ಆಪತ್ತಿಗೆ ಕಾರಣವಾಯ್ತು ಕುತೂಹಲ: ಸ್ನೇಹಿತನ ಪಿಸ್ತೂಲ್ ನೋಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಸಿಡಿದ ಗುಂಡು, ಸಾವು-ಬದುಕಿನ ನಡುವೆ ಹೋರಾಟ

ಕಾಕ್ಸ್ ಟೌನ್‌ನ ನಿವಾಸಿ ರೇಚಲ್ ಅವರು ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿ ಇರುವ ನಿಖಿಲ್ ನಾಯಕ್‌ ಅವರ ಮನೆಗೆ ತೆರಳಿದ್ದರು.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಸ್ನೇಹಿತನ ಬಳಿಯಿದ್ದ ಪರವಾನಗಿ ಪಡೆದ ಪಿಸ್ತೂಲ್'ನ್ನು ನೋಡುತ್ತಿದ್ದ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಗುಂಡು ತಗುಲಿರುವ ಘಟನೆ ಹೊರಮಾವು ಬಡಾವಣೆಯ ಆಶೀರ್ವಾದ ಕಾಲೊನಿಯ ಮನೆಯೊಂದರಲ್ಲಿ ಸೋಮವಾರ ನಡೆದಿದೆ.

ಕಾಕ್ಸ್ ಟೌನ್ ನಿವಾಸಿಯಾದ ರೇಚೆಲ್ (32) ಗಾಯಗೊಂಡ ಮಹಿಳೆಯಾಗಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಘಟನೆ ಬೆನ್ನಲ್ಲೇ ರೇಚೆಲ್‌ ಅವರ ಸ್ನೇಹಿತ ನಿಖಿಲ್ ನಾರಾಯಣಸ್ವಾಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ 125ಬಿ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ 25 (1ಬಿ), 27, 30ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾಕ್ಸ್ ಟೌನ್‌ನ ನಿವಾಸಿ ರೇಚಲ್ ಅವರು ಜುಲೈ 28ರಂದು ರಾತ್ರಿ ಹೊರಮಾವು ಸಮೀಪದ ಆಶೀರ್ವಾದ ಕಾಲೊನಿಯಲ್ಲಿ ಇರುವ ನಿಖಿಲ್ ನಾಯಕ್‌ ಅವರ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ನಿಖಿಲ್ ನಾಯಕ್ ಅವರು ಶೌಚಾಲಯಕ್ಕೆ ಹೋಗಿದ್ದರು.

File photo
ಹುಬ್ಬಳ್ಳಿ: ತಪ್ಪಿಸಿಕೊಳ್ಳಲು ಯತ್ನ, ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

ಮನೆಗೆ ತೆರಳಿದ್ದ ರೇಚಲ್ ಅವರು ಸ್ನೇಹಿತನ ಬಳಿಯಿದ್ದ ಪರವಾನಗಿ ಹೊಂದಿದ್ದ ಪಿಸ್ತೂಲ್ ಅನ್ನು ನೋಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿದೆ. ರೇಚಲ್‌ ಅವರ ಹೊಟ್ಟೆಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ನಿಖಿಲ್ ಅವರು ರೇಚಲ್‌ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಂಡು ತಗುಲಿದ ಪರಿಣಾಮ ರೇಚಲ್ ಅವರ ಒಂದು ಮೂತ್ರಪಿಂಡಕ್ಕೆ ತೀವ್ರವಾಗಿ ಹಾನಿಯಾಗಿದೆ. ಇದೀಗ ರೇಚಲ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ರೇಚಲ್ ಸಹೋದರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪರವಾನಗಿ ಹೊಂದಿರುವವರು ಬಂದೂಕುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು, ವಿಶೇಷವಾಗಿ ಮಕ್ಕಳು ಮತ್ತು ಅನಧಿಕೃತ ವ್ಯಕ್ತಿಗಳಿಂದ ದೂರವಿಡಬೇಕು. ಶಸ್ತ್ರಾಸ್ತ್ರ ದುರ್ಬಳಕೆ ಆಗದಂತೆ ಇರಿಸಿಕೊಳ್ಳಬೇಕು. ಈ ಪ್ರಕರಣದಲ್ಲಿ ಯಾವುದೇ ಅನುಮಾನಗಳು ವ್ಯಕ್ತವಾಗಿಲ್ಲ. ರೇಚಲ್ ಸಹೋದರಿ ನೀಡಿರುವ ದೂರಿನ ಅನ್ವಯ ನಿಖಿಲ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com