
ತುಮಕೂರು: ಮೇಘಾಲಯದ ಸೋನಂ ಮತ್ತು ಮಂಡ್ಯದ ಗೃಹಿಣಿ ಹತ್ಯೆ ಪ್ರಕರಣ ಹಸಿರಾಗಿರುವಂತೆಯೇ ಕರ್ನಾಟಕದಲ್ಲಿ ಅಂತಹುದೇ ಮತ್ತೊಂದು ಕೊಲೆ ಪ್ರಕರಣ ಬಯಲಿಗೆ ಬಂದಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ತುಮಕೂರಿನ ತಿಪಟೂರಿನಲ್ಲಿ ಈ ಘಟನೆ ವರದಿಯಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಕೊಲೆ ಮಾಡಿದ್ದಾಳೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಾಡುಶೆಟ್ಟಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 50 ವರ್ಷದ ಶಂಕರಮೂರ್ತಿ ಎಂಬುವವರನ್ನು ಅವರ ಪತ್ನಿ ಸುಮಂಗಳಾ ಮತ್ತು ಆಕೆಯ ಪ್ರಿಯಕರ ನಾಗರಾಜು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯ ಕಾಡುಶೆಟ್ಟಿಹಳ್ಳಿಯಲ್ಲಿ ಜೂನ್ 24, 2025 ರಂದು ಈ ಕೊಲೆ ನಡೆದಿದೆ. 50 ವರ್ಷದ ಶಂಕರಮೂರ್ತಿಯನ್ನು ಅವರ ಪತ್ನಿ ಸುಮಂಗಳಾ ಮತ್ತು ಆಕೆಯ ಪ್ರಿಯಕರ ನಾಗರಾಜು ಒಟ್ಟಾಗಿ ಕೊಲೆ ಮಾಡಿದ್ದಾರೆ.
ಕೊಲೆಯ ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿ ಸುಮಾರು 30 ಕಿಮೀ ಸಾಗಿಸಿ, ತುರುವೇಕೆರೆ ತಾಲೂಕಿನ ದಂಡನಶಿವರ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಬಾವಿಯೊಂದಕ್ಕೆ ಎಸೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಾದ ಸುಮಂಗಳಾ ಮತ್ತು ನಾಗರಾಜು ಪೊಲೀಸ್ ವಶದಲ್ಲಿದ್ದಾರೆ.
ಸುಮಂಗಳಾ ತಿಪಟೂರು ನಗರದ ಕಲ್ಪತರು ಕಾಲೇಜಿನ ಗರ್ಲ್ಸ್ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಈ ಕೆಲಸದ ಜೊತೆಗೆ, ಕರಡಾಳು ಸಂತೆ ಗ್ರಾಮದ ನಾಗರಾಜು ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಈ ಸಂಬಂಧಕ್ಕೆ ಶಂಕರಮೂರ್ತಿ ಅಡ್ಡಿಯಾಗಿದ್ದರು. ಈ ಕಾರಣಕ್ಕಾಗಿ, ಸುಮಂಗಳಾ ಮತ್ತು ನಾಗರಾಜು ಶಂಕರಮೂರ್ತಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದರು.
ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆ ಮೇಲೆ ಕಾಲಿಟ್ಟು ಪತಿ ಕಥೆ ಮುಗಿಸಿದ ಪತ್ನಿ..
