ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ: ಮಾಧ್ಯಮಗಳಿಗೆ ಬೆಂಗಳೂರು ಕೋರ್ಟ್ ನಿರ್ಬಂಧ!

ಶ್ರೀ ಮಂಜುನಾಥಸ್ವಾಮಿ ದೇವಾಲಯದ ಕಾರ್ಯದರ್ಶಿ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಅರ್ಜಿ ಸಂಬಂಧ ಈ ಆದೇಶ ಹೊರಡಿಸಲಾಗಿದೆ.
The Dharmasthala police station
ಧರ್ಮಸ್ಥಳ ಠಾಣೆ
Updated on

ಬೆಂಗಳೂರು: ಧರ್ಮಸ್ಥಳದಲ್ಲಿ ರಹಸ್ಯ ಸಮಾಧಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಮಾಧ್ಯಮಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಬೆಂಗಳೂರು ಕೋರ್ಟ್ ನಿರ್ಬಂಧ ಹೇರಿದೆ.

ಶ್ರೀ ಮಂಜುನಾಥಸ್ವಾಮಿ ದೇವಾಲಯದ ಕಾರ್ಯದರ್ಶಿ ಸಲ್ಲಿಸಿದ ಮಾನಹಾನಿ ಮೊಕದ್ದಮೆ ಅರ್ಜಿ ಸಂಬಂಧ ಈ ಆದೇಶ ಹೊರಡಿಸಲಾಗಿದೆ. ಶ್ರೀ ಮಂಜುನಾಥಸ್ವಾಮಿ ದೇವಾಲಯದ ಮಾಜಿ ಸ್ವಚ್ಛತ ಕೆಲಸಗಾರನೊಬ್ಬ ದೇವಾಲಯದ ಮೇಲ್ವಿಚಾರಕರು ಹಲವಾರು ಶವಗಳನ್ನು ಸಮಾಧಿ ಮಾಡಲು ಒತ್ತಾಯಿಸಿದ್ದಾರೆ ಎಂಬ ಆರೋಪಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಬಂದ ನಂತರ ಈ ಆದೇಶ ಹೊರಬಿದ್ದಿದೆ. ಆದಾಗ್ಯೂ, ಸ್ವಚ್ಛತ ಕೆಲಸಗಾರ ಹರ್ಷೇಂದ್ರ ಕುಮಾರ್ ಅಥವಾ ಅವರ ಕುಟುಂಬದ ಹೆಸರನ್ನು ಎಲ್ಲೂ ಹೇಳಿಲ್ಲ.

ಒಂದು ಸಂಸ್ಥೆ ಮತ್ತು ದೇವಾಲಯದ ವಿರುದ್ಧ ಆರೋಪ ಬಂದರೆ ಅದು ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಜನರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಒಂದೇ ಒಂದು ಸುಳ್ಳು ಮತ್ತು ಮಾನಹಾನಿಕರ ಪ್ರಕಟಣೆಯು ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನ್ಯಾಯಾಲಯವು ಈಗಾಗಲೇ ಆನ್‌ಲೈನ್‌ನಲ್ಲಿ ಮಾನಹಾನಿಕರ ವಿಷಯವನ್ನು ತೆಗೆದುಹಾಕಲು ಅಥವಾ ಡಿ-ಇಂಡೆಕ್ಸ್ ಮಾಡಲು ಸಹ ನಿರ್ದೇಶಿಸಿದೆ. ಕುಮಾರ್ ಸಾವಿರಾರು ಯೂಟ್ಯೂಬ್ ವೀಡಿಯೊಗಳು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, ಸುದ್ದಿ ಲೇಖನಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಒಳಗೊಂಡಂತೆ 8,842 ಮಾನಹಾನಿಕರ ಲಿಂಕ್‌ಗಳ ಪಟ್ಟಿಯನ್ನು ಸಲ್ಲಿಸಿದರು.

The Dharmasthala police station
ಧರ್ಮಸ್ಥಳದಲ್ಲಿ ಉದ್ವಿಗ್ನ ವಾತಾವರಣ: ಸೌಜನ್ಯ ನ್ಯಾಯಕ್ಕಾಗಿ ಪಾದಯಾತ್ರೆ ವೇಳೆ 'ಕಬ್ಜಾ' ಶರಣ್ ತಂಡಕ್ಕೆ ಗ್ರಾಮಸ್ಥರಿಂದ ತಡೆ!

ಯಾವುದೇ ಎಫ್‌ಐಆರ್ ನಲ್ಲಿ ತಮ್ಮ ಹೆಸರು ಅಥವಾ ದೇವಾಲಯದ ಸಂಸ್ಥೆಗಳನ್ನು ಹೆಸರಿಸಿಲ್ಲ ಎಂದು ಹರ್ಷೇಂದ್ರ ಕುಮಾರ್ ಕೋರ್ಟ್ ಗೆ ತಿಳಿಸಿದರು. ಮಾನಹಾನಿಯಿಂದ ರಕ್ಷಣೆಯೊಂದಿಗೆ ಮುಕ್ತ ಅಭಿಪ್ರಾಯ ಸಮತೋಲನಗೊಳಿಸುವ ಅಗತ್ಯವನ್ನು ಒತ್ತಿಹೇಳುತ್ತಾ, ಇದು ಆಧಾರರಹಿತ ಆರೋಪಗಳ ಅಸಾಧಾರಣ ಪ್ರಕರಣ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಈ ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com