
ಚಿಕ್ಕೋಡಿ: 32 ವರ್ಷದ ಯೋಗ ಶಿಕ್ಷಕಿಯೊಬ್ಬರು ಶನಿವಾರ ಹಠಾತ್ ಕುಸಿದು ಬಿದ್ದು ತಮ್ಮ ಮನೆಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಭೀಮ್ ನಗರ ಲೇಔಟ್‌ನಲ್ಲಿ ನಡೆದಿದೆ.
ಆರತಿ ದಿಲೀಪ್ ಜೋಗಲೆ ಮೃತ ಶಿಕ್ಷಕಿ, ಅವರಿಗೆ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ. ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು.
ಆರತಿ ಮಹರ್ಷಿ ಯೋಗ ಆರೋಗ್ಯ ಪ್ರತಿಷ್ಠಾನದಲ್ಲಿ ಯೋಗ ತರಬೇತಿ ಪಡೆದಿದ್ದರು. ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುತ್ತಿದ್ದರು. ಅವರ ಪೋಷಕರು, ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.
ಶನಿವಾರ ವರದಿಯಾದ ಎರಡನೇ ಘಟನೆ ಇದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಶಾಲೆಯ 48 ವರ್ಷದ ಶಿಕ್ಷಕ ತರಗತಿಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದರು.
Advertisement