
ಹಾವೇರಿ: ಅಕ್ಕನ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ತಮ್ಮನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹಾವೇರಿಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ರೈಲ್ವೆ ಇಲಾಖೆ ನೌಕರ ದಿಲೀಪ್ ಹಿತ್ತಲಮನಿ ಎಂಬಾತ ತನ್ನ ಅಕ್ಕ ಉಮಾ ಜೊತೆ ಚಳಗೇರಿ ಗ್ರಾಮದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದನು. ಇದನ್ನು ಕಂಡ ರಾಜಯ್ಯ ಕೋಪಗೊಂಡು ದಿಲೀಪ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ನಂತರ ರಾಜಯ್ಯ ಪೊಲೀಸರ ಮುಂದೆ ಶರಣಾಗಿದ್ದು ನನ್ನ ಅಕ್ಕನಿಗೆ ಮದುವೆಯಾಗಿದೆ ಬಿಟ್ಟು ಬಿಡು ಎಂದು ಹೇಳಿದ್ದೆ ಆದರೆ ಇದಕ್ಕೆ ದಿಲೀಪ ಒಪ್ಪಲಿಲ್ಲ. ಹೀಗಾಗಿ ಕೊಲೆ ಮಾಡಿದೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
Advertisement