
ಶಿವಮೊಗ್ಗ: ಭಾಷಾ ನೀತಿ ಕುರಿತು ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಭಾನುವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಷಾ ನೀತಿ ಕುರಿತಂತೆ ಕನ್ನಡಕ್ಕೆ ಆದ್ಯತೆ ನೀಡಿಯೇ ತೀರ್ಮಾನ ಕೈಗೊಳ್ಳುತ್ತೇವೆ. ಬೇರೆ ಭಾಷೆಗೆ ಅಗೌರವ ಕೊಡುವುದಲ್ಲ. ಎಲ್ಲ ಭಾಷೆಯನ್ನು ಕಲಿಯಬೇಕು. ಆದರೆ ಕನ್ನಡವನ್ನು ಕಡ್ಡಾಯ ಮಾಡಲೇಬೇಕು ಎಂದು ಹೇಳಿದರು.
ಬೇರೆ ರಾಜ್ಯದ ಮಕ್ಕಳು ಎಂಟನೇ ತರಗತಿಗೆ ವರ್ಗಾವಣೆ ಆಗಿ ಇಲ್ಲಿಗೆ ಬರುತ್ತಾರೆ. ಅವರ ಜೀವನದಲ್ಲೇ ಕನ್ನಡ ಕಲಿತಿರುವುದಿಲ್ಲ. ಅವರಿಗೆ ಒಂದೇ ಬಾರಿ ಕನ್ನಡ ಕಲಿಯಿರಿ ಎಂದರೆ ಆಗುವುದಿಲ್ಲ. ಅವರಿಗೆ ಕನ್ನಡ ಕಲಿಸಬೇಕು. ಇದು ಸೂಕ್ಷ್ಮ ವಿಚಾರ. ಪಾಲಿಸಿ ಮಾಡುವಾಗ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾಡುತ್ತೇವೆ. ಎಸ್‌ಇಪಿ ಬರುವುದರಿಂದ ನೋಡಿಕೊಂಡು ಮಾಡುತ್ತೇವೆ ಎಂದು ತಿಳಿಸಿದರು,
ಎನ್ಇಪಿ ಹಾಗೂ ಎಸ್‌ಇಪಿ ಬಗ್ಗೆ ಗೂಂದಲವಿದೆ. ನಾವು ಎಸ್‌ಇಪಿ ಅಂತ ಕೇಳುತ್ತಿದ್ದೇವೆ. ಈಗ ಮೊದಲಿನಂತೆ ಕಲಿಕೆ ಇರಲಿದೆ. ಬೇರೆ ಭಾಷೆ ಹೇರಿಕೆಯ ಕುರಿತು ನಾವು ಹುಷಾರಾಗಿರಬೇಕಾಗುತ್ತದೆ. ಕನ್ನಡವನ್ನು ಬಡವಾಗಲು ಈಗ ಅಲ್ಲ ಮುಂದೂ ಸಹ ಬಿಡುವುದಿಲ್ಲ. ಇದೆಲ್ಲಾ ತಾಂತ್ರಿಕವಾಗಿ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
Advertisement