
ಬೆಂಗಳೂರು: ಮಹಿಳೆಯೊಬ್ಬರು ತನ್ನ ಎಂಟು ವರ್ಷದ ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ, ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಗೃಹಿಣಿ ಮಾಲಾ (30) ಮತ್ತು ಖಾಸಗಿ ಶಾಲೆಯಲ್ಲಿ 2 ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅವರ ಕಿರಿಯ ಮಗಳು ಅನುಶ್ರೀ (8) ಎಂದು ಗುರುತಿಸಲಾಗಿದೆ. ಮಾಲಾ ಅವರ ಪತಿ ಮತ್ತು 10 ವರ್ಷದ ಮಗಳು ಬದುಕುಳಿದಿದ್ದಾರೆ.
ಮನೆಯಲ್ಲಿ ಆಸ್ತಿ ವಿವಾದದ ನಂತರ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಆಕೆಯ ಪತಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ಚರ್ಚಿಸಿದ ನಂತರ 10 ಗುಂಟೆ ಭೂಮಿಯನ್ನು ಸಂಬಂಧಿಕರಿಗೆ ವರ್ಗಾಯಿಸಿದ್ದು. ಪತಿ ತನಗೆ ತಿಳಿಸದೆ ಆಸ್ತಿ ವರ್ಗಾವಣೆ ಮಾಡಿದ್ದರಿಂದ ಮಾಲಾ ಅಸಮಾಧಾನಗೊಂಡಿದ್ದರು, ಇದು ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ, ಮಾಲಾ ಮತ್ತು ಅನುಶ್ರೀ ಇಬ್ಬರೂ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಅವರನ್ನು ಹುಡುಕಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಕೃಷಿ ಹೊಂಡದಲ್ಲಿ ಅವರ ಶವಗಳು ತೇಲುತ್ತಿರುವುದನ್ನು ಅವರು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಮಹಿಳೆಯ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇಲೆ, ಆಕೆಯ ಪತಿಯ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement