'ಮಂಚ ಹತ್ತೋಕೂ 5 ಸಾವಿರ ಹಣ ಕೇಳ್ತಾಳೆ.. ಬ್ಯೂಟಿ ಹಾಳಾಗುತ್ತೆ 60 ವರ್ಷ ಆದ್ಮೇಲೆ ಮಕ್ಕಳು ಅಂತಾಳೆ': Bengaluru techie ದೂರು! ಪತ್ನಿ ಹೇಳಿದ್ದೇನು?

ಟೆಕ್ಕಿ ಶ್ರೀಕಾಂತ್ ಹಾಗೂ ಬಿಂದುಶ್ರೀ 2022 ರಲ್ಲಿ ಕುಟುಂಬಸ್ಥರ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಆದರೆ ಮದುವೆಯಾದ ಮೇಲೆ ಟೆಕ್ಕಿ ಶ್ರೀಕಾಂತ್ ಒಂದೇ ಒಂದು ದಿನವೂ ಪತ್ನಿಯೊಂದಿಗೆ ಸಂಸಾರ ಮಾಡಿಲ್ಲ..
Bengaluru techie levels cash-for-intimacy charge
ಟೆಕ್ಕಿ ಶ್ರೀಕಾಂತ್ ಮತ್ತು ಬಿಂದುಶ್ರೀ
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಪತ್ನಿ ಕಿರುಕುಳ ಪ್ರಕರಣ ಬಯಲಿಗೆ ಬಂದಿದ್ದು, ಈ ಬಾರಿ ಪತ್ನಿಯ ವಿಚಿತ್ರ ಬೇಡಿಕೆಗಳಿಗೆ ಬೇಸತ್ತ ಟೆಕ್ಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹೌದು.. ಬೆಂಗಳೂರು ಮೂಲದ ಟೆಕ್ಕಿ (Bengaluru Techie) ಶ್ರೀಕಾಂತ್ ಎಂಬುವವರು ತನ್ನ ಪತ್ನಿ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದು, ತನಗೆ ನ್ಯಾಯಕೊಡಿಸಿ ಎಂದು ಪೊಲೀಸರ ಬಳಿ ಅಂಗಲಾಚಿದ್ದಾರೆ. ಒಪ್ಪಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ಪತ್ನಿ ಗಂಡನೊಂದಿಗೆ ಸಂಸಾರ ಮಾಡಲು ದಿನವೊಂದಕ್ಕೆ 5,000 ರೂ. ಬೇಡಿಕೆಯಿಡುವುದರ ಜೊತೆಗೆ ಬ್ಯೂಟಿ ಹಾಳಾಗುತ್ತೆ ಸ್ವಂತ ಮಕ್ಕಳು ಬೇಡ..

ದತ್ತು ಮಕ್ಕಳನ್ನ ಪಡೆದುಕೊಳ್ಳೊಣ ಎಂದು ಗಂಡನಿಗೆ, ಪತ್ನಿ ಕಿರುಕುಳ (Wife Tortur) ಕೊಡುತ್ತಿದ್ದಾರೆಂದು ಆರೋಪಿಸಿ ಪತಿ ಶ್ರೀಕಾಂತ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಟೆಕ್ಕಿ ಶ್ರೀಕಾಂತ್ ಹಾಗೂ ಬಿಂದುಶ್ರೀ 2022 ರಲ್ಲಿ ಕುಟುಂಬಸ್ಥರ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆ ಆಗಿದ್ದರು. ಆದರೆ ಮದುವೆಯಾದ ಮೇಲೆ ಟೆಕ್ಕಿ ಶ್ರೀಕಾಂತ್ ಒಂದೇ ಒಂದು ದಿನವೂ ಪತ್ನಿಯೊಂದಿಗೆ ಸಂಸಾರ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Bengaluru techie levels cash-for-intimacy charge
ಮೀರತ್ ಬೆನ್ನಲ್ಲೇ ಜೈಪುರದಲ್ಲೂ ಭೀಕರ ಕೊಲೆ: ಲವರ್ ಜೊತೆ ಸೇರಿ ಗಂಡನ ಹತ್ಯೆ; ಹಾಡಹಗಲೇ ಬೈಕ್ ಮೇಲೆ ಶವ ಸಾಗಣೆ!

