
ಬೆಂಗಳೂರು: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿರುವುದು ಸಾಬೀತಾಗಿದ್ದು, ಇದರ ಬೆನ್ನಲ್ಲೇ ಎಲ್ಲೆಡೆ ಟರ್ಕಿ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಟರ್ಕಿ ಮೂಲದ ಆಲ್ಟಿನೋಕ್ ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸಂಸ್ಥೆಗೆ ವಹಿಸಲಾಗಿದ್ದು, ಈ ಸಂಸ್ಥೆಯನ್ನು ನಿಷೇಧಿಸವಂತೆ ಬೆಂಗಳೂರು ಕೇಂದ್ರದ ಬಿಜೆಪಿ ಸಂಸದ ಪಿಸಿ ಮೋಹನ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಟರ್ಕಿ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನವನ್ನು ಬೆಂಬಲಿಸಿದೆ, ಆದ್ದರಿಂದ ಸರ್ಕಾರ ಟರ್ಕಿ ಸಂಸ್ಥೆಗಳನ್ನು ನಿಷೇಧಿಸಬೇಕು,. ಅವರೊಂದಿಗೆ ಯಾವುದೇ ವ್ಯವಹಾರ ನಡೆಸಬಾರದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ 124-ಕಿಮೀ ಎತ್ತರದ ಕಾರಿಡಾರ್‌ಗಳು ಮತ್ತು 46-ಕಿಮೀ ಸುರಂಗಗಳ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಬಿಬಿಎಂಪಿ ಟರ್ಕಿ ಮೂಲದ ಆಲ್ಟಿನೋಕ್ ಕನ್ಸಲ್ಟಿಂಗ್‌ಗೆ ರೂ.4.7 ಕೋಟಿ ಪಾವತಿಸಿತ್ತು. ಸಂಸ್ಥೆಯ ಕಾರ್ಯ ಅವರ ದೇಶದ ಸೋಂಗಾರ್ ಡ್ರೋನ್ ಗಳಂತೆಯೇ ವಿಫಲವಾಗಿತ್ತು. ಹೀಗಾಗಿ ಬಿಬಿಎಂಪಿ ಟರ್ಕಿ ಸಂಸ್ಥೆಗೆ ವಹಿಸಲಾಗಿದ್ದ ಕೆಲಸವನ್ನು ಹಿಂಪಡೆದುಕೊಂಡಿದೆ.
ನಾಸಿಕ್ ಹಾಗೂ ಮಲೆಗಾಂವ್ ನಲ್ಲಿಯೂ ಇದೇ ರೀತಿಯ ಮಾಡಲಾಗಿತ್ತು. ಇದು ಪುರಸಭೆಯ ವರ್ಚಸ್ಸಿಗೆ ಹಾನಿ ಮಾಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಂಸ್ಥೆಗೆ 5 ಲಕ್ಷ ರೂ. ದಂಡ ವಿಧಿಸಿದೆ. ಟರ್ಕಿಯ ಈ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆಂದು ತಿಳಿಸಿದ್ದಾರೆ.
Advertisement