Wedding Photoshoot ಎಡವಟ್ಟು: ವಧುವಿಗೆ ಮರೆಯಲಾಗದ ದುಃಸ್ವಪ್ನ; ಆಗಿದ್ದೇನು? Video ನೋಡಿ!

ತಮ್ಮ ಮದುವೆಗೂ ಮಧುರ ಕ್ಷಣಗಳನ್ನು ಫೋಟೋಶೂಟ್ ಮಾಡಿಸಿಕೊಳ್ಳುವ ಪರಿಪಾಠ ಇತ್ತೀಚಿನ ಯುವ ಸಮೂಹದಲ್ಲಿ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಂದು ಜೋಡಿ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿಸಿಕೊಂಡಿದೆ.
Wedding Photoshoot ಎಡವಟ್ಟು: ವಧುವಿಗೆ ಮರೆಯಲಾಗದ ದುಃಸ್ವಪ್ನ; ಆಗಿದ್ದೇನು? Video ನೋಡಿ!
Updated on

ಬೆಂಗಳೂರು: ತಮ್ಮ ಮದುವೆಗೂ ಮಧುರ ಕ್ಷಣಗಳನ್ನು ಫೋಟೋಶೂಟ್ ಮಾಡಿಸಿಕೊಳ್ಳುವ ಪರಿಪಾಠ ಇತ್ತೀಚಿನ ಯುವ ಸಮೂಹದಲ್ಲಿ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಂದು ಜೋಡಿ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿಸಿಕೊಂಡಿದೆ. ಆದರೆ ಅದು ವಧುವಿನ ಬಾಳಲ್ಲಿ ಮಾತ್ರ ಮಾಯದ ಗಾಯವಾಗಿಸಿದೆ. ಹೌದು ಬೆಂಗಳೂರಿನಲ್ಲಿ ಜೋಡಿಯೊಂದು ಫೋಟೋಶೂಟ್ ಮಾಡಿಸುತ್ತಿತ್ತು.

ಫೋಟೋಗಳು ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಕಲರ್ ಬಾಂಬ್ ಗಳನ್ನು ಬಳಸಲಾಗಿದೆ. ಆದರೆ ಅದು ಗುರಿ ತಪ್ಪಿ ವಧುವಿನ ಬೆನ್ನಿನ ಮೇಲೆ ಸಿಡಿಸಿದೆ. ಪರಿಣಾಮ ವಧುವಿನ ಬೆನ್ನು ಮತ್ತು ಕೂದಲು ಸುಟ್ಟು ಹೋಗಿದೆ. ಘಟನೆಯ ನಂತರ ವಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಕಿ ಮತ್ತು ಪಿಯಾ ದಂಪತಿಗಳು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ವರನು ವಧುವನ್ನು ಛಾಯಾಚಿತ್ರಕ್ಕಾಗಿ ಎತ್ತುತ್ತಿದ್ದಂತೆಯೇ ಈ ದುರ್ಘಟನೆ ಸಂಭವಿಸಿದೆ.

ಈ ಸುಂದರವಾದ ಬಣ್ಣದ ಬಾಂಬ್‌ಗಳನ್ನು ಹಿನ್ನೆಲೆಯಲ್ಲಿ ಸ್ಫೋಟಿಸಿ ಅದ್ಭುತವಾದ ಚಿತ್ರೀಕರಣ ಮಾಡಬೇಕೆಂಬ ಯೋಜನೆ ಇತ್ತು. ಆದರೆ ಅದು ಸರಿಯಾಗಿ ಕೆಲಸ ಮಾಡದೆ ನಮ್ಮ ಮೇಲೆ ಸಿಡಿಯಿತು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. "ಇದು ನಮ್ಮ ಜೀವನದುದ್ದಕ್ಕೂ ದುಃಸ್ವಪ್ನದಂತೆ ಕಾಡಲಿದೆ" ಎಂದು ಅವರು ಹೇಳಿದರು.

Wedding Photoshoot ಎಡವಟ್ಟು: ವಧುವಿಗೆ ಮರೆಯಲಾಗದ ದುಃಸ್ವಪ್ನ; ಆಗಿದ್ದೇನು? Video ನೋಡಿ!
ಟೀನೇಜ್ ಹುಡುಗನ ಜೊತೆ ಅಕ್ರಮ ಸಂಬಂಧ, ಗರ್ಭವತಿ: Iceland Minister ರಾಜಿನಾಮೆ!

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com