ಚಿತ್ರದುರ್ಗ: ಪುತ್ರಿಯ ಅಂತರ್ಜಾತಿ ವಿವಾಹದಿಂದ ಬೇಸತ್ತ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ತನ್ನ ಪುತ್ರಿ ಅಂತಜಾರ್ತಿ ವಿವಾಹವಾದ ನಂತರ ಆತ ದಾಖಲಿಸಿದ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿ, ಠಾಣೆ ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ.
ಮೃತನನ್ನು ಅಜ್ಜಯ್ಯ (50) ಎಂದು ಗುರುತಿಸಲಾಗಿದೆ. ಹೊಳಲ್ಕೆರೆ ಪೊಲೀಸ್ ಠಾಣೆ ಮುಂಭಾಗ ವಿಷ ಸೇವಿಸಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಘಟನೆ ಠಾಣೆ ಹೊರಗಡೆ ನಾಟಕೀಯ ಸನ್ನಿವೇಶಕ್ಕೆ ಕಾರಣವಾಯಿತು. ಕುಟುಂಬದ ಸದಸ್ಯರು ಶವವನ್ನು ಠಾಣೆ ಪ್ರವೇಶದ್ವಾರದಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಪೊಲೀಸ್ ಠಾಣೆ ಬಳಿ ವಾಹನ ದಟ್ಟಣೆ ಉಂಟಾಯಿತು.
ಪುತ್ರಿ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದ ಅಜ್ಜಯ್ಯ, ಆಕೆ ಅಪ್ರಾಪ್ತ ವಯಸ್ಕಳು ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ. ಆದರೆ ಆಕೆಯ ಆಧಾರ್ ಕಾರ್ಡ್ ಮತ್ತು ಶಾಲಾ ದಾಖಲೆಗಳಲ್ಲಿ ವಯಸ್ಸು 19 ಎಂದು ತೋರಿಸಲಾಗಿದೆ. ಒಂದು ವಾರದ ನಂತರ ಬೋವಿ ಸಮುದಾಯದ ಹುಡುಗನೊಂದಿಗೆ ಆಕೆ ವಾಪಸ್ ಬಂದಿದ್ದು, ಆತನೊಂದಿಗೆ ವಾಸಿಸುವುದಾಗಿ ಖಚಿತಪಡಿಸಿದ್ದು, ಆಕೆಯ ಹೇಳಿಕೆ ಆಧಾರದ ಮೇಲೆ ಪೊಲೀಸರು ಕೇಸ್ ನ್ನು ಮುಕ್ತಾಯಗೊಳಿಸಿದ್ದಾರೆ. ಅಜ್ಜಯ್ಯ ಲಿಂಗಾಯಿತ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ.
ತದನಂತರ ಕುಟುಂಬಸ್ಥರು ಹುಡುಗಿಯ ವಯಸ್ಸು 18 ಎಂದು ತೋರಿಸುವ ಜನ್ಮ ದಿನಾಂಕವನ್ನು ಸಲ್ಲಿಸಿದ್ದು, ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರ ದೃಢೀಕರಣವನ್ನು ಪೊಲೀಸರು ಪರಿಶೀಲಿಸುತ್ತಿರುವಂತೆಯೇ, ಅಜ್ಜಯ್ಯ ಪುತ್ರಿಯ ಅಂತರ್ಜಾತಿ ವಿವಾಹದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

Advertisement