ಬೆಂಗಳೂರು: ಮರದ ದಿಮ್ಮಿಯಿಂದ ಮಹಿಳೆ ಮೇಲೆ ಹಲ್ಲೆ, ಕೋಮಾದಲ್ಲಿ ಇಬ್ಬರು ಮಕ್ಕಳ ತಾಯಿ!

ಎರಡು ಮಕ್ಕಳ ತಾಯಿಯಾದ 41 ವರ್ಷದ ಕೀರ್ತನಾ ರಜತ್ ಕೋಮಾದಲ್ಲಿದ್ದಾರೆ. ಅವರ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆರೋಪಿ ಆಂಧ್ರ ಪ್ರದೇಶ ಮೂಲದ ಮಲ್ಲಿಕಾರ್ಜುನ್ (40) ದಿನಗೂಲಿ ಕೆಲಸ ಮಾಡುತ್ತಿದ್ದಾನೆ.
The accused Mallikarjun
ಆರೋಪಿ ಮಲ್ಲಿಕಾರ್ಜನ್
Updated on

ಬೆಂಗಳೂರು: ಸದಾಶಿವನಗರದಲ್ಲಿ ಸ್ಯಾಂಕಿ ಟ್ಯಾಂಕ್ ಬಳಿ ಮಂಗಳವಾರ ಸಂಜೆ ವ್ಯಕ್ತಿಯೊಬ್ಬ ಮರದ ದಿಮ್ಮಿಯಿಂದ ಹಲ್ಲೆ ನಡೆಸಿದ್ದರಿಂದ ಮಹಿಳೆಯೊಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಎರಡು ಮಕ್ಕಳ ತಾಯಿಯಾದ 41 ವರ್ಷದ ಕೀರ್ತನಾ ರಜತ್ ಕೋಮಾದಲ್ಲಿದ್ದಾರೆ. ಅವರ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆರೋಪಿ ಆಂಧ್ರಪ್ರದೇಶ ಮೂಲದ ಮಲ್ಲಿಕಾರ್ಜುನ್ (40) ದಿನಗೂಲಿ ಕೆಲಸ ಮಾಡುತ್ತಿದ್ದಾನೆ. ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದ ನಂತರ ಈ ಅಪರಾಧ ಮಾಡಿರುವುದಾಗಿ ಡಿಸಿಪಿ (ಕೇಂದ್ರ ವಲಯ) ಶೇಖರ್ ಎಚ್ ತೆಕ್ಕನವರ್ ತಿಳಿಸಿದ್ದಾರೆ.

ಸ್ಯಾಂಕಿ ಟ್ಯಾಂಕ್ ಹೊರಗೆ ರಾತ್ರಿ 7 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ. ಕೀರ್ತನಾ ಪ್ರತಿದಿನದಂತೆ ತನ್ನ ಸ್ನೇಹಿತೆಯರೊಂದಿಗೆ ವಾಕಿಂಗ್ ಹೋಗುತ್ತಿದ್ದರು. ಅವರು ಈ ಹಿಂದೆ ಅನುಚಿತ ವರ್ತನೆಗಾಗಿ ಆರೋಪಿ ವಿರುದ್ಧ ಎರಡು ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಆತನ ವಿರುದ್ಧ ಇತರ ಮಹಿಳೆಯರು ಕೂಡಾ ದೂರು ನೀಡಿದ್ದರು ಎಂದು ಕೀರ್ತನಾ ಅವರ ಪತ್ನಿ ರಜತ್ ರಾಮಚಂದ್ರನ್ ಹೇಳಿದರು.

8ನೇ ಮುಖ್ಯರಸ್ತೆಯ 8ನೇ ಕ್ರಾಸ್‌ನಲ್ಲಿ ಕಾರು ನಿಲ್ಲಿಸಿಕೊಂಡು ಕೀರ್ತನಾ ಅವರಿಗಾಗಿ ಕಾಯುತ್ತಿದ್ದಾಗ ಆರೋಪಿ ಮೊದಲು ಮರದ ದಿಮ್ಮಿಯಿಂದ ಆಕೆಯ ತಲೆಗೆ ಹಿಂದಿನಿಂದ ಹೊಡೆದಿದ್ದಾನೆ. ಆಕೆ ಕೆಳಗೆ ಬಿದ್ದ ನಂತರವೂ ಹಲ್ಲೆ ಮಾಡಿದ್ದು, ಬಿಡಿಸಲು ಹೋದವರಿಗೂ ಬೆದರಿಕೆ ಹಾಕಿದ್ದಾನೆ. ಬೀದಿದೀಪಗಳು ಸರಿಯಾಗಿಲ್ಲದಿದ್ದರಿಂದ ಕತ್ತಲು ಆವರಿಸಿತ್ತು. ನಂತರ ಮರದ ದಿಮ್ಮಿ ಎಸೆದು ಪರಾರಿಯಾಗಲು ಪ್ರಯತ್ನಿಸಿದಾಗ ಕೆಲವರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ' ಎಂದು ರಜತ್ ಹೇಳಿದ್ದಾರೆ. ಮಲ್ಲಿಕಾರ್ಜುನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 109 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೀರ್ತನಾ ಅವರಿಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಐದು ಗಂಟೆಗಳ ಕಾಲ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನೂ ಅವರಿಗೆ ಪ್ರಜ್ಞೆ ಬಂದಿಲ್ಲ. ಹತ್ತನೇ ತರಗತಿ ಮತ್ತು 6ನೇ ತರಗತಿಯಲ್ಲಿ ಇಬ್ಬರು ಹೆಣ್ಣು ಮಕ್ಕಳಿರುವುದಾಗಿ ರಜತ್ ತಿಳಿಸಿದ್ದಾರೆ.

ಈ ಹಿಂದೆ ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಪಿ, ಈ ದಾಳಿಯ ನಂತರವೇ ದೂರುಗಳು ಬಂದಿವೆ. ಅಲ್ಲಿ ಗಸ್ತು ತಿರುಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಹಾಯದ ಅಗತ್ಯವಿರುವ ಯಾವುದೇ ವ್ಯಕ್ತಿ 112 ಗೆ ಕರೆ ಮಾಡಬಹುದು ಎಂದು ಅವರು ಹೇಳಿದರು.

The accused Mallikarjun
ಬೆಂಗಳೂರು: ಕನ್ನಡ ಮಾತನಾಡದ ಇಬ್ಬರು ಬಿಹಾರಿಗಳ ಮೇಲೆ ಚಾಕುವಿನಿಂದ ಹಲ್ಲೆ, ಮೂವರ ಬಂಧನ

ವಾಕಿಂಗ್‌ ಮಾಡುವವರಿಗೆ ಸ್ಯಾಂಕಿ ಟ್ಯಾಂಕ್‌ ಬಳಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸದಾಶಿವನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಸಂಘವು ಬೆಸ್ಕಾಂಗೆ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com