Representative Image
ಪೊಲೀಸ್ (ಸಾಂಕೇತಿಕ ಚಿತ್ರ)online desk

ಬೆಂಗಳೂರು: ಲ್ಯಾವೆಲ್ಲೆ ರಸ್ತೆಯ 5 ಅಂಗಡಿಗಳಲ್ಲಿ ದರೋಡೆ; ಖತರ್ನಾಕ್‌ ಕಳ್ಳರಿಗಾಗಿ ಪೊಲೀಸರ ಹುಡುಕಾಟ

ಐಆರ್'ಐಎಸ್ ಅರೋಮಾ ಬೂಟೀಕ್, ಲೂಯಿಸ್ ಫಿಲಿಪ್ ಶೋರೂಮ್, ಜೀನ್-ಕ್ಲೌಡ್ ಬಿಗುಯಿನ್ ಸಲೂನ್ & ಸ್ಪಾ, ಹಕಿಮ್ಸ್ ಆಲಿಮ್ ಸಲೂನ್ ಮತ್ತು ನೈಕಾ ಲಕ್ಸ್ ಕಾಸ್ಮೆಟಿಕ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.
Published on

ಬೆಂಗಳೂರು: ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರ (ಡಿಸಿಪಿ) ಕಚೇರಿಗೆ ಸಮೀಪವಿರುವ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐದು ಅಂಗಡಿಗಳನ್ನು ಗುರಿಯಾಗಿರಿಸಿಕೊಂಡಿರುವ ಕಳ್ಳರ ಗ್ಯಾಂಗ್ ವೊಂದು, ಬೆಲೆಬಾಳುವ ವಸ್ತುಗಳು ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದಾರೆ.

ಗುರುವಾರ ಬೆಳಗಿನ ಜಾವ 3.30 ರಿಂದ 5.30 ರ ನಡುವೆ ಈ ಕಳ್ಳತನ ನಡೆದಿದ್ದು, ಎಲ್ಲಾ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ.

ಐಆರ್'ಐಎಸ್ ಅರೋಮಾ ಬೂಟೀಕ್, ಲೂಯಿಸ್ ಫಿಲಿಪ್ ಶೋರೂಮ್, ಜೀನ್-ಕ್ಲೌಡ್ ಬಿಗುಯಿನ್ ಸಲೂನ್ & ಸ್ಪಾ, ಹಕಿಮ್ಸ್ ಆಲಿಮ್ ಸಲೂನ್ ಮತ್ತು ನೈಕಾ ಲಕ್ಸ್ ಕಾಸ್ಮೆಟಿಕ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.

ಈ ಐದೂ ಅಂಗಡಿಗಳಲ್ಲಿ ನಡೆದಿರುವ ಕಳ್ಳತನದಲ್ಲಿ ಒಂದೇ ಗ್ಯಾಂಗ್ ಭಾಗಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ.

Representative Image
ರೈಲಿನಲ್ಲಿ ಕಳ್ಳತನ: ಬೆಂಗಳೂರಿನಲ್ಲಿ ವಾಹನ ವ್ಯಾಪಾರಿ ಬಂಧನ, 81 ಗ್ರಾಂ ಚಿನ್ನ ವಶ

ಈ ಸಂಬಂಧ ಗುರುವಾರ ಎಲ್ಲಾ ಅಂಗಡಿಗಳ ವ್ಯವಸ್ಥಾಪಕರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳು ಅಂಗಡಿಗಳ ಶೆಟರ್ ಬೀಗಗಳನ್ನು ಮುರಿದಿದ್ದು, ಗಾಜಿನ ಬಾಗಿಲುಗಳನ್ನು ಹೊಡೆದು ಹಾಕಿದ್ದಾರೆಂದು ತಿಳಿಸಿದ್ದಾರೆ.

ಆರೋಪಿಗಳು 20ರ ಹರೆಯದವರೆಂದು ಶಂಕಿಸಲಾಗಿದ್ದು, ಇಬ್ಬರೂ ರಾಡ್ ಗಳನ್ನು ಬಳಸಿ ಬೀಗಗಳನ್ನು ಒಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಒಳಗೆ ಹೋದ ಆರೋಪಿಗಳು ಕ್ಯಾಶ್ ಕೌಂಟರ್ ನತ್ತ ತೆರಳಿ, ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಆರೋಪಿಗಳು ಅಂಗಡಿಗಳು ತೆರೆಯುವ ಹಾಗೂ ಮುಚ್ಚುವ ಸಮಯವನ್ನು ಗಮನಿಸಿದ್ದು, ನಂತರ ಕಳ್ಳತನ ಮಾಡಿದ್ದಾರೆ. ಇದೀಗ ಸುತ್ತಮುತ್ತಲಿನ ಸಿಸಿಟಿವಿಗಳಿಂದ ಆರೋಪಿಗಳ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆರೋಪಿಗಳು ಒಟ್ಟು 1.13 ಲಕ್ಷ ರೂ. ಹಣವನ್ನು ದೋಚಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಐದು ಎಫ್‌ಐಆರ್‌ಗಳು ದಾಖಲಾಗಿದ್ದು, ಕಳ್ಳತನ (ಬಿಎನ್‌ಎಸ್ 305) ಮತ್ತು ರಾತ್ರಿಯಲ್ಲಿ ಅಪರಾಧ ಮಾಡಲು ಒಳನುಗ್ಗುವಿಕೆ (ಬಿಎನ್‌ಎಸ್ 331(4)) ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com