ಬೆಂಗಳೂರು: ಪತ್ನಿ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ್ದ ಪ್ರಕರಣ; ಮಹಾರಾಷ್ಟ್ರದಲ್ಲಿ ಹಂತಕ ಪತಿ ಬಂಧನ
ಬೆಂಗಳೂರು: ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ್ದ ಪ್ರಕರಣ ಸಂಬಂದ ಹಂತಕ ಪತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ.
ಹುಳಿಮಾವು ಬಳಿಯ ನಿವಾಸವೊಂದರಲ್ಲಿ ಸೂಟ್‌ಕೇಸ್‌ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿತ್ತು, 32 ವರ್ಷದ ಗೌರಿ ಅನಿಲ್ ಸಂಬೇಕರ್ ಅವರನ್ನು ಆಕೆಯ ಪತಿ ಮಹಾರಾಷ್ಟ್ರ ಮೂಲದ ರಾಕೇಶ್ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ವ್ಯಕ್ತಿಯನ್ನು ಪುಣೆಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹುಳಿಮಾವು ಮನೆಯೊಂದಲ್ಲಿ ಬಾಡಿಗೆ ಇದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ದಂಪತಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಬಳಿಕ ಆಕೆ ದೇಹವನ್ನು ತುಂಡರಿಸಿ ಟ್ರಾಲಿ ಬ್ಯಾಗ್ ತುಂಬಿಟ್ಟು ಪರಾರಿಯಾಗಿದ್ದ.
ಹುಳಿಮಾವು ಪೊಲೀಸರು ಸಿಡಿಆರ್ ಆಧರಿಸಿ ಮಹಾರಾಷ್ಟ್ರದ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಶೋಧಕಾರ್ಯ ನಡೆಸಿದಾಗ ರಾಕೇಶ್ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಣೆ ಪೊಲಿಸರ ವಶದಲ್ಲಿರುವ ರಾಕೇಶ್ ನನ್ನು ಬೆಂಗಳೂರಿಗೆ ಕರೆತರಲು ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳುತ್ತಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ನಂತರ ಪತ್ನಿಯ ಹತ್ಯೆ ಮಾಡಿದ ಕಾರಣ ತಿಳಿದುಕೊಳ್ಳಲು ಪೊಲೀಸರು ಆತನನನ್ನು ವಿಚಾರಣೆ ನಡೆಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