
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಶನಿವಾರದ ಐಪಿಎಲ್ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳುವುದಾಗಿ ಸವಾಲು ಹಾಕಿದ್ದ ಇಬ್ಬರು ರೀಲ್ಸ್ ಸ್ಟಾರ್ಸ್ ಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರಲೇಔಟ್'ನ ಶರಣಬಸವ ಹಾಗೂ ಜೆಪಿ.ನಗರದ ಬಾಲಾಜಿ ಬಂಧಿತರಾಗಿದ್ದು, ಇನ್ ಸ್ಟಾ ಗ್ರಾಮ್ ನಲ್ಲಿ ಕೆಕೆಆರ್ ಮತ್ತು ಆರ್'ಸಿಬಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಳ್ಳುವುದಾಗಿ ಸವಾಲು ಹಾಕಿ ವಿಡಿಯೋ ಅಪ್ಲೋಡ್ ಮಾಡಿದ್ದರು.
ಈ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿದ ಕಬ್ಬನ್ ಪಾರ್ಕ್ ಪೊಲೀಸು, ರೀಲ್ಸ್ ಸ್ಟಾರ್ ಗಳನ್ನು ಶನಿವಾರ ಠಾಣೆಗೆ ಕರೆತಂದಿದ್ದಾರೆ. ಈ ವೇಳೆ ಇಬ್ಬರೂ ತಾವು ತಪ್ಪು ಮಾಡಿರುವುದಾಗಿ ಇಬ್ಬರೂ ಕ್ಷಮೆ ಕೋರಿದ್ದಾರೆ. ಆದಾಗ್ಯೂ, ಮುನ್ನೆಚ್ಚರಿಕೆ ಆಧಾರದ ಮೇಲೆ, ಪೊಲೀಸರು ಪಂದ್ಯ ಮುಗಿಯುವವರೆಗೆ ಇಬ್ಬರನ್ನು ಠಾಣೆಯಲ್ಲೇ ಇರಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
Advertisement