ವಿಧಾನಸೌಧ ಪುಸ್ತಕ ಮೇಳ: ಕೈಯಲ್ಲಿ ಕನ್ನಡ ಸಾಹಿತಿಗಳ ಫೋಟೋ, ಹಿಂದಿ ಹಾಡಿಗೆ ನೃತ್ಯ..; ಸರ್ಕಾರದ 'ಕನ್ನಡ ಪ್ರೇಮ' ಇದೇನಾ? Video Viral

ಪುಸ್ತಕ ಸಂಸ್ಕೃತಿ ಬೆಳೆಯುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಿದೆ. 2ನೇ ದಿನವೂ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
kannada Activists angry Over dancing to Hindi songs in Vidhana Soudha Book Fair
ವಿಧಾನಸೌದಲ್ಲಿ ಪುಸ್ತಕ ಮೇಳ
Updated on

ಬೆಂಗಳೂರು: ಹಿಂದಿ ಹೇರಿಕೆ ವಿಚಾರ ದಕ್ಷಿಣ ಭಾರತದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಅತ್ತ ವಿಧಾನಸೌಧದ ಆವರಣದಲ್ಲಿ ಆಯೋಜನೆಯಾಗಿರುವ ಪುಸ್ತಕ ಮೇಳದಲ್ಲಿ ಹಿಂದಿ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.

ಪುಸ್ತಕ ಸಂಸ್ಕೃತಿ ಬೆಳೆಯುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಿದೆ. 2ನೇ ದಿನವೂ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಪುಸ್ತಕ ಪ್ರೇಮಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಆಸಕ್ತಿಯಿಂದಲೇ ಪುಸ್ತಕ ಮೇಳಕ್ಕೆ ಆಗಮಿಸಿ ತಮಗಿಷ್ಟವಾದ ಬುಕ್‌ಗಳನ್ನು ಖರೀದಿ ಮಾಡುತ್ತಿದ್ದಾರೆ.

ಪುಸ್ತಕ ಮೇಳದಲ್ಲಿ 151 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ವಿವಿಧ ಜಿಲ್ಲೆಗಳ ಪ್ರಕಾಶನಗಳಿಗೂ ಅವಕಾಶ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಶೇ 15 ರಷ್ಟು ರಿಯಾಯಿತಿ ಇದ್ದರೆ ಸರ್ಕಾರಿ ಪ್ರಕಾಶನಗಳು ಶೇ 25 ರಷ್ಟು ರಿಯಾಯಿತಿ ನೀಡುತ್ತಿವೆ. ಪುಸ್ತಕ ಮೇಳದಲ್ಲಿ ವ್ಯಾಪಾರಕ್ಕೇನು ಕೊರತೆ ಕಾಣಿಸುತ್ತಿಲ್ಲ. ಆದರೆ ಇದೇ ಪುಸ್ತಕ ಮೇಳ ಕನ್ನಡ ಪ್ರೇಮದ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದೆ.

ಕೈಯಲ್ಲಿ ಕನ್ನಡ ಸಾಹಿತಿಗಳ ಫೋಟೋ, ಹಿಂದಿ ಹಾಡಿಗೆ ನೃತ್ಯ

ಇನ್ನು ಪುಸ್ತಕ ಮೇಳ ಕಾರ್ಯಕ್ರಮದಲ್ಲಿ ಆಯೋಜಕರು ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಫೋಟೋಗೆ ಪೋಸ್ ನೀಡುವ ಸಂದರ್ಭದಲ್ಲಿ ಇಲ್ಲಿನ ಸ್ವಯಂ ಸೇವಕರು ತಮ್ಮ ಕೈಯಲ್ಲಿ ಕನ್ನಡದ ಖ್ಯಾತನಾಮ ಕವಿಗಳು ಮತ್ತು ಲೇಖಕರ ಫೋಟೋ ಹಿಡಿದುಕೊಂಡಿದ್ದಾರೆ. ಇದೇ ಸಂದರ್ಭದಲ್ಲೇ ಕೆಲ ಯುವಕ-ಯುವತಿಯರು ಹಿಂದಿ ಹಾಡಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ನೆಟ್ಟಿಗರ ಆಕ್ರೋಶ

ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಒಂದೆಡೆ ಕನ್ನಡ ಭಾಷಾ ಪ್ರೇಮದ ಕುರಿತು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಶಕ್ತಿಸೌಧದ ಆವರಣದಲ್ಲೇ ಕನ್ನಡಕ್ಕೆ ನಯಾಪೈಸೆ ಗೌರವವಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಕೆಲ ನೆಟ್ಟಿಗರು ಪುಸ್ತಕ ಮೇಳದಲ್ಲಿ ತಮಿಳುಭಾಷಾ ಪುಸ್ತಕಗಳ ಮಾರಾಟಕ್ಕೂ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಜಾರಿಗೆ

ಈ ನಡುವೆ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022 ಅನ್ನು ಇಂದಿನಿಂದ ಜಾರಿಗೆ ತಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, 'ಭಾಷೆಯು ನೆಲದ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ನೆಲದಲ್ಲಿನ ಉತ್ಪಾದನೆ, ಮಾರುಕಟ್ಟೆ, ವ್ಯವಹಾರಗಳು ಸ್ಥಳೀಯ ಭಾಷೆಯಲ್ಲಿರಬೇಕು. ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗಾಗಿ ಮತ್ತು ಕನ್ನಡಿಗರಿಗೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ, 2022ನ್ನು ದಿನಾಂಕ: 12.03.2024 ರಿಂದ ಜಾರಿಗೆ ತಂದಿರುತ್ತದೆ. ಸದರಿ ಅಧಿನಿಯಮದ ಕಲಂ 17 (7)ರಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಾಗುವ ಎಲ್ಲಾ ಕೈಗಾರಿಕೆ ಮತ್ತು ಗ್ರಾಹಕ ಉತ್ಪನ್ನಗಳ ಮೇಲೆ ಹೆಸರು ಮತ್ತು ಅವುಗಳ ಬಳಕೆಯ ಕುರಿತಾದ ನಿರ್ದೇಶನಗಳನ್ನು ಇತರೆ ಭಾಷೆಗಳ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದೆಂದು ಸೂಚಿಸಿ ಆದೇಶ ಹೊರಡಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com