
ಶಿವಮೊಗ್ಗ: ಐಪಿಎಲ್ ಫೈನಲ್ ನಲ್ಲಿ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ತಡರಾತ್ರಿ ಸಂಭ್ರಮಾಚರಣೆ ವೇಳೆ ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಯುವಕ ಸಾವಿಗೀಡಾಗಿದ್ದಾನೆ.
ವೆಂಕಟೇಶ ನಗರದ ನಿವಾಸಿ ಅಭಿನಂದನ್ (21) ಮೃತ ಯುವಕ. ಉಷಾ ನರ್ಸಿಂಗ್ ಹೋಂ ಸರ್ಕಲ್ ಬಳಿಯ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಅಪಘಾತ ಸಂಭವಿಸಿದೆ.
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಗೆ ಯುವಕರು ಬೈಕ್ ಗಳಲ್ಲಿ ಹೊರಟಿದ್ದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿವೆ. ತೀವ್ರ ಗಾಯಗೊಂಡಿದ್ದ ಅಭಿನಂದನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಇನ್ನೊಂದು ಬೈಕ್ನಲ್ಲಿದ್ದ ಮಿಥುನ್ ಹಾಗೂ ಅಭಿಷೇಕ್ ಗಾಯಗೊಂಡಿದ್ದಾರೆ.
ಮಂಗಳವಾರ ರಾತ್ರಿ RCB ಟೀಂ ಗೆಲುವು ಸಾಧಿಸುತ್ತಿದ್ದಂತೆ ಯುವಕರು, ಕ್ರಿಕೆಟ್ ಪ್ರೇಮಿಗಳು ಉಷಾ ನರ್ಸಿಂಗ್ ಹೋಂ ಬಳಿ ಸಂಭ್ರಮಾಚರಣೆ ನಡೆಸುತ್ತಿದ್ದರು. ನೂರು ಅಡಿ ರಸ್ತೆ ರವೀಂದ್ರ ನಗರದ ಕಡೆ ರಸ್ತೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕುಣಿಯುತ್ತಿದ್ದರು. ಈ ವೇಳೆ ಮಿಥುನ್ ಹಾಗೂ ಅಭಿಷೇಕ್ ತಮ್ಮ ಬೈಕ್ನಲ್ಲಿ ಉಷಾ ನರ್ಸಿಂಗ್ ಹೋಂ ಕಡೆಯಿಂದ ವಿನೋಬನಗರ ಕಡೆಗೆ ಹೋಗುತ್ತಿದ್ದಾಗ, ಅದೇ ಕಡೆಯಿಂದ ಅಭಿಷೇಕ್ ಬರುತ್ತಿದ್ದು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement