IPL 2025 ಟ್ರೋಫಿ ಹೊತ್ತು 'RCB Champions' ಇಂದು ಬೆಂಗಳೂರಿಗೆ: ನಗರದಲ್ಲಿ Victory Parade; ಎಲ್ಲಿಂದ, ಯಾವಾಗ ಶುರು..?

ಗೆಲುವು ಬೆನ್ನಲ್ಲೇ ಆರ್​ಸಿಬಿ ಫ್ರಾಂಚೈಸಿ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.
ಆರ್'ಸಿಬಿ
ಆರ್'ಸಿಬಿ
Updated on

ಬೆಂಗಳೂರು: ಕೋಟ್ಯಾಂತರ ಅಭಿಮಾನಿಗಳ ಬೆಂಬಲ, ಹಾರೈಕೆ, ಪ್ರಾರ್ಥನೆ ಕೊನೆಗೂ ಫಲಿಸಿದೆ. 18ನೇ ಪ್ರಯತ್ನದಲ್ಲಿ ಆರ್'ಸಿಬಿ ತಂಡ ಟ್ರೋಫಿಗೆ ಮುತ್ತಿಟ್ಟಿದೆ. ಈ ಐತಿಹಾಸಿಕ ಗೆಲುವು ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.

ಗೆಲುವು ಬೆನ್ನಲ್ಲೇ ಆರ್​ಸಿಬಿ ಫ್ರಾಂಚೈಸಿ ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಗೆಲುವಿನ ಸಂಭ್ರಮಾಚರಣೆ ಮಾಡಲು ವಿಜಯೋತ್ಸವದ ಮೆರವಣಿಗೆಯನ್ನು ಘೋಷಣೆ ಮಾಡಿದೆ.

ಇಂದು ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಆರ್​ಸಿಬಿ ವಿಜಯೋತ್ಸವದ ಮೆರವಣಿಗೆ ನಡೆಯಲಿದೆ. ಈ ವಿಜಯೋತ್ಸವ ಮೆರವಣಿಗೆ ವಿಧಾನಸೌಧದಿಂದ ಆರಂಭವಾಗಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ. ಆಟಗಾರರನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗಿದ್ದು, ವಿಜಯೋತ್ಸವ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾಗುವ ನಿರೀಕ್ಷೆಗಳಿವೆ.

ಈ ಕುರಿತು ಆರ್​ಸಿಬಿ ತಂಡದ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇದು ಆರ್‌ಸಿಬಿಯ ವಿಜಯೋತ್ಸವ ಪರೇಡ್. ಇದು ನಿಮಗಾಗಿ, 12th ಮ್ಯಾನ್ ಆರ್ಮಿ ಎಂದು ಅಭಿಮಾನಿಗಳನ್ನು ಉಲ್ಲೇಖಿಸಲಾಗಿದ್ದು, ಆರ್​ಸಿಬಿ ಸೋಲಿನಲ್ಲಿ ಮತ್ತು ಗೆಲುವಿನಲ್ಲೂ ಪ್ರತಿ ಭಾರಿ ಬೆಂಬಲಾವಗಿ ನಿಂತ ನಿಷ್ಠಾವಂತ ಅಭಿಮಾನಿಗಳೆ ಈ ಗೆಲುವಿನ ಕಿರೀಟ ನಿಮ್ಮದೇ ಎಂದು ಹೇಳಿದೆ.

ವಿಜಯೋತ್ಸವ ಮೆರವಣಿಗೆಯನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲೈವ್‌ ಆಗಿಯೂ ವೀಕ್ಷಿಸಬಹುದು. ಜೊತೆಗೆ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕವೂ ವೀಕ್ಷಿಸುವ ಅವಕಾಶವಿದೆ.

ವಿಜಯೋತ್ಸವ ಮೆರವಣಿಗೆ ವಿವರ ಇಂತಿದೆ...

  • ಬೆಳಿಗ್ಗೆ 10: ವಿರಾಟ್ ಮತ್ತು ತಂಡ ಅಹಮದಾಬಾದ್‌ನಿಂದ ಹೊರಡುತ್ತದೆ

  • ಮಧ್ಯಾಹ್ನ 1:30: ಬೆಂಗಳೂರಿಗೆ ಆಗಮಿಸಲಿದೆ (ಎಚ್‌ಎಎಲ್ ವಿಮಾನ ನಿಲ್ದಾಣ)

  • 4-5 ಗಂಟೆಗೆ: ವಿಧಾನಸೌಧದಲ್ಲಿ ಸಿಎಂ ಮತ್ತು ಡಿಸಿಎಂ ಭೇಟಿ.

  • ಸಂಜೆ 5 ಗಂಟೆಗೆ: ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ತೆರೆದ ಬಸ್‌ನಲ್ಲಿ ಮೆರವಣಿಗೆ

  • ಸಂಜೆ 6 ಗಂಟೆಗೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ

ಆರ್'ಸಿಬಿ
IPL 2025 Final: 'ನನ್ನ ಹೃದಯ, ನನ್ನ ಆತ್ಮ, ಈ ತಂಡಕ್ಕೆ ನನ್ನ ಯೌವನವನ್ನೇ ನೀಡಿದ್ದೇನೆ; RCB ಗೆಲುವಿನ ಬಳಿಕ Virat Kohli ಭಾವುಕ ನುಡಿ!

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com