ಗ್ಯಾರಂಟಿ ಮಾದರಿಯಲ್ಲಿ 2 ಬಾಟಲ್ 'ಎಣ್ಣೆ' ಫ್ರೀಯಾಗಿ ಕೊಡಿ: ಕಾಂಗ್ರೆಸ್ ಸರ್ಕಾರಕ್ಕೆ JDS ಶಾಸಕ ಸಲಹೆ! Video

ಮಹಿಳೆಯರಿಗೆ 2,000 ರೂ.ಗಳನ್ನು ನೀಡುವ ಕಲ್ಯಾಣ ಉಪಕ್ರಮದಂತೆಯೇ, ಪುರುಷರಿಗೂ ವಾರಕ್ಕೆ ಎರಡು ಉಚಿತ ಮದ್ಯದ ಬಾಟಲಿಗಳನ್ನು ವಿತರಿಸಬೇಕು....
free liquor for men
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆ ಮಾದರಿಯಲ್ಲಿ ಗಂಡಸರಿಗೆ ವಾರಕ್ಕೆ 2 ಬಾಟಲ್ ಮದ್ಯ ನೀಡಬೇಕು ಎಂದು ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಕಾಂಗ್ರೆಸ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಹೌದು.. ವಿಧಾನಸಭೆಯಲ್ಲಿ ಮಾತಾಡಿದ ಜೆಡಿಎಸ್ ಶಾಸಕ ಎಂಟಿ ಕೃಷ್ಣಪ್ಪ ಅವರು ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಹಂಚಿಕೆ ಕುರಿತು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಅಬಕಾರಿ ಆದಾಯ ಗುರಿಯನ್ನು 36,500 ಕೋಟಿ ರೂ.ಗಳಿಂದ 40,000 ಕೋಟಿ ರೂ.ಗಳಿಗೆ ಹೆಚ್ಚಿಸಿರುವ ಬಗ್ಗೆ ಅವರು ಇತ್ತೀಚೆಗೆ ಪ್ರತಿಕ್ರಿಯಿಸಿದರು.

'ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ 2,000 ರೂ.ಗಳನ್ನು ನೀಡುವ ಕಲ್ಯಾಣ ಉಪಕ್ರಮದಂತೆಯೇ, ಪುರುಷರಿಗೂ ವಾರಕ್ಕೆ ಎರಡು ಉಚಿತ ಮದ್ಯದ ಬಾಟಲಿಗಳನ್ನು ವಿತರಿಸಬೇಕು. ಗ್ಯಾರಂಟಿ ಯೋಜನೆಗಳ ಮಾದರಿಯಲ್ಲೇ ಪುರುಷರಿಗೆ 2 ಬಾಟಲಿ ಮದ್ಯ ವಿತರಿಸುವ ಯೋಜನೆಯನ್ನು ಜಾರಿಗೊಳಿಸಿ ಎಂದು ಸಲಹೆ ನೀಡಿದರು.

free liquor for men
ಸರ್ಕಾರಿ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ: ರಾಜ್ಯಪಾಲರಿಗೆ ಯತ್ನಾಳ್ ಪತ್ರ

'ಪುರುಷರ ವೆಚ್ಚದಲ್ಲಿ, ನೀವು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಹಣ, ಉಚಿತ ವಿದ್ಯುತ್ ಮತ್ತು ಉಚಿತ ಬಸ್ ಪ್ರಯಾಣವನ್ನು ನೀಡುತ್ತಿದ್ದೀರಿ. ಆದ್ದರಿಂದ, ಕುಡಿಯುವವರಿಗೆ, ಪ್ರತಿ ವಾರ ಅವರಿಗೆ ಎರಡು ಬಾಟಲಿಗಳನ್ನು ಉಚಿತವಾಗಿ ನೀಡಿ. ಅವರು ಕುಡಿಯಲು ಬಿಡಿ. ನಾವು ಪುರುಷರಿಗೆ ಪ್ರತಿ ತಿಂಗಳು ಹೇಗೆ ಹಣ ನೀಡಲು ಸಾಧ್ಯವಿಲ್ಲ. ಅದರ ಬದಲಾಗಿ, ಅವರಿಗೆ ಏನಾದರೂ ನೀಡಿ, ವಾರಕ್ಕೆ ಎರಡು ಬಾಟಲಿಗಳು. ಅದರಲ್ಲಿ ತಪ್ಪೇನಿದೆ? ಸರ್ಕಾರವು ಇದನ್ನು ಸೊಸೈಟಿಗಳ ಮೂಲಕ ಒದಗಿಸಬಹುದು ಎಂದು ಕೃಷ್ಣಪ್ಪ ಸಲಹೆ ನೀಡಿದರು.

ದುಡ್ಡಿಯುವ ಕಾರ್ಮಿಕರು, ಜನರು ಮದ್ಯ ಸೇವಿಸುತ್ತಾರೆ. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಪುರುಷರಿಗೆ ಉಚಿತವಾಗಿ ಮದ್ಯ ವಿತರಿಸುವ ಯೋಜನೆಯನ್ನ ರಾಜ್ಯ ಸರ್ಕಾರ ತರಬೇಕು. ಸಹಕಾರ ಸಂಘಗಳ ಮೂಲಕ ಉಚಿತ ಮದ್ಯ ವಿತರಿಸಬೇಕು ಎಂದು ಜೆಡಿಎಸ್ ಶಾಸಕ ಕೃಷ್ಣಪ್ಪ ಸಲಹೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆಜೆ ಜಾರ್ಜ್, ಮದ್ಯಸೇವನೆ ಕಡಿಮೆ ಮಾಡುವುದು ನಮ್ಮ ಸರ್ಕಾರದ ಗುರಿಯಾಗಿದೆ. ನಿಮ್ಮ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ನೀವೇ ಫ್ರಿಯಾಗಿ ನೀಡಿ ಎಂದು ಉತ್ತರ ನೀಡಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ಈಗಲೇ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.. ಇನ್ನು ಫ್ರೀ ಕೊಟ್ಟರೆ ಹೇಗೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com