
ಬೆಂಗಳೂರು: ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯ ನಂತರ, ಕೆ.ಆರ್. ಮಾರುಕಟ್ಟೆಯ ನೆಲಮಾಳಿಗೆಯಲ್ಲಿ ನಿಲ್ಲಿಸಿದ್ದ 100 ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಮುಳುಗಡೆಗೊಂಡಿವೆ.
ಈ ನಡುವೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ವಾಹನಗಳನ್ನು ತೆರವುಗೊಳಿಸಲು ಮುಂದಾದರು. ಪಂಪ್ ಗಳ ಮೂಲಕ ನೀರನ್ನು ಹೊರ ತೆಗೆಯುವ ಕಾರ್ಯ ಪ್ರಾರಂಭಿಸಿದರು.
ವಾಹನದ ಎಂಜಿನ್‌ಗಳಿಗೆ ನೀರು ನುಗ್ಗಿದ್ದು, ಸವಾರರು ವಾಹನಗಳ ಸ್ಟಾರ್ಟ್ ಮಾಡಲು ಕಷ್ಟಪಡುವಂತಾಗಿತ್ತು ಎಂದು ಕೆ.ಆರ್. ಮಾರುಕಟ್ಟೆಯ ಸಾಗರ್ ವೆಲ್‌ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಆಸಿಫ್ ಪಾಷಾ ಅವರು ಹೇಳಿದ್ದಾರೆ.
ಈ ನಡುವೆ ಪ್ರವಾಹದಂತಹ ಪರಿಸ್ಥಿತಿಯಿಂದಾಗಿ ಕೆಲವು ವಸ್ತುಗಳು ಮಾರಾಟವಾಗದೆ ಉಳಿದಿದ್ದರಿಂದ ಮತ್ತು ಗ್ರಾಹಕರು ಖರೀದಿಯಿಂದ ಹಿಂದೆ ಸರಿದಿದ್ದರಿಂದ ತರಕಾರಿ ಮತ್ತು ಹಣ್ಣು ಮಾರಾಟಗಾರರು ಮಳೆಗೆ ಶಪಿಸಿದರು.
Advertisement