ನಮ್ಮ ಮೆಟ್ರೋ ನಿಲ್ದಾಣದ ಬಳಿ ದ್ವಿಚಕ್ರ ವಾಹನಕ್ಕೆ BMTC ಬಸ್ ಡಿಕ್ಕಿ: ಮಹಿಳೆ ಸಾವು!

ಇದೀಗ ಐದು ದಿನದಲ್ಲಿ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ. ಕಳೆದ ಶುಕ್ರವಾರ ಪೀಣ್ಯ 2ನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 25 ವರ್ಷದ ಸುಮಾ ಮೃತಪಟ್ಟಿದ್ದರು.
Representative image
ಸಾಂದರ್ಭಿಕ ಚಿತ್ರonline desk
Updated on

ಬೆಂಗಳೂರು: ಬೆಂಗಳೂರಿನಲ್ಲಿ BMTC ಬಸ್ ನಿಂದಾಗಿ ಮತ್ತೊಂದು ಜೀವಹಾನಿಯಾಗಿರುವುದು ವರದಿಯಾಗಿದೆ.

ಕೆಆರ್ ಮಾರ್ಕೆಟ್ ನಿಂದ ತೆರಳುತ್ತಿದ್ದ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ಈ ಘಟನೆ ನಡೆದಿದೆ.

ಕೆಆರ್ ಮಾರ್ಕೆಟ್‌ನಿಂದ ಹಂಚಿಪುರ ಕಾಲೋನಿಗೆ ಹೋಗುತ್ತಿದ್ದ ಬಸ್, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ದ್ವಿ ಚಕ್ರ ವಾಹನದ ಹಿಂಬದಿ ಕುಳಿತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.

Representative image
ಬೆಂಗಳೂರು: ರಸ್ತೆ ಬದಿ ಹೋಟೆಲ್ ಗೆ BMTC ಬಸ್ ಡಿಕ್ಕಿ; ಓರ್ವ ಸಾವು, ನಾಲ್ವರಿಗೆ ಗಾಯ

ಈ ವೇಳೆ ಸಾರ್ವಜನಿಕರು ಬಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಡ್ರೈವರ್ ಹಾಗೂ ಕಂಡಕ್ಟರ್ ಬಸ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ತಲಘಟ್ಟಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದೀಗ ಐದು ದಿನದಲ್ಲಿ ಬಿಎಂಟಿಸಿಗೆ ಇಬ್ಬರು ಬಲಿಯಾಗಿದ್ದಾರೆ. ಕಳೆದ ಶುಕ್ರವಾರ ಪೀಣ್ಯ 2ನೇ ಹಂತದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 25 ವರ್ಷದ ಸುಮಾ ಮೃತಪಟ್ಟಿದ್ದರು. ಇಂದು ಮತ್ತೊಂದು ಬಿಎಂಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com