ಬೆಂಗಳೂರು: ರೈಲ್ವೇ ಇ-ಟಿಕೆಟ್ ಅಕ್ರಮ ಮಾರಾಟ, ಆರೋಪಿ ಬಂಧನ

ಬಂಧಿತ ಕೋಲಾರ ಜಿಲ್ಲೆಯ ನರಸಾಪುರದ ವ್ಯಕ್ತಿ ರೈಲ್ವೆಯಿಂದ ಯಾವುದೇ ಪರವಾನಗಿ ಇಲ್ಲದೆ ರೈಲ್ವೆ ಇ-ಟಿಕೆಟ್‌ಗಳ ಅನಧಿಕೃತ ಖರೀದಿ ಮತ್ತು ಮಾರಾಟ ಮಾಡುತ್ತಿದ್ದ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಅಕ್ರಮವಾಗಿ ರೈಲ್ವೆ ಇ-ಟಿಕೆಟ್ ಮಾರುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಸ್ಯಾಟಲೈಟ್ ಗೂಡ್ಸ್‌ ಟರ್ಮಿನಲ್‌ನ ರೈಲ್ವೆ ಪೊಲೀಸ್‌ ದಳ ಬಂಧಿಸಿ, ರೂ.44,645 ಮೌಲ್ಯದ ಇ-ಟಿಕೇಟ್‌ನ್ನು ಜಪ್ತಿ ಮಾಡಿದ್ದಾರೆ.

ಬಂಧಿತ ಕೋಲಾರ ಜಿಲ್ಲೆಯ ನರಸಾಪುರದ ವ್ಯಕ್ತಿ ರೈಲ್ವೆಯಿಂದ ಯಾವುದೇ ಪರವಾನಗಿ ಇಲ್ಲದೆ ರೈಲ್ವೆ ಇ-ಟಿಕೆಟ್‌ಗಳ ಅನಧಿಕೃತ ಖರೀದಿ ಮತ್ತು ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಆತನ ಮೊಬೈಲ್‌ನಲ್ಲಿ ರೂ.2335 ಲೈವ್ ಟಿಕೆಟ್, 742,310 ಮೌಲ್ಯದ ಸಂಚಾರ ಪೂರ್ಣಗೊಂಡ ಟಿಕೆಟ್ ಪತ್ತೆಯಾಗಿದೆ. ಈತ ಐಆರ್‌ಸಿಟಿಸಿಯ ವಿವಿಧ ಐಡಿ ಮಾಡಿ ಕೊಂಡು ಟಿಕೆಟ್ ಮುಂಗಡ ಕಾಯ್ದಿರಿಸುತ್ತಿದ್ದ. ಬಳಿಕ ಅವುಗಳ ಮೇಲೆ ಕಮಿಷನ್ ಪಡೆದು ರೂ.200-300ಗೆ ಮಾರುತ್ತಿದ್ದ.

ದಾಳಿ ವೇಳೆ ಈತನ ಇ-ಮೇಲ್‌ಗೆ 4 ಐಆರ್‌ಸಿಟಿಸಿ ಖಾತೆ ಲಿಂಕ್ ಆಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಆರೋಪಿಯನ್ನು ರೈಲ್ವೆ ಆ್ಯಕ್ಟ್ 143 ರಡಿ ಬಂಧಿಸಲಾಯಿತು ಎಂದು ನೈಋತ್ಯ ರೈಲ್ವೆ ವಿಭಾಗ ತಿಳಿಸಿದೆ. ದಾಳಿ ಮತ್ತು ತನಿಖೆಯನ್ನು ಸಬ್-ಇನ್ಸ್‌ಪೆಕ್ಟರ್ ವೆಂಕಟೇಶ್ ಮೂರ್ತಿ ಮತ್ತು ಅವರ ತಂಡ ನಡೆಸಿದ್ದರು.

Representational image
ರೈಲು ಪ್ರಯಾಣಿಕರ ಗಮನಕ್ಕೆ: ಜುಲೈ 1 ರಿಂದ ತತ್ಕಾಲ್ ಟಿಕೆಟ್‌ ಬುಕ್ ಮಾಡಲು ಆಧಾರ್ ಕಡ್ಡಾಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com