ಬೆಂಗಳೂರು: ಪುತ್ರ ವೃದ್ಧಾಶ್ರಮ ಸೇರಿಸಿದ್ದಕ್ಕೆ ನೊಂದು ವೃದ್ಧ ದಂಪತಿ ಆತ್ಮಹತ್ಯೆಗೆ ಶರಣು

ಆತ್ಮಹತ್ಯೆಗೆ ಶರಣಾದ ದಂಪತಿಯನ್ನು ಕೃಷ್ಣಮೂರ್ತಿ(81 ವರ್ಷ) ಹಾಗೂ ರಾಧಾ(74 ವರ್ಷ) ಎಂದು ಗುರುತಿಸಲಾಗಿದೆ.
Elderly couple
ವೃದ್ಧ ದಂಪತಿ
Updated on

ಬೆಂಗಳೂರು: ಮಗ ತಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ದಂಪತಿಯನ್ನು ಕೃಷ್ಣಮೂರ್ತಿ(81 ವರ್ಷ) ಹಾಗೂ ರಾಧಾ(74 ವರ್ಷ) ಎಂದು ಗುರುತಿಸಲಾಗಿದೆ.

ಸೊಸೆಯೊಂದೆ ಹೊಂದಾಣಿಕೆಯಾಗದ ಕಾರಣ ಬೇರ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ಪುತ್ರ 2021ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಬಳಿಕ 2023ರಲ್ಲಿ ತಂದೆ, ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದರು. ವೃದ್ಧಾಶ್ರಮದಿಂದ ವಾಪಸ್​ ಬಂದ ನಂತರ ವೃದ್ಧ ದಂಪತಿಗೆ ಮತ್ತೆ ಮನೆಯಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ತಂದೆ, ತಾಯಿಯನ್ನು ಪುತ್ರ ಸೇರಿಸಿದ್ದನು. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ.

Elderly couple
ಬೆಂಗಳೂರು: ಆಸ್ತಿ ವಿವಾದ; ಮಗಳನ್ನು ಬೆನ್ನಿಗೆ ಕಟ್ಟಿಕೊಂಡು ಕೃಷಿ ಹೊಂಡಕ್ಕೆ ಬಿದ್ದು ತಾಯಿ ಆತ್ಮಹತ್ಯೆ!

ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ, ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com