Koppal: ಗವಿಸಿದ್ಧೇಶ್ವರ ಮಠದಲ್ಲಿ ಮುಸ್ಲಿಂ ಮಹಿಳೆ ಧ್ಯಾನ; ಹರಕೆ ತೀರಿಸಲು ಮುಂದು!

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿಯಾಗಿರುವ ಹಸೀನಾ ಬೇಗಂ ಅವರು ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ.
Muslim woman seen meditating at Gavimath temple in Koppal
ಗವಿಸಿದ್ದೇಶ್ವರ ಮಠದಲ್ಲಿ ಮುಸ್ಲಿಂ ಮಹಿಳೆ ಧ್ಯಾನ
Updated on

ಕೊಪ್ಪಳ: ಹಿಂದೂಗಳ ಪವಿತ್ರ ಯಾತ್ರಾತಾಣ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಹಿಂದೂಗಳೇ ಹೆಚ್ಚಾಗಿ ಭೇಟಿ ನೀಡುವ ಕೊಪ್ಪಳದ ಗವಿಸಿದ್ದೆಶ್ವರ ಮಠದಲ್ಲಿ ಮುಸ್ಲಿಂ ‌ಮಹಿಳೆಯೊಬ್ಬರು ಕಳೆದ ಎಂಟು ದಿನಗಳಿಂದ ಧ್ಯಾನ ಮಾಡುತ್ತಿದ್ದು, ತಮ್ಮ ಹರಕೆಯ ತೀರಿಸಲು ಮತ್ತು ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡುತ್ತಿರುವುದಾಗಿ ಮುಸ್ಲಿಂ ಮಹಿಳೆ ಹೇಳಿಕೊಂಡಿದ್ದಾರೆ.

ಕಳೆದ ಎಂಟು ದಿನಗಳಿಂದ ಮಠಕ್ಕೆ ಬರುತ್ತಿರುವ ಹಸೀನಾ ಬೇಗಂ ಎಂಬ ಮುಸ್ಲಿಂ ಮಹಿಳೆ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಾರೆ.

ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿ ಮೋತಿ ನಿವಾಸಿಯಾಗಿರುವ ಹಸೀನಾ ಬೇಗಂ ಅವರು ಗವಿ ಮಠದಲ್ಲಿ ನಿರಂತರ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90 ರಷ್ಟು ಹಿಂದೂ ಧರ್ಮದವರು ಗವಿ ಮಠಕ್ಕೆ ಬರುತ್ತಾರೆ. ಆದರೆ ಆವರಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಧ್ಯಾನ ಮಾಡುತ್ತಿದ್ದಾರೆ.

Muslim woman seen meditating at Gavimath temple in Koppal
'ಮೈಸೂರನ್ನಾಳಿದ ಪ್ರತಿ ಮಹಾರಾಜರೂ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆ; ಸಿದ್ದರಾಮಯ್ಯ ಕೊಡುಗೆಗೆ 2018ರಲ್ಲಿ ಜನ ತಕ್ಕ ಉತ್ತರ ನೀಡಿದ್ದಾರೆ'

'ಗವಿ ಮಠದ ಶ್ರೀಗಳನ್ನೇ ನಂಬಿದ್ದೇನೆ'

ಗವಿ ಮಠದ ಶ್ರೀಗಳು ನಿತ್ಯ ಸಂಜೆ ಹೊತ್ತಲ್ಲಿ ಕುಳಿತುಕೊಳ್ಳುವ ಜಾಗದ ಮುಂದೆಯೆ ಮಹಿಳೆಯಿಂದ ಧ್ಯಾನ ಮಾಡುತ್ತಿದ್ದು, ಮಾನಸಿಕ ನೆಮ್ಮದಿಗಾಗಿ ಒಟ್ಟು 11 ದಿನ ಧ್ಯಾನ ಮಾಡುವುದಾಗಿ ಹಸೀನಾ ಬೇಗಂ ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಹಸೀನಾ ಬೇಗಂ, 'ನಾನು 13 ವರ್ಷದಿಂದ ಗವಿ ಮಠದ ಶ್ರೀಗಳನ್ನು ನಂಬಿದ್ದೇನೆ. ಮನಸ್ಸಿಗೆ ನೆಮ್ಮದಿ ಇರಲಿಲ್ಲ, ಬಹಳ ಕಷ್ಟ ಇತ್ತು. ಹೀಗಾಗಿ ಶ್ರೀಗಳ ಬಳಿ ಕೇಳಿಕೊಂಡು 8 ದಿನದಿಂದ ಧ್ಯಾನ ಮಾಡುತ್ತಿದ್ದೇನೆ. ನಾನು ಮುಸ್ಲಿಂ ಆದರೂ ಎಲ್ಲಾ ಧರ್ಮ ಒಂದೇ’ ಎಂದು ಹೇಳಿದ್ದಾರೆ.

ಅಂತೆಯೇ ‘ನಾನು 13 ವರ್ಷದಿಂದ ಗವಿ ಮಠದ ಶ್ರೀಗಳನ್ನು ನಂಬಿದ್ದೇನೆ. ಮಠದಲ್ಲಿ ಮುಸ್ಲಿಂ ಎಂಬ ಬೇಧ-ಭಾವ ಇಲ್ಲ. ನನಗೆ ಒಬ್ಬರಿಂದ ನೋವು ಆಗಿದೆ. ಹಾಗಾಗಿ ನಿತ್ಯ ಒಂದು ಗಂಟೆ ಧ್ಯಾನಕ್ಕೆ ಕೂತಿದ್ದೇನೆ. ನನಗೆ ಬಹಳ ಕಷ್ಟ ಇದೆ, ಪರಿಹಾರ ಆಗತ್ತೆ. ನನ್ನ ಮಕ್ಕಳ ಮೇಲೂ ಅಜ್ಜರ ಆಶೀರ್ವಾದ ಇದೆ. ನಾಗಪ್ಪ, ಬಸವಣ್ಣ ಎಲ್ಲರನ್ನೂ ಪೂಜೆ ಮಾಡುತ್ತೇನೆ. ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

Muslim woman seen meditating at Gavimath temple in Koppal
'ಇಸ್ಲಾಂಗೆ ಮತಾಂತರ' ಆರೋಪ: ಮೂವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ಅಂದಹಾಗೆ ಕೊಪ್ಪಳದ ಗವಿಮಠ (Gavisiddeshwar Math) ಶಿಕ್ಷಣ ಸೇರಿದಂತೆ ಹತ್ತು ಹಲವು ವಿಚಾರಗಳಿಗೆ ಸುಪ್ರಸಿದ್ಧವಾಗಿದೆ. ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಎಂದು ಕರೆಯುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com