ಸ್ವಲ್ಪದರಲ್ಲೆ ಯುವತಿ ಬಚಾವ್: ರಸ್ತೆಮಧ್ಯೆ BMTC ಬಸ್​ ಚಾಲಕನ ಹುಚ್ಚಾಟ; Video Viral!

ಯುವತಿ ಮತ್ತು ಬಿಎಂಟಿಸಿ ಬಸ್​ ಚಾಲಕನ ನಡುವೆ ಗಲಾಟೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ಯುವತಿ ಚಾಲಕನನ್ನು ಪ್ರಶ್ನೆ ಮಾಡಲು ಮುಂದಾದಾಗ ಚಾಲಕ ಆಕೆಯ ಮೇಲೆ ಬಸ್​ ನುಗ್ಗಿಸಿದ್ದಾನೆ.
ಸ್ವಲ್ಪದರಲ್ಲೆ ಯುವತಿ ಬಚಾವ್: ರಸ್ತೆಮಧ್ಯೆ BMTC ಬಸ್​ ಚಾಲಕನ ಹುಚ್ಚಾಟ; Video Viral!
Updated on

ಬೆಂಗಳೂರು: ನಗರದ ಕಸ್ತೂರಿ ಬಾ ರಸ್ತೆಯ ಕ್ಷೀನ್ಸ್ ಜಂಕ್ಷನ್ ಬಳಿ ಯುವತಿ ಮೇಲೆ BMTC ಚಾಲಕ ಬಸ್ ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ. ಕಳೆದ ಮೇ 23ರ ಸಂಜೆ 5.40ರ ಸುಮಾರಿಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಮತ್ತು ಬಿಎಂಟಿಸಿ ಬಸ್​ ಚಾಲಕನ ನಡುವೆ ಗಲಾಟೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದ ಯುವತಿ ಚಾಲಕನನ್ನು ಪ್ರಶ್ನೆ ಮಾಡಲು ಮುಂದಾದಾಗ ಚಾಲಕ ಆಕೆಯ ಮೇಲೆ ಬಸ್​ ನುಗ್ಗಿಸಿದ್ದಾನೆ. ಆದರೆ ಯುವತಿ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ ಚಾಲಕ ಪ್ರಶಾಂತ್ ಎಂಬಾತನನ್ನು ಬಿಎಂಟಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಸ್ವಲ್ಪದರಲ್ಲೆ ಯುವತಿ ಬಚಾವ್: ರಸ್ತೆಮಧ್ಯೆ BMTC ಬಸ್​ ಚಾಲಕನ ಹುಚ್ಚಾಟ; Video Viral!
ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್; ಇಬ್ಬರ ಬಂಧನ

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com