
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಭೇಟಿ ಉದ್ದೇಶ ನನಗೆ ತಿಳಿದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ದೆಹಲಿಗೆ ಭೇಟಿ ನೀಡಿದ್ದು, ಈ ಭೇಟಿ ಉದ್ದೇಶ ನನಗೆ ತಿಳಿದಿಲ್ಲ. ಬೆಂಗಳೂರು ಕಾಲ್ತುಳಿತ ಘಟನೆ ಬಗ್ಗೆ ಹೈಕಮಾಂಡ್'ಗೆ ಮಾಹಿತಿ ನೀಡಲು ಹೋಗಿರಬಹುದು. ಪಕ್ಷದ ಹೈಕಮಾಂಡ್ ನನಗೆ ಕರೆ ಮಾಡಿಲ್ಲ. ಅವರಿಂದ ಕರೆ ಬಂದಿದ್ದರೆ ನಾನೂ ಕೂಡ ಹೋಗುತ್ತಿದ್ದ ಎಂದು ಹೇಳಿದರು.
ಬೆಂಗಳೂರು ಕಾಲ್ತುಳಿತ ದುರಂತ ಕುರಿತು ನಿನ್ನೆ ಸಭೆ ನಡೆಸಲಾಗಿತ್ತು. ನ್ಯಾಯಾಲಯಕ್ಕೆ ಸರ್ಕಾರ ವರದಿ ಸಲ್ಲಿಸಬೇಕಿದ್ದು, ಸರ್ಕಾರದ ಪರವಾಗಿ ಯಾವೆಲ್ಲಾ ಮಾಹಿತಿ ನೀಡಬೇಕೆಂಬುದನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು.
ಏತನ್ಮಧ್ಯೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ತಂಗಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರೊಂದಿಗೆ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆಂದು ವರದಿಗಳು ತಿಳಿಸಿವೆ.
Advertisement