Wheelchair ನಲ್ಲಾದರೂ ಸಂಸತ್ತಿಗೆ ಹೋಗಿ ರಾಜ್ಯದ ಪರ ಧ್ವನಿ ಎತ್ತುವೆ: ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ

ಸಮಸ್ಯೆಗಳು ಎದುರಾದಾಗ ರಾಜ್ಯದ ಪರವಾಗಿ ಮಾತನಾಡಲು ವ್ಹೀಲ್ ಚೇರ್ ನಲ್ಲಾದರೂ ಹೋಗಿ ಸಂಸತ್ತಿನಲ್ಲಿ ಮಾತನಾಡುತ್ತೇನೆ. ಹಿಂಜರಿಯುವುದಿಲ್ಲ.
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ
Updated on

ಬೆಂಗಳೂರು: ಭಾನುವಾರ 93 ವರ್ಷನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ವಿವಿಧ ರಾಜಕೀಯ ಮುಖಂಡರು, ಗಣ್ಯರು ಶುಭಾಶಯಗಳು ಮತ್ತು ಗೌರವಗಳನ್ನು ಸಲ್ಲಿಸಿದರು, ಈ ವೇಳೆ ದೇವೇಗೌಡ ಅವರ ಸಾರ್ವಜನಿಕ ಸೇವೆ, ಸರಳತೆ ಮತ್ತು ಪ್ರಜಾಪ್ರಭುತ್ವ ಆದರ್ಶಗಳಿಗಾಗಿ ಇರುವ ಅವರ ಸಮರ್ಪಣೆಯನ್ನು ಶ್ಲಾಘಿಸಿದರು.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ದೇವೇಗೌಡ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಗೌಡರು ತಮ್ಮ ದೀರ್ಘಕಾಲದ ಸಹಾಯಕ ತಿಪ್ಪೇಸ್ವಾಮಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ನಾಯಕರೊಂದಿಗೆ ದೇವೇಗೌಡ ಅವರು ಹುಟ್ಟಹಬ್ಬವನ್ನು ಆಚರಿಸಿದರು.

ಈ ವೇಳೆ ಪಕ್ಷದ ಸದಸ್ಯರು ಮತ್ತು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ದೇವೇಗೌಡ ಅವರು, ಸಮಸ್ಯೆಗಳು ಎದುರಾದಾಗ ರಾಜ್ಯದ ಪರವಾಗಿ ಮಾತನಾಡಲು ವ್ಹೀಲ್ ಚೇರ್ ನಲ್ಲಾದರೂ ಹೋಗಿ ಸಂಸತ್ತಿನಲ್ಲಿ ಮಾತನಾಡುತ್ತೇನೆ. ಹಿಂಜರಿಯುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಜೆಡಿಎಸ್‌ಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಪಕ್ಷಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಕೊಡುಗೆ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದರು.

ಈ ನಡುವೆ ದೇವೇಗೌಡ ಅವರಿಗೆ ಪ್ರಧಾನಿ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ನಾಯಕರು ಮಾಜಿ ಆತ್ಮೀಯ ಶುಭಾಶಯಗಳನ್ನು ತಿಳಿಸಿದರು.

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವೆಗಾಗಿ ಹೆಚ್‌ಡಿಡಿ ಎಲ್ಲೆಡೆ ಗೌರವಾನ್ವಿತರಾಗಿದ್ದಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ.

ಎಚ್‌.ಡಿ.ದೇವೇಗೌಡ
ಇಂದು ಹೆಚ್.ಡಿ ದೇವೇಗೌಡ ಹುಟ್ಟುಹಬ್ಬ: ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ!

ಭಾರತದ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಅವರು ಕೂಡ ದೇವೇಗೌಡರಿಗೆ ಶುಭಾಶಯ ಕೋರಿ, ದೇವೇಗೌಡ ಅವರನ್ನು "ಮಣ್ಣಿನ ಮಗ, ನಿಜವಾದ ಹೋರಾಟಗಾರ" ಎಂದು ಶ್ಲಾಘಿಸಿದರು.

ಭಾರತದ 11 ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮತ್ತು ಕರ್ನಾಟಕದ ಮುಖ್ಯಮಂತ್ರಿಯೂ ಆಗಿದ್ದ ದೇವೇಗೌಡರು, ಭಾರತೀಯ ರಾಜಕೀಯಕ್ಕೆ ನೀಡಿದ ಕೊಡುಗೆಗಳಿಗೆ, ವಿಶೇಷವಾಗಿ ಗ್ರಾಮೀಣ ಸಮಸ್ಯೆಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಮತ್ತು ತಮ್ಮ ವೃತ್ತಿಜೀವನದುದ್ದಕ್ಕೂ ಬಲವಾದ ತಳಮಟ್ಟದ ಸಂಪರ್ಕವನ್ನು ಕಾಯ್ದುಕೊಂಡಿದ್ದಕ್ಕಾಗಿ ಆಳವಾದ ಗೌರವವನ್ನು ಹೊಂದಿದ್ದಾರೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com