ಸರ್ಕಾರಿ ಪಶು ಆಸ್ಪತ್ರೆ ಆವರಣವನ್ನು ಸಾಕುಪ್ರಾಣಿಗಳ ಚಿತಾಗಾರವಾಗಿ ಬಳಸಬಹುದು: ರಿಜ್ವಾನ್ ಅರ್ಷದ್

ಮನುಷ್ಯರಂತೆ ಪ್ರಾಣಿಗಳು ಸತ್ತಾಗ ಕೂಡ ಅವುಗಳಿಗೆ ಗೌರವಯುತ ವಿದಾಯ ಹೇಳಬೇಕು.
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್
Updated on

ಬೆಂಗಳೂರು: ದಾಸರಹಳ್ಳಿ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳಲ್ಲಿರುವಂತೆಯೇ ಇತರೆ ಪ್ರದೇಶಗಳಲ್ಲಿರುವ ಸರ್ಕಾರಿ ಪಶು ಆಸ್ಪತ್ರೆ ಆವರಣವನ್ನು ಸಾಕುಪ್ರಾಣಿಗಳ ಚಿತಾಗಾರವಾಗಿ ಬಳಸಬಹುದು ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರು ಹೇಳಿದ್ದಾರೆ.

ಸಾಕು ಪ್ರಾಣಿಗಳ ಚಿತಾಗಾರ ಕೊರತೆಯಿಂದಾಗಿ ಸತ್ತ ಪ್ರಾಣಿಗಳನ್ನು ಕಸದ ತೊಟ್ಟಿಯಲ್ಲಿ ಎಸೆಯುವಂತಹ ಬೆಳವಣಿಗೆಗಳು ಕಂಡು ಬರುತ್ತಿವೆ. ಮನುಷ್ಯರಂತೆ ಪ್ರಾಣಿಗಳು ಸತ್ತಾಗ ಕೂಡ ಅವುಗಳಿಗೆ ಗೌರವಯುತ ವಿದಾಯ ಹೇಳಬೇಕು. ಹೀಗಾಗಿ, ಸರ್ಕಾರಿ ಪಶು ಆಸ್ಪತ್ರೆ ಆವರಣವನ್ನು ಸಾಕುಪ್ರಾಣಿಗಳ ಚಿತಾಗಾರವಾಗಿ ಬಳಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ನಾಯಿ ಕಾರ್ನೀವಲ್ ಮತ್ತು ಸಮುದಾಯ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ರಿಜ್ವಾನ್ ಅವರು ಮಾತನಾಡಿದರು. ಬೆಂಗಳೂರು ಮೂಲದ ಸಿಜೆ ಮೆಮೋರಿಯಲ್ ಟ್ರಸ್ಟ್‌ನ ವಿಭಾಗವಾದ ಉಲ್ಸೂರ್ ಕೆನೈನ್ ಸ್ಕ್ವಾಡ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಿಜೆ ಮೆಮೋರಿಯಲ್ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ಟ್ರಸ್ಟಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಅವರು ಮಾತನಾಡಿ, ಬೆಂಗಳೂರಿನಾದ್ಯಂತ 4,500 ಕ್ಕೂ ಹೆಚ್ಚು ಜನರನ್ನು ಒಳಗೊಂಡ 65 ಸ್ಕ್ವಾಡ್‌ಗಳು ನಗರದಲ್ಲಿ ಪ್ರಾಣಿ-ಮಾನವ ಸಹಬಾಳ್ವೆಯನ್ನು ಉತ್ತೇಜಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ರಿಜ್ವಾನ್ ಅರ್ಷದ್
ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳ ಸಂಗ್ರಹ: ರಿಜ್ವಾನ್ ಅರ್ಷದ್

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com