ ಒಪ್ಪಿಕೊಂಡೆ. ಅವರನ್ನು ಮದುವೆಯಾಗಲು ಆಗುವುದಿಲ್ಲ ಎಂದು ಮೊದಲೇ ಹೇಳಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಕೆಲವು ದಿನಗಳ ಬಳಿಕ ಮದುವೆ ಆಗುವಂತೆ ಬಲವಂತ ಮಾಡಿದರು. ನಮ್ಮಿಬ್ಬರ ನಡುವಿನ ಮೊಬೈಲ್ ಕರೆಗಳ ಸಂಭಾಷಣೆಗಳ ರೆಕಾರ್ಡಿಂಗ್‌ ಇಟ್ಟುಕೊಂಡು ಬೆದರಿಸಿದ್ದರು.

ನಾನು ಮದುವೆಗೆ ಒಪ್ಪದಿದ್ದಾಗ ನಾಗರಬಾವಿಯಲ್ಲಿರುವ ಕಚೇರಿಗೆ ಬಂದು ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬಳಿಕ ಇಬ್ಬರಿಗೂ ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು. 2022ರಲ್ಲಿ ಶಶಿಕಲಾ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ನನ್ನನ್ನು ಬಂಧಿಸಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ನನಗೆ ಸಿನಿಮಾ ನಿರ್ದೇಶನ ಮಾಡಲು ಬಿಡುವುದಿಲ್ಲ ಎಂದು ಶಶಿಕಲಾ ಬೆದರಿಸಿದ್ದರು.

ಕಿರುತೆರೆ ನಟಿ ಶಶಿಕಲಾ
ಕೌಟುಂಬಿಕ ದೌರ್ಜನ್ಯ: ನಟಿ ಹನ್ಸಿಕಾ ಮೋಟ್ವಾನಿ ಕುಟುಂಬದ ವಿರುದ್ಧ ಅತ್ತಿಗೆ ದೂರು ದಾಖಲು!

ವೃತ್ತಿ ಜೀವನ ಹಾಳಾಗುವುದು ಬೇಡ, ಆಕೆಯನ್ನು ಮದುವೆಯಾಗು ಎಂದು ನಿರ್ಮಾಪಕರು ನೀಡಿದ್ದ ಸಲಹೆ ಮೇರೆಗೆ 2022ರ ಮಾರ್ಚ್‌ನಲ್ಲಿ ಶಶಿಕಲಾ ಅವರನ್ನು ಮದುವೆಯಾದೆ. ಮದುವೆಯಾದ ಕೆಲ ದಿನಗಳ ನಂತರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರು ಮನೆಗೆ ಬಂದು ಹೋಗಲಾರಂಭಿಸಿದ್ದರು. ಅದನ್ನು ಪ್ರಶ್ನಿಸಿದಾಗ ನನ್ನನ್ನು ಮನೆಯಿಂದ ಹೊರಹಾಕುತ್ತಿದ್ದರು‌. ಒಂದೆರಡು ಗಂಟೆಗಳ ಬಳಿಕ ತಾವೇ ಮನೆಯೊಳಗೆ ಸೇರಿಸುತ್ತಿದ್ದರು.

ಈ ನಡುವೆ ಗಂಗೊಂಡನಹಳ್ಳಿಯಲ್ಲಿ ಶಶಿಕಲಾ ಅನಾಥಾಶ್ರಮ ಆರಂಭಿಸಿದ್ದರು. ಯಾಕೆ ಎಂದು ಪ್ರಶ್ನಿಸಿದಾಗ, 'ಕಪ್ಪು ಹಣವನ್ನು ಬದಲಾಯಿಸುವ ಅವಕಾಶ ಸಿಗುತ್ತದೆ' ಎಂದಿದ್ದರು. 2024ರ ಆಗಸ್ಟ್‌ನಲ್ಲಿ ನನ್ನನ್ನು ಮನೆಯಿಂದ ಹೊರಹಾಕಿರುವ ಶಶಿಕಲಾ, ಯೂಟ್ಯೂಬ್ ಚಾನೆಲ್‌ ಒಂದರ ಮಾಲೀಕನ ಜತೆ ಸೇರಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರ ಮಾಡುವುದನ್ನು ನಿಲ್ಲಿಸಲು ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದಾರೆ ಎಂದು ದೂರಿನಲ್ಲಿ ಹರ್ಷವರ್ಧನ್ ಅವರು ಹೇಳಿಕೊಂಡಿದ್ದಾರೆ.

ದೂರು ಹಿನ್ನೆಲೆ ನಟಿ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 318 (ವಂಚನೆ), 308 (ಸುಲಿಗೆ), ಮತ್ತು 351 (ಬೆದರಿಕೆ, ಅವಮಾನ, ಕಿರಿಕಿರಿ ಮತ್ತು ಮಾನನಷ್ಟ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದು, ಶೀಘ್ರದಲ್ಲೇ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com