ಹಕ್ಕಿ ಜ್ವರದಿಂದ ಬಳ್ಳಾರಿಯಲ್ಲಿ 20 ಸಾವಿರಕ್ಕೂ ಹೆಚ್ಚು ಕೋಳಿಗಳ ಸಾವು, ಹೆಚ್ಚಿದ ಆತಂಕ

ಕುರೇಕೊಪ್ಪ ಮತ್ತು ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರಗಳಲ್ಲಿ ಸಾವಿರಾರು ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ.
Bird flu
ಹಕ್ಕಿ ಜ್ವರ ಪತ್ತೆ
Updated on

ಬಳ್ಳಾರಿ: ಹಕ್ಕಿ ಜ್ವರ ಭೀತಿ ಬಳ್ಳಾರಿಯಲ್ಲಿ ಹೆಚ್ಚಾಗಿದ್ದು, ಈ ವರೆಗೂ 20,000ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಕಪ್ಪಗಲ್ಲುವಿನ ಸರ್ಕಾರಿ ಕೋಳಿ ಸಾಕಣೆ ಕೇಂದ್ರದಲ್ಲಿ 3 ದಿನಗಳ ಹಿಂದೆ 8,000 ಕೋಳಿಗಳು ಸಾವನ್ನಪ್ಪಿದ್ದವು. ಇದೀಗ ಮತ್ತಷ್ಟು ಕೋಳಿಗಳು ಸಾವನ್ನಪ್ಪಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ಕುರೇಕೊಪ್ಪ ಮತ್ತು ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರಗಳಲ್ಲಿ ಸಾವಿರಾರು ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ.

ಈ ನಡವೆ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿ, ಹಕ್ಕಿ ಜ್ವರಕ್ಕೆ ಕಾರಣವಾಗಿರುವ H5N1 ಸೋಂಕು ಹರಡುವಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದ್ದಾರೆ.

ಸೋಂಕು ಕುರಿತು ಈಗಾಗಲೇ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದಾರೆ.

Bird flu
ಬಳ್ಳಾರಿಯಲ್ಲಿ ಹಕ್ಕಿ ಜ್ವರ ಭೀತಿ: ಒಂದೇ ಫಾರಂನಲ್ಲಿ 10,000 ಕೋಳಿಗಳ ಸಾವು

ಜಿಲ್ಲಾಡಳಿತದಿಂದ, ಕೋಳಿ ಸಾಕಣೆ ಕೇಂದ್ರಗಳ ಒಳಗೆ ಸ್ಯಾನಿಟೈಸೇಶನ್ ಮತ್ತು ಕೋಳಿಗಳಿಗೆ ಔಷಧಿಗಳನ್ನು ನೀಡುವಂತಹ ಎಲ್ಲಾ ಕ್ರಮಗಳನ್ನು ಕೊಳ್ಳಲಾಗಿದೆ. ಜನರು ಕೋಳಿ ಮಾಂಸವನ್ನು ಸೇವಿಸುವ ಮೊದಲು ಕನಿಷ್ಠ 70 ಡಿಗ್ರಿ ಸೆಲ್ಸಿಯಸ್ ವರೆಗೆ ಬೇಯಿಸಿ ತಿನ್ನಬೇಕು. ಅಧಿಕಾರಿಗಳ ತಂಡಗಳು ಸೋಂಕು ಪೀಡಿತ ಕೋಳಿ ಸಾಕಣೆ ಕೇಂದ್ರಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಕಳೆದ ಒಂದು ವಾರದಲ್ಲಿ ಕಪ್ಪಗಲ್ಲು ಕೋಳಿ ಸಾಕಣೆ ಕೇಂದ್ರದಲ್ಲಿಯೇ 17,000 ಕೋಳಿಗಳು ಸಾವನ್ನಪ್ಪಿವೆ. ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯನ್ನು ಅಧಿಕಾರಿಗಳು ರೆಡ್ ಝೋನ್ ಎಂದು ಘೋಷಿಸಿದ್ದಾರೆ. ಪಕ್ಷಿಗಳಲ್ಲಿ ಹಕ್ಕಿ ಜ್ವರ ಲಕ್ಷಣಗಳು ಕಂಡುಬಂದರೆ, ಈ ವಿಷಯವನ್ನು ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಈಗಾಗಲೇ ರೆಡೆ ಝೋನ್ ನಲ್ಲಿರುವ ಕೋಳಿಗಳ ಹತ್ಯೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆಂದು ಹೇಳಿದ್ದಾರೆ.

ಏತನ್ಮಧ್ಯೆ, ಮಾದರಿಗಳನ್ನು ಕಳುಹಿಸಲಾದ ಮಧ್ಯಪ್ರದೇಶದ ಪ್ರಯೋಗಾಲಯವು ಕೋಳಿಗಳ ಸಾವು ಹಕ್ಕಿ ಜ್ವರದಿಂದಲೇ ಸಂಭವಿಸಿವೆ ಎಂದು ದೃಢಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com