Namma Metro Yellow line: ಜೂನ್‌ನಲ್ಲಿ ಸಂಚಾರ ಆರಂಭ..?

ಚಾಲಕರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ (ಮೂಲ ಮಾದರಿ) ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗುತ್ತಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ.
Namma metro
ನಮ್ಮ ಮೆಟ್ರೊonline desk
Updated on

ಬೆಂಗಳೂರು: ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಿನ 9.45 ಕಿ.ಮೀ ಉದ್ದದ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗವು ಮುಂದಿನ ಜೂನ್‌ ತಿಂಗಳಿನಲ್ಲಿ ಸಂಚಾರ ಪ್ರಾರಂಭಿಸುವ ಸಾಧ್ಯತೆಯಿದೆ.

ಬೊಮ್ಮಸಂದ್ರ–ಆರ್‌.ವಿ. ರಸ್ತೆ ನಡುವಿನ 18.8 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯವಿದ್ದು, ಚಾಲಕರಹಿತ ಎಂಜಿನ್‌ ಹೊಂದಿರುವ ಪ್ರೊಟೊಟೈಪ್‌ (ಮೂಲ ಮಾದರಿ) ಎರಡು ರೈಲುಗಳು ಪೂರೈಕೆಯಾಗಿ, ಮೂರನೇ ರೈಲಿಗಾಗಿ ಕಾಯಲಾಗುತ್ತಿತ್ತು. ಇದೀಗ ಮೂರೂ ರೈಲುಗಳು ಪೂರೈಕೆಯಾಗಿವೆ.

ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮುಂದಿನ ತಿಂಗಳು ಸೇವೆಗಳನ್ನು ಪ್ರಾರಂಭಿಸುವ ವಿಶ್ವಾಸದಲ್ಲಿದೆ.

ಆರಂಭದಲ್ಲಿ ಭಾಗಶಃ ಸೇವೆಗಳನ್ನು ಮಾತ್ರ ಒದಗಿಸಲಾಗುವುದು. ಮೂರು ರೈಲುಗಳು 30 ನಿಮಿಷಗಳ ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತವೆ. ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರದ ಟರ್ಮಿನಲ್ ನಿಲ್ದಾಣಗಳ ಜೊತೆಗೆ ಐದು ಮುಖ್ಯ ನಿಲ್ದಾಣಗಳಲ್ಲಿ ಸೇವೆಗಳು ಲಭ್ಯವಿರುತ್ತವೆ. ಹೆಚ್ಚುವರಿ ನಿಲ್ದಾಣಗಳು ಮತ್ತು ರೈಲುಗಳನ್ನು ಹಂತ ಹಂತವಾಗಿ ಪರಿಚಯಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂರನೇ ರೈಲಿನ ಕಾರ್ಯಾರಂಭನೊಂದಿಗೆ, ಬಿಎಂಆರ್‌ಸಿಎಲ್ ಹಳದಿ ಮಾರ್ಗವನ್ನು ಸಾಧ್ಯವಾದಷ್ಟು ಬೇಗ ಸೇವೆಗೆ ತರಲು ತೀವ್ರ ಪ್ರಯತ್ನಗಳನ್ನು ಮುಂದುವರೆಸುತ್ತಿದೆ. ಇದು ನಗರ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ ಮತ್ತು ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

Namma metro
ಬೆಂಗಳೂರು: BEML ನ 2,100ನೇ ಮೆಟ್ರೋ ಕೋಚ್‌ಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಚಾಲನೆ

ಐಪಿಎಲ್: ಮೆಟ್ರೋ ಸೇವೆ ವಿಸ್ತರಣೆ

ಟಾಟಾ ಐಪಿಎಲ್ ಟಿ 20 ಕ್ರಿಕೆಟ್‌ ಪಂದ್ಯ ಮೇ 17 ಮತ್ತು 23ರಂದು ಬೆಂಗಳೂರು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಅಂದು ನಮ್ಮ ಮೆಟ್ರೊ ಸಂಚಾರದ ಅವಧಿಯನ್ನು ರಾತ್ರಿ 1.35ರ ವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ನೇರಳೆ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್‌ಗಳಾದ ವೈಟ್‌ಫೀಲ್ಡ್ (ಕಾಡುಗೋಡಿ) ಚಲ್ಲಘಟ್ಟ ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೊ ನಿಲ್ದಾಣಗಳಿಂದ ರಾತ್ರಿ 1ಕ್ಕೆ ಕೊನೇ ಮೆಟ್ರೊ ಸಂಚರಿಸಲಿದೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳ ಕಡೆಗೆ ಕೊನೇ ಮೆಟ್ರೊ ರಾತ್ರಿ 1.35ಕ್ಕೆ ಹೊರಡಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com