ಮಂಚ ಹತ್ತೋಕೆ 5 ಸಾವಿರ ಹಣ

ಶ್ರೀಕಾಂತ್ ವರ್ಕ್ ಫ್ರಮ್‌ ಹೋಮ್‌ ಕೆಲಸ ಮಾಡುತ್ತಿದ್ದರು. ಸಾಂಸಾರಿಕ ಜೀವನದ ವಿಚಾರದಲ್ಲಿ ಪತ್ನಿ ಎಂದಿಗೂ ಸಹಕರಿಸುತ್ತಿಲ್ಲ. ಮಂಚ ಹತ್ತಲು 5 ಸಾವಿರ ರೂ ಹಣಕೇಳುತ್ತಾಳೆ. ಮುಟ್ಟಲು ಹೋದರೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಬ್ಲಾಕ್ ಮೇಲ್ ಮಾಡುತ್ತಾಳೆ ಪತಿ ಆರೋಪಿಸಿದ್ದಾರೆ. ಅಲ್ಲದೆ ಮಕ್ಕಳು ಮಾಡಿಕೊಳ್ಳೊಣ ಅಂತ ಗಂಡ ಶ್ರೀಕಾಂತ್ ಕೇಳಿದರೆ ಈಗ ಮಕ್ಕಳು ಬೇಡ. ನನ್ನ ಬ್ಯೂಟಿ ಹಾಳಾಗುತ್ತೆ. ನಮಗೆ 60 ವರ್ಷವಾದ ಬಳಿಕ ಮಕ್ಕಳು ಮಾಡಿಕೊಳ್ಳೊಣ ಎನ್ನುತ್ತಾಳೆ.

ತಾನೋರ್ವ ಟೆಕ್ಕಿಯಾಗಿದ್ದು, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದೇನೆ. ಕೆಲಸ ಮಾಡಲು ಕುಳಿತರೇ ಜೋರಾಗಿ ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡುವುದು, ಜಗಳ ಮಾಡುತ್ತಾ ಕೆಲಸಕ್ಕೆ ಅಡ್ಡಿಪಡಿಸುವ ಕೆಲಸ ಮಾಡುತ್ತಾಳೆ. ಹೆಂಡತಿ ಕಾಟದಿಂದ ರೋಸಿ ಹೋಗಿದ್ದೇನೆ. ಒಂದು ದಿನವೂ ಮದ್ವೆಯಾದ ಖುಷಿಯಿಲ್ಲ. ಅವಳ ಕಾಟದಿಂದಾಗಿ ಈಗ ನಾನು ಕೆಲಸವನ್ನೂ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದೇನೆ ಎಂದು ಟೆಕ್ಕಿ ಶ್ರೀಕಾಂತ್‌ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ (Vyalikaval Police Station) ದೂರು ನೀಡಿದ್ದಾರೆ.

ವಿಚ್ಚೇದನಕ್ಕೆ ಒತ್ತಡ, 45 ಲಕ್ಷಕ್ಕೆ ಪತ್ನಿ ಡಿಮಾಂಡ್

ಇನ್ನು ಪತ್ನಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದು, 45 ಲಕ್ಷ ರೂ ಜೀವನಾಂಶ ನೀಡುವಂತೆ ಪತ್ನಿ ಹಾಗೂ ಆಕೆಯ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ. ಮದುವೆಗೆ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಮದುವೆಗೆ ಹಾಕಿದ್ದ ಬಂಗಾರವೂ ನನ್ನ ಕೈಗೆ ಸಿಕ್ಕಿಲ್ಲ ಎಂದು ಟೆಕ್ಕಿ ಶ್ರೀಕಾಂತ್ ಅಳಲು ತೋಡಿಕೊಂಡಿದ್ದಾರೆ.

