ರೈಲ್ವೇ ಪ್ರಯಾಣಿಕರೇ ಎಚ್ಚರ... ಆಪ್ತರಂತೆ ನಟಿಸಿ ಮತ್ತುಬರುವ ಆಹಾರ ನೀಡಿ ದರೋಡೆ!

ಹೊನ್ನಾವರ ತಲುಪಿದ ಕುಟುಂಬ ಮರುದಿನ ಬೆಳಿಗ್ಗೆ ಚಾಕಲೇಟ್ ಸೇವನೆ ಮಾಡಿದ್ದಾರೆ. ಇದಾಗ ಕೆಲವು ನಿಮಿಷಗಳಲ್ಲೇ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದಾರೆ. ಇಡೀ ದಿನ ಕುಟುಂಬ ನಿದ್ರೆಗೆ ಜಾರಿದೆ.
File photo
ಸಂಗ್ರಹ ಚಿತ್ರ
Updated on

ಉತ್ತರ ಕನ್ನಡ: ರೈಲುಗಳಲ್ಲಿ ಪ್ರಯಾಣಿಸುವಾಗ ಅಪರಿಚತ ವ್ಯಕ್ತಿಗಳು ನೀಡುವ ಆಹಾರ ಸೇವನೆ ಮಾಡದಂತೆ ಪ್ರಯಾಣಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುವಾಗ ಮೂವರು ಜನರಿದ್ದ ಕುಟುಂಬವೊಂದು, ಅಪರಿಚಿತರು ನೀಡಿದ ಚಾಕೊಲೇಟ್ ತಿಂದು ವಿಚಿತ್ರ ಅನುಭವ ಎದುರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

ಅಶೋಕ್ ನಾರಾಯಣ್ ಹೊನ್ನಾವರ (47), ನೇತ್ರ ಅಶೋಕ್ ಹೊನ್ನಾವರ (43) ಮತ್ತು ಅವರ ಮಗಳು ಪವಿತ್ರಾ ಅಶೋಕ್ ಅವರು ಮಡಗಾಂವ್‌ನಿಂದ ಹೊನ್ನಾವರಕ್ಕೆ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಮಡಗಾಂವ್-ಮಂಗಳೂರು ರೈಲಿನಲ್ಲಿ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದು, ವ್ಯಕ್ತಿ ಆಪ್ತನಂತೆ ಕುಟುಂಬದೊಂದಿಗೆ ಮಾತನಾಡಿದ್ದಾನೆ. ಬಳಿಕ ಕುಟುಂಬವು ತಾವು ತಂದಿದ್ದ ಆಹಾರವನ್ನು ಯುವಕನಿಗೆ ನೀಡಿದ್ದಾನೆ. ಇದಾದ ಕೆಲವು ಸಮಯದ ಬಳಿಕ ಯುವಕ ಕುಟುಂಬಕ್ಕೆ ಚಾಕಲೇಟ್ ನೀಡಿದ್ದಾನೆ. ನಾನು ತಿಂದು, ತುಂಬಾ ರುಚಿಯಾಗಿದೆ ನೀವು ತಿನ್ನಿ ಎಂದು ಒತ್ತಾಯಿಸಿದ್ದಾನೆ. ಆದರೆ, ಕುಟುಂಬ ನಾವು ಈಗಷ್ಟೇ ಊಟ ಮಾಡಿದ್ದೇವೆ. ಸ್ವಲ್ಪ ಸಮಯದ ನಂತರ ತಿನ್ನುದ್ದೇವೆಂದು ಹೇಳಿದ್ದಾರೆ.

ಬಳಿಕ ಹೊನ್ನಾವರ ತಲುಪಿದ ಕುಟುಂಬ ಮರುದಿನ ಬೆಳಿಗ್ಗೆ ಚಾಕಲೇಟ್ ಸೇವನೆ ಮಾಡಿದ್ದಾರೆ. ಇದಾಗ ಕೆಲವು ನಿಮಿಷಗಳಲ್ಲೇ ಎಲ್ಲರೂ ಗಾಢ ನಿದ್ರೆಗೆ ಜಾರಿದ್ದಾರೆ. ಇಡೀ ದಿನ ಕುಟುಂಬ ನಿದ್ರೆಗೆ ಜಾರಿದೆ.

File photo
ಬೆಂಗಳೂರು: ಬಸ್, ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರ ಬಂಧನ

12 ಗಂಟೆಗಳ ಕಾಲ ಎಲ್ಲರೂ ಮಲಗಿದ್ದೇವೆ. ಎದ್ದ ನಂತವೂ ಮತ್ತಷ್ಟು ನಿದ್ರೆ ಬರುತ್ತಿದೆ ಎಂದು ಭಾಸವಾಗುತ್ತಿತ್ತು. ಇದರಿಂದ ಎಲ್ಲರೂ ಆಘಾತ, ಆಶ್ಚರ್ಯಚಕಿತರಾದೆವು. ಬಳಿಕ ಪೊಲೀಸ್ ಅಧಿಕಾರಿಯಾಗಿರುವ ಸ್ನೇಹಿತರೊಬ್ಬರಿಗೆ ಈ ಬಗ್ಗೆ ಮಾಹಿತಿ ನೀಡಿದೆವು ಎಂದು ಅಶೋಕ್ ಅವರು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಹಳೆಯ ವಿಧಾನವಾಗಿದ್ದು, ದುಷ್ಕರ್ಮಿಗಳು ಕಡಿಮೆ ಜನರಿರುವ ಬೋಗಿಗಳನ್ನು ಗುರಿಯಾಗಿಸಿಕೊಂಡು ಪ್ರಯಾಣಿಕರಿಗೆ ಮಾದಕ ದ್ರವ್ಯ ಪ್ರೇರಿತ ಚಾಕೊಲೇಟ್ ನೀಡಿ, ಸೇವಿಸುವಂತೆ ಮಾಡುತ್ತಾರೆ. ಪ್ರಯಾಣಿಕರು ಎಚ್ಚರವಾದಾಗ ತಮ್ಮ ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡಿರುತ್ತಾರೆಂದು ಹೇಳಿದ್ದಾರೆ.

ಘಟನೆಯ ಬಗ್ಗೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇದಲ್ಲದೆ, ಜನರೂ ಕೂಡ ರೈಲುಗಳಲ್ಲಿ ಪ್ರಯಾಣಿಸುವಾಗ ಬಹಳ ಜಾಗರೂಕರಾಗಿರಬೇಕು. ದುಷ್ಕರ್ಮಿಗಳ ಜಾಲಕ್ಕೆ ಬೀಳಬಾರದು. ಅಪರಿಚಿತ ವ್ಯಕ್ತಿಗಳು ನೀಡುವ ಆಹಾರ ಸೇವನೆ ಮಾಡಬಾರದು. ಎಲ್ಲಾ ಸಮಯವೂ ನಮ್ಮ ಪರವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com