Bengaluru: Air India ವಿಮಾನದಲ್ಲಿ ಹೈಡ್ರಾಮಾ; ಲಗೇಜ್ ವಿಚಾರಕ್ಕೆ ಜಟಾಪಟಿ, ಸಹ ಪ್ರಯಾಣಿಕನಿಗೂ ಬಾರಿಸಿದ ಮಹಿಳೆ! ಮುಂದಾಗಿದ್ದೇನು? Video

ಬೆಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 2749 F ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಲಗೇಜ್ ಸೀಟ್ ಬಳಿ ಇರಿಸಿದ್ದಕ್ಕೆ ವಿಮಾನ ಸಿಬ್ಬಂದಿ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ.
Woman Mid-Air Meltdown Over Luggage Onboard Bengaluru-Surat Flight
ವಿಮಾನದಲ್ಲಿ ಮಹಿಳೆ ಹೈಡ್ರಾಮಾ
Updated on

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ವಿಚಾರಕ್ಕೆ ಮಹಿಳೆಯೊಬ್ಬರು ಗಲಾಟೆ ತೆಗೆದಿದ್ದು, ಸಮಾಧಾನ ಮಾಡಲು ಬಂದ ಸಹ ಪ್ರಯಾಣಿಕನಿಗೂ ಭಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಬೆಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI 2749 F ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಲಗೇಜ್ ಸೀಟ್ ಬಳಿ ಇರಿಸಿದ್ದಕ್ಕೆ ವಿಮಾನ ಸಿಬ್ಬಂದಿ ಪ್ರಶ್ನಿಸಿದಾಗ ಅನುಚಿತವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಮಹಿಳೆ ಅದನ್ನು ಪ್ರಶ್ನಿಸಿದ ಸಹ ಪ್ರಯಾಣಿಕರ ಮೇಲೂ ಹಲ್ಲೆ ಮಾಡಿದ್ದಾರೆ.

ಮೂಲಗಳ ಪ್ರಕಾರ ಯಲಹಂಕ ಮೂಲದ ವ್ಯಾಸ್ ಹಿರಲ್ ಮೋಹನ್ ಬಾಯಿ ಎಂಬ ಮಹಿಳೆ ಇಡೀ ಗಲಾಟೆಯ ಕೇಂದ್ರ ಬಿಂದುವಾಗಿದ್ದು, ಜೂನ್ 17ರಂದು ಬೆಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಎರ್ ಇಂಡಿಯಾ ವಿಮಾನದಲ್ಲಿ ತಮ್ಮ ಲಗೇಜ್ ಅನ್ನು ಲಗೇಜ್ ಬಾಕ್ಸ್ ನಲ್ಲಿ ಇಡದೇ ತಮ್ಮ ಸೀಟ್ ನ ಪಕ್ಕದಲ್ಲಿ ಇರಿಸಿಕೊಂಡಿದ್ದಾರೆ. ಇದರಿಂದ ಇತರೆ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಸಿಬ್ಬಂದಿಗೆ ದೂರಿದ್ದಾರೆ.

Woman Mid-Air Meltdown Over Luggage Onboard Bengaluru-Surat Flight
Air India plane crash effect: 11A ಸೀಟ್ ಗೆ ಹೆಚ್ಚಿದ ಬೇಡಿಕೆ, 'ದುಬಾರಿಯಾದರೂ ಬೇಕೇ ಬೇಕು' ಎನ್ನುತ್ತಿರುವ ಪ್ರಯಾಣಿಕರು! ವಿಮಾನ ತಜ್ಞರು ಹೇಳೋದೇನು?

ಬಳಿಕ ಮಹಿಳೆಯ ಬಳಿ ಬಂದ ಸಿಬ್ಬಂದಿ ಲಗೇಜ್ ಅನ್ನು ಲಗೇಜ್ ಬಾಕ್ಸ್ ನಲ್ಲಿಡುವಂತೆ ಸೂಚಿಸಿದ್ದಾರೆ. ಈ ವೇಳೆ ಮಹಿಳೆ ವಾಕ್ಸಮರ ನಡೆಸಿದ್ದಾರೆ. ಸಿಬ್ಬಂದಿಯ ಜೊತೆ ಕಿರಿಕ್ ಮಾಡಿದ ಮಹಿಳೆ, ಸಹ ಪ್ರಯಾಣಿಕರೊಂದಿಗೂ ರಂಪಾಟ ಮಾಡಿದ್ದಾಳೆ.

ವಿಮಾನ ಸಿಬ್ಬಂದಿ ಮಹಿಳೆಯನ್ನು ಇಳಿಸಿ ವಿಮಾನ ನಿಲ್ದಾಣ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಮಹಿಳೆ ಪೊಲೀಸ್ ಠಾಣೆಯಲ್ಲೂ ಕಿರಿಚಾಡಿ, ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆರೋಪವಿದೆ.

ಸದ್ಯ ಮಹಿಳೆ ವಿರುದ್ಧ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಇನ್ನು ವಿಮಾನದಲ್ಲಿನ ಮಹಿಳೆಯ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com