ಆಡಿಯೋ ವೈರಲ್

ಇನ್ನೂ ಪತಿ – ಪತ್ನಿ ಮಾತನಾಡಿದ ಆಡಿಯೋವೊಂದು ವೈರಲ್‌ ಆಗಿದ್ದು, ಆಡಿಯೋದಲ್ಲಿ ಮಕ್ಕಳು ಮಾಡಿಕೊಳ್ಳೋಣ ಅಂತ ಶ್ರೀಕಾಂತ್‌ ಕೇಳಿದ್ದಕ್ಕೆ '60 ವರ್ಷ ಆದ್ಮೇಲೆ ಮಾಡಿಕೊಳ್ಳೋಣ ಇಲ್ಲದಿದ್ರೆ.. ನೀವೂ ಹಾಗೆ ಸಾಯಿರಿ, ನಾನು ಹಾಗೇ ಸಾಯ್ತಿನಿ ಅಂದಿದ್ದಾಳೆ. ಈ ಜನ್ಮದಲ್ಲಿ ನಿಮಗೆ ಬುದ್ಧಿ ಬರಲ್ಲ, ಈ ಜನ್ಮದಲ್ಲಿ ನಾವಿಬ್ಬರೂ ಪೋಷಕರಾಗಲ್ಲ, ಪಪ್ಪಾಯ, ಪೈನಾಪಲ್‌ ರೆಡಿ ಇರುತ್ತೆ ತಿಂದುಬಿಟ್ರೆ ಆಯ್ತು… ನಾನು ನಿಮ್ಮನ್ನ ಹತ್ತಿರಕ್ಕೂ ಸೇರಿಸಲ್ಲ. ಇನ್ನೆಲ್ಲಿ ಮಗು ಆಗುತ್ತೆ ಅಂತ ಪತಿ ಶ್ರೀಕಾಂತ್ ಗೆ ಪತ್ನಿ ಜೋರು ಮಾಡಿದ್ದಾಳೆ ಎಂದು ಶ್ರೀಕಾಂತ್ ಹೇಳಿದ್ದಾರೆ.

Bengaluru techie levels cash-for-intimacy charge
'ಆಗ ಫ್ರಿಡ್ಜ್... ಈಗ ಡ್ರಮ್..': ಲವರ್ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ.. ದೇಹ 15 ತುಂಡು, ಡ್ರಮ್ ನಲ್ಲಿ ಹಾಕಿ ಸಿಮೆಂಟ್ ಸೀಲ್; ಪ್ರಕರಣ ಬಯಲಾಗಿದ್ದೇ ರೋಚಕ!

