ಮಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಪಿಜಿ ಮಾಲೀಕ, ಸಹಚರರಿಂದ ಹಲ್ಲೆ

ಸಂತ್ರಸ್ತನ ದೂರಿನ ಮೇರೆಗೆ ಪಿಜಿ ಮಾಲೀಕರು ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಮಂಗಳೂರು: ಪಿಜಿ ಮಾಲೀಕ ಸೇರಿದಂತೆ ಐವರ ಗುಂಪು 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಈ ಘಟನೆ ಮಾರ್ಚ್ 17 ರಂದು ರಾತ್ರಿ 10.30ರ ಸುಮಾರಿಗೆ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಕಲಬುರಗಿ ಮೂಲದ ವಿಕಾಸ್ ಎಂಬಾತ ಕಳೆದ ಆರು ತಿಂಗಳಿನಿಂದ ಪಿಜಿಯಲ್ಲಿ ವಾಸಿಸುತ್ತಿದ್ದು, ನಂತರ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಕಾಸ್ ಸಲ್ಲಿಸಿದ ದೂರಿನ ಪ್ರಕಾರ, ಅವರು ಗೂಗಲ್‌ನಲ್ಲಿ ಪಿಜಿ ಬಗ್ಗೆ ನಕಾರಾತ್ಮಕ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದರು. ಆಹಾರದಲ್ಲಿ ಕೀಟಗಳ ಉಪಸ್ಥಿತಿ, ಕಳಪೆ ನೈರ್ಮಲ್ಯ ಮತ್ತು ಅಶುಚಿಯಾದ ಶೌಚಾಲಯಗಳಂತಹ ಸಮಸ್ಯೆಗಳನ್ನು ಎತ್ತಿ ತೋರಿಸಿ ಪಿಜಿಗೆ ಸಿಂಗಲ್-ಸ್ಟಾರ್ ರೇಟಿಂಗ್ ನೀಡಿದ್ದರು.

ಇದರಿಂದ ಕೋಪಗೊಂಡ ಪಿಜಿ ಮಾಲೀಕ ಸಂತೋಷ್, ವಿಕಾಸ್‌ಗೆ ಬೆದರಿಕೆ ಹಾಕಿ ಗೂಗಲ್‌ನಲ್ಲಿ ಕಮೆಂಟ್ ಅನ್ನು ಅಳಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವಿಕಾಸ್ ನಿರಾಕರಿಸಿದಾಗ, ಸಂತೋಷ್ ಇತರ ನಾಲ್ವರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ವಿಮರ್ಶೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತನ ದೂರಿನ ಮೇರೆಗೆ ಪಿಜಿ ಮಾಲೀಕರು ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com