
ಬೆಂಗಳೂರು: ಕನ್ನಡ ಮಾತನಾಡದ ಇಬ್ಬರು ಬಿಹಾರಿಗಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಆಡುಗೋಡಿ ಪೊಲೀಸ್ ವ್ಯಾಪ್ತಿಯ ಲಕ್ಕಸಂದ್ರ ಎಕ್ಸ್‌ಟೆನ್ಶನ್‌ನಲ್ಲಿ ಕಳೆದ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದವರನ್ನು ಎಂಡಿ ಹಸ್ಮತ್ ಹುಸೇನ್ (21) ಮತ್ತು ಎಂಡಿ ಅಮೀರ್ (19) ಎಂದು ಗುರುತಿಸಲಾಗಿದೆ. ಇಬ್ಬರು ಲಕ್ಕಸಂದ್ರ ಎಕ್ಸ್‌ಟೆನ್ಶನ್ ನಿವಾಸಿಗಳಾಗಿದ್ದಾರೆ.
ಚೂರಿ ಇರಿತದಿಂದ ಗಾಯಗೊಂಡಿರುವ ಮೇಸ್ತ್ರಿ ಹುಸೇನ್ ಕೋರಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲೆಕ್ಟ್ರಿಷಿಯನ್ ಆಗಿದ್ದ ಅಮೀರ್ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.
ಪಾನಮತ್ತರಾಗಿ ಆಟೋರಿಕ್ಷಾದಲ್ಲಿ ಬಂದ ಆರೋಪಿಗಳು ಹುಸೇನ್ ಮತ್ತು ಅಮೀರ್ ಅವರನ್ನು ಸಂಪರ್ಕಿಸಿ ವಿಳಾಸ ಕೇಳಿದ್ದಾರೆ. ಹಿಂದಿಯಲ್ಲಿ ವಿಳಾಸ ಹೇಳಿದ್ದಕ್ಕೆ ಕನ್ನಡದಲ್ಲಿ ಹೇಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಹುಸೇನ್ ಮತ್ತು ಅಮೀರ್ ಅವರಿಗೆ ಕನ್ನಡ ಬರುವುದಿಲ್ಲ ಎಂದು ಹೇಳಿದಾಗ, ಮೂವರು ಅವರ ಮೇಲೆ ಹಲ್ಲೆ ಮಾಡಲು ಆಂಭಿಸಲಿದ್ದಾರೆ. ಬಳಿಕ ಆರೋಪಿಗಳಿಂದ ಇಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿ, ಓಡಲು ಪ್ರಾರಂಭಿಸಿದ್ದು, ಈ ವೇಳೆ ಕೆಳಗೆ ಬಿದ್ದ ಹುಸೇನ್ ಮೇಲೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ.
ಲಕ್ಕಸಂದ್ರದಲ್ಲಿ ರಾತ್ರಿ 11.05 ರಿಂದ 11.35 ರ ನಡುವೆ ಘಟನೆ ನಡೆದಿದೆ. ಹುಸೇನ್ ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಕಳೆದ ವರ್ಷ ಅಮೀರ್ ನಗರಕ್ಕೆ ಬಂದಿದ್ದರು.
ನಾನು ಮತ್ತು ಹುಸೇನ್ ಇತರ ಮೂವರೊಂದಿಗೆ ಜ್ಯೂಸ್ ಸೆಂಟರ್‌ನಲ್ಲಿದ್ದೆವು. ಈ ವೇಳೆ ಆಟೋರಿಕ್ಷಾದಲ್ಲಿ ಬಂದ ಆರೋಪಿಗಳು ಕನ್ನಡದಲ್ಲಿ ವಿಳಾಸ ಕೇಳಿದರು. ನಮಗೆ ಕನ್ನಡ ಬರುವುದಿಲ್ಲ ಎಂದು ಹುಸೇನ್ ಹೇಳಿದಾಗ. ಆರೋಪಿಗಳು ಮೇಲೆ ಹಲ್ಲೆ ನಡೆಸಿದರು. ಬಳಿಕ ಸ್ನೇಹಿತರು ನಮ್ಮನ್ನು ಆಸ್ಪತ್ರೆಗೆ ದಾಖಲಿಸಿದರು ಎಂದು ಅಮೀರ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ. ಹಲ್ಲಗೊಳಗಾದವರೂ ಕೂಡ ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಬಿಎನ್‌ಎಸ್‌ನ ಇತರ ಸೆಕ್ಷನ್‌ಗಳ ಜೊತೆಗೆ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
Advertisement