ಪತ್ನಿ ಹೇಳಿದ್ದೇನು? ಪ್ರತಿ ದೂರು ದಾಖಲು

ಇನ್ನು ಪತಿ ಶ್ರೀಕಾಂತ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಪತ್ನಿ ಬಿಂದುಶ್ರೀ, 'ಅವರ ಮನೆಯವರೇ ದಿನಾಲೂ ಕಿರುಕುಳ ಕೊಟ್ಟಿದ್ದಾರೆ. ಇಡಿ ಫ್ಯಾಮಿಲಿ ಟಾರ್ಚರ್ ಕೊಡೋಕೆ ಶುರು ಮಾಡಿದ್ರು. ನಂತರ ಮನೆ ಬಿಟ್ಟು ಅಮ್ಮನ ಮನೆಗೆ ಹೋಗಿದ್ದೆ. ಡೈವರ್ಸ್ ಮುಚ್ಯೂಲ್ ತಕೊಳೋನಾ ಅನ್ಕೊಂಡೆ, ಆದರೆ ನಮ್ಮ ತಂದೆ ತಾಯಿ ಕಷ್ಟ ಪಟ್ಟು ಮದುವೆ ಮಾಡಿದ್ದಾರೆ. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳಂತೆ ನಾನು ಕೇಳಿದ್ದೇನೆ ಎಂದಿದ್ದಾರೆ. ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ನಾವಿಬ್ಬರೂ ಮದುವೆಯಾಗಿ ಎರಡು ವರ್ಷ ಕಳೆದಿದೆ. ಆದರೆ, ಈಗ ನನ್ನ ಹೆಂಡತಿ ಸಂಸಾರ ಮಾಡಲು ಒಪ್ಪುತ್ತಿಲ್ಲವೆಂದು ಸುಳ್ಳು ಹೇಳಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಆಡಿಯೋ ವಿಡಿಯೋ ಎಡಿಟ್ ಮಾಡಿ ಮಾಧ್ಯಮಗಳ ಮುಂದೆ ಕೊಟ್ಟಿದ್ದಾರೆ ಎಂದು ಗಂಡ ಶ್ರೀಕಾಂತ್ ವಿರುದ್ಧ ಹೆಂಡತಿ ಬಿಂದುಶ್ರೀ ಆರೋಪ ಮಾಡಿದ್ದಾರೆ. ಈಗ ನನ್ನ ವಿರುದ್ಧ ದೂರು ಕೊಟ್ಟಿರುವ ಶ್ರೀಕಾಂತ್ ಪೊಲೀಸರು ಕರೆದರೂ ಬರುತ್ತಿಲ್ಲ. ಪೊಲೀಸ್ ಠಾಣೆಗೆ ಬರದೇ ಮಿಡಿಯಾಗಳ ಮುಂದೆ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅತ್ತೆ ತುಂಬಾ ಕಾಟ ಕೊಡುತ್ತಿದ್ದರು. ತರಕಾರಿ ಇಲ್ಲದೆ ಅಡುಗೆ ಮಾಡಬೇಕಿತ್ತು. ಎರೆಡು ಟೊಮೆಟೊ ಹಾಕಿ ಸಾರು ಮಾಡಬೇಕು ಅಂತಾರೆ ಎಂದು ಆರೋಪಿಸಿದ್ದಾರೆ.

ನಾನು ಸಂಸಾರ ಮಾಡಲು ಹಣ ಡಿಮ್ಯಾಂಡ್ ಮಾಡಿಲ್ಲ. ನಾನು ಮ್ಯೂಚುವಲ್ ತಗೊಳೋಕೆ ರೆಡಿ ಇದ್ದೀನಿ. ಆದರೆ, ಈಗ ಅವರೇ ಪೊಲೀಸ್ ಠಾಣೆ ಬನ್ನಿ ಎಂದರೂ ಬರುತ್ತಿಲ್ಲ. ಇದಕ್ಕೆ ನಾನು ದಾಖಲೆಗಳನ್ನು ಕೂಡ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ನಾನು ಮನೆಯನ್ನು ನಡೆಸಿಕೊಂಡು ಹೋಗುವುದಕ್ಕೆ ಇಡಿ ಮನೆಗೆ ಕೇವಲ ಅರ್ಧ ಲೀಟರ್ ಹಾಲು ಖರ್ಚು ಮಾಡಬೇಕು. ಮನೆಯವರಿಗೆ ಇಂತಿಷ್ಟು ಮಾತ್ರ ಅಕ್ಕಿ ಕೊಡುತ್ತಾರೆ. ಅವರು ಹೇಳಿದ್ದಕ್ಕಿಂತ ಸ್ವಲ್ಪ ಅಕ್ಕಿ ಜಾಸ್ತಿ ಹಾಕಿ ಅಡಿಗೆ ಮಾಡಿದರೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರು. ಹೀಗೆ ಮಾಡಿದರೆ ನಾನು ಹೇಗೆ ಇರೋದು ಎಂದು ಬಿಂದುಶ್ರೀ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com