ಜೂನ್ 24 ರಂದು, ಸುಮಂಗಳಾ ಮತ್ತು ನಾಗರಾಜು ಒಟ್ಟಾಗಿ ಶಂಕರಮೂರ್ತಿಯ ಕಣ್ಣಿಗೆ ಖಾರದ ಪುಡಿ ಎರಚಿ, ದೊಣ್ಣೆಯಿಂದ ಹೊಡೆದು, ಕೊನೆಗೆ ಕುತ್ತಿಗೆ ಮೇಲೆ ಕಾಲಿಟ್ಟು ಭೀಕರವಾಗಿ ಕೊಂದಿದ್ದಾರೆ. ಕೊಲೆಯಾದ ಶಂಕರಮೂರ್ತಿ ಯ ಶವವನ್ನು ಗೋಣಿಚೀಲದಲ್ಲಿ ತುಂಬಿ, ಸುಮಾರು 30 ಕಿಮೀ ದೂರದ ತುರುವೇಕೆರೆ ತಾಲೂಕಿನ ತೋಟದ ಬಾವಿಗೆ ಸಾಗಿಸಿ ಎಸೆದಿದ್ದಾರೆ. ಕೃತ್ಯದ ನಂತರ, ಆರೋಪಿಗಳು ಯಾವುದೇ ಶಂಕೆಗೆ ಒಳಗಾಗದಂತೆ ಗ್ರಾಮಕ್ಕೆ ಹಿಂದಿರುಗಿದ್ದರು.
ನೊಣವಿನಕೆರೆ ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಶಂಕರಮೂರ್ತಿಯ ಕೊಲೆಗೆ ಸಂಬಂಧಿಸಿದಂತೆ ಸುಮಂಗಳಾ ಮತ್ತು ನಾಗರಾಜು ಇಬ್ಬರನ್ನೂ ಬಂಧಿಸಿದ್ದಾರೆ. ಶವವನ್ನು ತೋಟದ ಬಾವಿಯಿಂದ ಮೇಲಕ್ಕೆ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ತಿಪಟೂರು ಮನಕ್ಕೆ ಆಘಾತವನ್ನುಂಟು ಮಾಡಿದ್ದು, ಸ್ಥಳೀಯರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಶಂಕರಮೂರ್ತಿ ತೋಟದ ಮನೆಯಲ್ಲಿ ಸಿಕ್ತು ಸುಳಿವು
ಮೊದಲು ಶಂಕರಮೂರ್ತಿ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ನೊಣವಿನಕೆರೆ ಠಾಣೆ ಪೊಲೀಸರು, ಬಳಿಕ ಶಂಕರಮೂರ್ತಿಯ ತೋಟದ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಹೆಂಡತಿಯ ಅಕ್ರಮ ವಿಚಾರ ಗೊತ್ತಾಗುತ್ತಿದ್ದಂತೆ ಶಂಕರಮೂರ್ತಿ ತೋಟದ ಮನೆಯಲ್ಲಿ ಯಾರೊಂದಿಗೂ ಸಂಪರ್ಕ ಇರದೇ, ತನ್ನ ಪಾಡಿಗೆ ತಾನಿದ್ದನಂತೆ. ಹೀಗಾಗಿ ತೋಟದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ವಿಚಾರಣೆ ವೇಳೆ ಬಾಯ್ಬಿಟ್ಟ ಹಂತಕಿ ಪತ್ನಿ
ಶಂಕರಮೂರ್ತಿ ಮಲಗಿದ್ದ ಹಾಸಿಗೆ ಮೇಲೆ ಖಾರದ ಪುಡಿ ಹಾಗೂ ವ್ಯಕ್ತಿಯೊಬ್ಬರನ್ನು ಎಳೆದಾಡಿದ್ದ ಗುರುತು ಪತ್ತೆಯಾಗಿತ್ತು. ಪೊಲೀಸರಿಗೆ ಅನುಮಾನ ಬಂದು ತನಿಖೆಯನ್ನು ಚುರುಕು ಮಾಡಿದ್ದರು. ಆತನ ಪತ್ನಿ ಸುಮಂಗಲಾಳನ್ನ ವಿಚಾರಣೆ ನಡೆಸಿ, ಸಿಡಿಆರ್ ಪರಿಶೀಲಿಸಿದ್ದರು. ಈ ವೇಳೆ ಪಾಪಿಗಳಿಬ್ಬರು ನಡೆಸಿರುವ ಪಾಪದ ಕೃತ್ಯ ಬೆಳಕಿಗೆ ಬಂದಿದೆ.
Advertisement